-->
ಆಟವಾಡುತ್ತ ಬೋರ್‌ವೆಲ್‌ಗೆ 5ರ ಬಾಲಕ- ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಆಟವಾಡುತ್ತ ಬೋರ್‌ವೆಲ್‌ಗೆ 5ರ ಬಾಲಕ- ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಜೈಪುರ: ಹೊಲದಲ್ಲಿ ಆಟವಾಡುತ್ತಿದ್ದಾಗ 5ರ ಬಾಲಕನೋರ್ವ 32ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿರುವ ಘಟನೆ ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ನಡೆದಿದೆ. ಕೊಳವೆ ಬಾವಿಗೆ ಬಿದ್ದರುವ ಬಾಲಕನನ್ನು ಪ್ರಹ್ಲಾದ್ ಎಂದು ಗುರುತಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಘಟನೆ ಕುರಿತು ಮಾತನಾಡಿರುವ ಡಿವೈಎಸ್ಪಿ ಜೈಪ್ರಕಾಶ್ ಅಟಲ್ ಅವರು, ಬಾಲಕನ ಪೋಷಕರು ಹೊಲದ ಮತ್ತೊಂದು ಬದಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಆತ ಬೋರ್‌ವೆಲ್‌ ಬಳಿಯ ಕಲ್ಲು ಚಪ್ಪಡಿಯ ಮೇಲೆ ಕುಳಿತುಕೊಂಡು ಅದರಿಂದ ಜಾರಿ ಬಿದ್ದಿದ್ದಾನೆ. ಪ್ರಹ್ಲಾದ್ ಪ್ರಸ್ತುತ 32 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ.

ಎನ್‌ಡಿಆರ್‌ಎ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಕ್ಷಣಾ ಕಾರ್ಯದಲ್ಲಿ ತೊಡಗಿವೆ. ಸ್ಥಳೀಯ ಯಂತ್ರಗಳನ್ನು ಬಳಸಿಕೊಂಡು ಬಾಲಕನನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ. ಎರಡು ದಿನಗಳ ಹಿಂದೆ ಕೊಳವೆ ಬಾವಿಯನ್ನು ಅಗೆಯಲಾಗಿತ್ತು. ಅದರಿಂದ ನೀರು ಹೊರಹರಿವು ಇರಲಿಲ್ಲ ಮತ್ತು ಅದನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಡಿವೈಎಸ್ಪಿ ಜೈಪ್ರಕಾಶ್ ಅಟಲ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article