ಮಹಿಳೆಯನ್ನು ಕೊಂದು ಮೃತದೇಹವನ್ನು ಆರು ತಿಂಗಳು ಫ್ರಿಜ್‌ನಲ್ಲಿಟ್ಟ ಕೊಲೆಗಾರ ವಿದ್ಯುತ್ ಬಿಲ್‌ನಿಂದ ಸಿಕ್ಕಿಬಿದ್ದ
Saturday, January 11, 2025
ಮಧ್ಯಪ್ರದೇಶ: ತನ್ನನ್ನು ಮದುವೆಯಾಗುವಂತೆ ಕಿರಿಕಿರಿ ಮಾಡುತ್ತಿದ್ದ ಲಿವ್ ಇನ್ ರಿಲೇಷನ್ಶಿಪ್‌ನದಲ್ಲಿದ್ದ ಮಹಿಳೆಯನ್ನು ಕೊಲೆಗೈದು ಮೃತದೇಹವನ್ನು ಸುಮಾರು 6 ತಿಂಗಳ ಕಾಲ ಫ್ರಿಡ್ಜ್ ನಲ್ಲಿಟ್ಟ ಪ್ರಿಯಕರ ವಿದ್ಯುತ್ ಬಿಲ್‌ನಿಂದ ಸಿಕ್ಕಿ ಬಿದ್ದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ತಿರೇಂದ್ರ ಎಂಬ ಮಧ್ಯಪ್ರದೇಶದ ಇಂದೋರ್ ನಿವಾಸಿ ಕಳೆದ 6 ತಿಂಗಳಿಂದ ದುಬೈನಲ್ಲಿದ್ದರು. ಆದ್ದರಿಂದ ತಮ್ಮ ಮನೆಯನ್ನು ಬಾಡಿಗೆ ನೀಡಿದ್ದರು. ಹಾಗಾಗಿ ಕಳೆದ ಜುಲೈನಲ್ಲಿ ಬಲ್ವಿರ್ ರಜಪೂತ್ ಎಂಬವರು ಕೆಳ ಮಹಡಿಗೆ ತೆರಳಿದ್ದರು. ಆದರೆ ಅವರ ಮನೆಯಲ್ಲಿದ್ದ ಎರಡು ಕೊಠಡಿಗಳನ್ನು ಅವರಿಗೆ ಬಳಸಲು ಸಾಧ್ಯವಾಗುತ್ತಿರಲ್ಲ. ಕಾರಣ ಅವರಿಗಿಂತ ಮೊದಲು ಆ ಮನೆಯಲ್ಲಿದ್ದ ಪಾಟಿದಾರ್ ಎಂಬಾತ ಆ ಕೊಠಡಿಗಳಿಗೆ ಬೀಗ ಹಾಕಿದ್ದನು.
ಪಾಟಿದಾರ್ ಕಳೆದ ಜೂನ್‌ನಲ್ಲಿ ಫ್ರಿಡ್ಜ್ ಸೇರಿದಂತೆ ಕೆಲವು ವಸ್ತುಗಳನ್ನು ಅಲ್ಲಿಯೇ ಬಿಟ್ಟು ಮನೆ ಖಾಲಿ ಮಾಡಿದ್ದನು. ಆದಷ್ಟು ಶೀಘ್ರ ಬಂದು ಸಾಮಾನು ತೆಗೆದುಕೊಂಡು ಹೋಗುತ್ತೇನೆ ಎಂದು ಮನೆಯ ಯಜಮಾನನಿಗೆ ಹೇಳಿದ್ದ. ಆದರೆ ಈಗಷ್ಟೇ ಮನೆಗೆ ಆಗಮಿಸಿದ ಬಲ್ವಿರ್ ಆ ಎರಡು ಕೊಠಡಿಗಳನ್ನು ಬಳಸಲು ಮನೆಯ ಮಾಲೀಕರಿಂದ ಅನುಮತಿ ಪಡೆದಿದ್ದಾರೆ. ಆತ ಕೊಠಡಿಯ ಬಾಗಿಲು ತೆರೆದಾಗ ಫ್ರಿಜ್ ರನ್‌ನಲ್ಲಿತ್ತು.
ಈ ಹಿಂದೆ ಮನೆಯಲ್ಲಿದ್ದವರು ಬೇಜವಾಬ್ದಾರಿಯಿಂದ ಕೂಡಿದ್ದು, ಅದಕ್ಕಾಗಿಯೇ ಹೆಚ್ಚಿನ ವಿದ್ಯುತ್ ಬಿಲ್ ಬಂದಿದೆ ಎಂದು ಭಾವಿಸಿದ್ದರು. ಬಳಿಕ ಅವರು ಫ್ರಿಡ್ಜ್ ಆಫ್ ಮಾಡಿ ಬೆಳಗ್ಗೆ ಬಂದು ಕೊಠಡಿ ಕ್ಲೀನ್ ಮಾಡುತ್ತೇನೆ ಎಂದು ಎನಿಸಿದ್ದರು. ಆದರೆ ಮರುದಿನ ಬೆಳಗ್ಗೆ ಆ ಭಾಗದಲ್ಲಿ ತೀವ್ರ ದುರ್ವಾಸನೆ ಬರಲಾರಂಭಿಸಿತು. ಆದ್ದರಿಂದ
ಅವದಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಫ್ರಿಡ್ಜ್ ತೆರೆಯುವಾಗ ಬೆಡ್ ಶೀಟ್‌ನಲ್ಲಿ ಸುತ್ತಿದ್ದ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕೆಳಗೆ ಬಿದ್ದಿದೆ. ಈ ಬಗ್ಗೆ ಪೊಲೀಸರು ಆ ಭಾಗದ ಜನರಲ್ಲಿ ವಿಚಾರಿಸಿದಾಗ ಪಾಟಿದಾರ್ ಜತೆ ವಾಸವಿದ್ದ ಮಹಿಳೆಯನ್ನು ನೋಡಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಪಾಟಿದಾರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಯುವತಿ ತನಗೆ ಮದುವೆಯಾಗುವಂತೆ ತೊಂದರೆ ನೀಡುತ್ತಿದ್ದ ಕಾರಣ ಆಕೆಯನ್ನು ಕೊಂದು ಸ್ನೇಹಿತೆಯ ಸಹಾಯದಿಂದ ಫ್ರಿಡ್ಜ್ ನಲ್ಲಿಟ್ಟು ಬೀಗ ಹಾಕಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.