-->
ವಿಶ್ವದ ಹ್ಯಾಂಡ್‌ಸಮ್ ಮ್ಯಾನ್ ಪಟ್ಟಿಯಲ್ಲಿ ಟಾಪ್ 5ನಲ್ಲಿ ಹೃತಿಕ್ ರೋಷನ್- ಲಿಸ್ಟ್‌ನಲ್ಲಿ ಸ್ಥಾನ ಪಡೆದವರು ಯಾರೆಲ್ಲಾ ಗೊತ್ತಾ?

ವಿಶ್ವದ ಹ್ಯಾಂಡ್‌ಸಮ್ ಮ್ಯಾನ್ ಪಟ್ಟಿಯಲ್ಲಿ ಟಾಪ್ 5ನಲ್ಲಿ ಹೃತಿಕ್ ರೋಷನ್- ಲಿಸ್ಟ್‌ನಲ್ಲಿ ಸ್ಥಾನ ಪಡೆದವರು ಯಾರೆಲ್ಲಾ ಗೊತ್ತಾ?


ನವದೆಹಲಿ: ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ಇಂಡಿಯಾ ಹೀಗೆ ಸುಂದರಿಯರಿಗೆ ವೈವಿಧ್ಯಮಯ ಸ್ಪರ್ಧಾ ವೇದಿಕೆ ಇರುವಂತೆ ಪುರುಷರಿಗೂ ಇದೆ. ಈ ಬಾರಿಯ ವಿಶ್ವದ ಅತ್ಯಂತ ಸುಂದರ ಪುರುಷ ಅಥವಾ ಮೋಸ್ಟ್ ಹ್ಯಾಂಡ್ಸಮ್ ಮ್ಯಾನ್ ಹಣೆಪಟ್ಟಿ ಯಾರಿಗೆ ಸಿಕ್ಕಿದೆ ಎಂದು ತಿಳಿಯಬೇಕೇ? ಹಾಗಾದರೇ ಇದೀಗ ವಿಶ್ವದ ಮೋಸ್ಟ್ ಹ್ಯಾಂಡ್ಸಮ್ ಪುರುಷರ ಲಿಸ್ಟ್ ಬಿಡುಗಡೆಯಾಗಿದೆ.

ಈ ಬಾರಿಯ ಪಟ್ಟಿಯಲ್ಲಿ ಬಾಲಿವುಡ್ ಹೀರೋ ಹೃತಿಕ್ ರೋಷನ್ ಕೂಡಾ ಸ್ಥಾನ ಪಡೆದಿದ್ದಾರೆ. ಹೌದು, ಟಾಪ್ 5ನಲ್ಲಿ ಹೃತಿಕ್ ರೋಷನ್ ಸ್ಥಾನ ಪಡೆದಿದ್ದಾರೆ. ವಿಶೇಷ ಅಂದರೆ ದಕ್ಷಿಣ ಕೊರಿಯಾದ ಗಾಯಕ ಹಾಗೂ ಸಾಹಿತ್ಯಕಾರ ಬಿಟಿಎಸ್ ವಿ.ಕಿಮ್ ತಹ್ಯಂಗ್(ಬಿಟಿಎಸ್ ವಿ) ವಿಶ್ವದ ಸುಂದರ ಪುರುಷರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಬಾಲಿವುಡ್ ಸೂಪರ್ ಹೀರೋ ಹೃತಿಕ್ ರೋಶನ್ 5ನೇ ಸ್ಥಾನದಲ್ಲಿದ್ದಾರೆ. ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಅನ್ನುವ ಹೆಗ್ಗಳಿಕೆಗೆ ಹೃತಿಕ್ ರೋಶನ್ ಪಾತ್ರರಾಗಿದ್ದಾರೆ. ವಯಸ್ಸು 51 ಆದರೂ ಹೃತಿಕ್ ಈಗಲೂ ಕಟ್ಟುಮಸ್ತಾದ ದೇಹ, ಆಕರ್ಷಕ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಸಾಹಸಮಯ ಪಾತ್ರಗಳ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಹೃತಿಕ್ ರೋಶನ್ ಇದೀಗ ವಿಶ್ವದ ಅತ್ಯಂತ ಸುಂದರ ಪರುಷರ ಪಟ್ಟಿಯಲ್ಲಿ ಸ್ಥಾನ ಪಡೆದ 5ನೇ ಹ್ಯಾಂಡ್ಸಮ್.  ಕಹೋ ನಾ ಪ್ಯಾರ್ ಹೇ ಚಿತ್ರದ ಮೂಲಕ ಅದ್ಧೂರಿಯಾಗಿ ಬಾಲಿವುಡ್‌ಗೆ ಎಂಟ್ರಿಕೊಟ್ಟ ಹೃತಿಕ್ ರೋಶನ್ ಯುವ ಸಮೂಹದ ನೆಚ್ಚಿನ ನಟನಾಗಿ ಹೊರಹೊಮ್ಮಿದ್ದಾರೆ. ಬಳಿಕ ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಹೃತಿಕ್ ಜನಪ್ರಿಯತೆ ಹಾಗೇ ಇದೆ. 

ವಿಶ್ವದ ಟಾಪ್ 10 ಸುಂದರ ಪುರುಷರು
ಬಿಟಿಎಸ್ ವಿ(ಕಿಮ್ ತಹ್ಯಂಗ್)
ಬ್ರಾಡ್ ಪಿಟ್
ರೊಬರ್ಟ್ ಪ್ಯಾಟಿನ್ಸನ್
ನೊಹಾ ಮಿಲ್ಸ್
ಹೃತಿಕ್ ರೋಶನ್
ಜಸ್ಟಿನ್ ಟ್ರುಡು
ಕ್ರಿಸ್ ಇವಾನ್ಸ್
ಹೆನ್ರಿ ಕ್ಯಾವಿಲ್
ಟಾಮ್ ಕ್ರೂಸ್
ಬ್ರಾಡ್ಲಿ ಕೂಪರ್


ಹಾಲಿವುಡ್ ತಾರೆಗಳಾದ ಬ್ರಾಡ್ ಪಿಟ್, ರಾಬರ್ಟ್ ಪ್ಯಾಟಿನ್ಸನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ನೋವಾ ಮಿಲ್ಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೆನಡಾದ ಮಾಡೆಲ್ ಮತ್ತು ನಟ. ಜಸ್ಟಿನ್ ಟ್ರೂಡೊ ಆರನೇ ಸ್ಥಾನದಲ್ಲಿದ್ದಾರೆ.
ಕ್ರಿಸ್ ಇವಾನ್ಸ್, ಹೆನ್ರಿ ಕ್ಯಾವಿಲ್, ಟಾಮ್ ಕ್ರೂಸ್ ಇತರ ಸ್ಥಾನಗಳಲ್ಲಿದ್ದಾರೆ. ಆಸ್ಕರ್ ನಾಮನಿರ್ದೇಶನಗೊಂಡ ನಟ ಬ್ರಾಡ್ಲಿ ಕೂಪರ್ ಹತ್ತನೇ ಸ್ಥಾನದಲ್ಲಿದ್ದಾರೆ. 


Ads on article

Advertise in articles 1

advertising articles 2

Advertise under the article