-->
ಫೆ.14 : ಪೆರ್ವಾಜೆ  ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ 12ನೇ ಪ್ರತಿಷ್ಠಾ ವರ್ಧಂತ್ಯುತ್ಸವ

ಫೆ.14 : ಪೆರ್ವಾಜೆ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ 12ನೇ ಪ್ರತಿಷ್ಠಾ ವರ್ಧಂತ್ಯುತ್ಸವ






ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪೆರ್ವಾಜೆ ಶಾಸ್ತಾವಿನ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ 12ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಫೆಬ್ರವರಿ 14 ರಂದು   ಬೆಳಿಗ್ಗೆ 6-00ರಿಂದ ಸಂಜೆ 8-00ರ ವರೆಗೆ ನಡೆಯಲಿದೆ.




ಬೆಳಿಗ್ಗೆ ಗಂಟೆ 6-15ಕ್ಕೆ ದ್ವಾರ ಪೂಜೆ, ಬೆಳಿಗ್ಗೆ ಗಂಟೆ 6-45ಕ್ಕೆ  ಪ್ರಾತಃ ಪೂಜೆ ಬೆಳಿಗ್ಗೆ ಗಂಟೆ 9 ಕ್ಕೆ ಶ್ರೀ ಬಾಬಾರವರಿಗೆ ಕಲಶಾಭಿಷೇಕ, ಮಧ್ಯಾಹ್ನ ಗಂಟೆ 12-45ಕ್ಕೆ  ಮಹಾಪೂಜೆ ನಂತರ ಅನ್ನ ಸಂತರ್ಪಣೆ, ಸಂಜೆ ಗಂಟೆ 5ಕ್ಕೆ  ಸೇವಾ ಕಾರ್ಯಕ್ರಮ, ಭಜನಾ ಕಾರ್ಯಕ್ರಮಗಳು ರಾತ್ರಿ ಗಂಟೆ 8 ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ.


ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಸಾಯಿಬಾಬಾರವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು  ಗೌರವ ಅಧ್ಯಕ್ಷ ಕೆ. ಕಮಲಾಕ್ಷ ಕಾಮತ್, ಆಡಳಿತ ಮೊಕ್ತೆಸರರಾದ  ಶ್ರೀಮತಿ ಲಲಿತಾ ಸುವರ್ಣ ಅಭಿಷೇಕ್ ಸುವರ್ಣ, ಪ್ರಧಾನ ಅರ್ಚಕ ಹಾಗೂ ವ್ಯವಸ್ಥಾಪಕರಾದ  ಲಕ್ಷ್ಮೀನಾರಾಯಣ ಭಟ್, ಪ್ರಪುಲ್ಲ ಶೆಟ್ಟಿ ವಿನಂತಿಸಿದ್ದಾರೆ.



Ads on article

Advertise in articles 1

advertising articles 2

Advertise under the article