ಉಚಿತ ಕಾಂಡೊಮ್ ವಿತರಣೆಗೆ 50ಡಾಲರ್ ಮಿಲಿಯನ್ ನೆರವು ನಿಲ್ಲಿಸಿದ ಟ್ರಂಪ್ ಸರಕಾರ
ವಾಷಿಂಗ್ಟನ್: ಭಾರತದಲ್ಲಿ ಕಾಂಡೋಮ್ ಅನ್ನು ಉಚಿತವಾಗಿ ವಿತರಿಸಲಾಗುತ್ತದೆ. ಅದೇ ರೀತಿ ಅಮೆರಿಕಾವು ಉಚಿತವಾಗಿ ಕಾಂಡೋಮ್ ನೀಡುತ್ತಿದೆ. ಆದರೆ ಅಮೆರಿಕಾ ತನ್ನ ದೇಶದಲ್ಲಿ ಮಾತ್ರವಲ್ಲ, ಆರ್ಥಿಕವಾಗಿ ಸಶಕ್ತವಲ್ಲದ ದೇಶಗಳಿಗೂ ಕಾಂಡೋಮ್ ವಿತರಿಸಲು ಕೋಟಿ ಕೋಟಿ ಹಣದ ನೆರವು ನೀಡುತ್ತಿದೆ. ಈ ಪೈಕಿ ಪ್ಯಾಲೆಸ್ತಿನ್‌ನ ಗಾಜಾಪಟ್ಟಿಯಲ್ಲಿ ಅಮೆರಿಕ ಉಚಿತವಾಗಿ ಕಾಂಡೋಮ್ ವಿತರಿಸುತ್ತಿದೆ. ಆದರೆ ಜೋ ಬೈಡೆನ್ ಸರಕಾರ ನೀಡುತ್ತಿದ್ದ 50 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಟ್ರಂಪ್ ಸ್ಥಗಿತಗೊಳಿಸಿದ್ದಾರೆ. ಗಾಜಾ ಪಟ್ಟಿಗೆ ಅಮೆರಿಕ ಕಾಂಡೋಮ್ ವಿತರಿಸಲು ಆರ್ಥಿಕ ನೆರವು ನೀಡುವುದಿಲ್ಲ ಎಂದಿದೆ.
ಈಗಾಗಲೇ ಡೋನಾಲ್ಡ್ ಟ್ರಂಪ್ ಸರ್ಕಾರ ಹಲವು ದೇಶಗಳಿಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸಿದೆ. ತನ್ನ ದೇಶದ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಗಾಜಾಪಟ್ಟಿಗೆ ಕಾಂಡೋಮ್ ವಿತರಿಸಲು ನೀಡುತ್ತಿದ್ದ ಆರ್ಥಿಕ ನೆರವನ್ನು ಅಮೆರಿಕ ನಿಲ್ಲಿಸಿರುವುದರ ಹಿಂದೆ ಆರ್ಥಿಕ ಹೊರೆ ಕಾರಣವಲ್ಲ. ಇದಕ್ಕೆ ಮುಖ್ಯ ಕಾರಣ ಹಮಾಸ್.
ಅಮೆರಿಕದ ಡೋನಾಲ್ಡ್ ಟ್ರಂಪ್ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಶೀಯೆನ್ಸಿ(DOGE) ತಂಡದ ಮುಖ್ಯಸ್ಥ ಎಲಾನ್ ಮಸ್ಕ್ ನೀಡಿದ ವರದಿ ಆಧರಿಸಿ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಗಾಜಾ ಪಟ್ಟಿ ಜನತೆಗೆ ಇನ್ಮುಂದೆ ಉಚಿತ ಕಾಂಡೋಮ್ ಸಿಗುವುದಿಲ್ಲ. ಇತ್ತೀಚೆಗೆ ಎಲಾನ್ ಮಸ್ಕ್ ನೇತೃತ್ವದ ತಂಡ ಮಹತ್ವದ ವರದಿ ನೀಡಿದೆ. ಈ ಪೈಕಿ ಜೋ ಬೈಡೆನ್ ಸರ್ಕಾರ ಗಾಜಾ ಪಟ್ಟಿಗೆ ಕಾಂಡೋಮ್ ವಿತರಿಸಲು 50 ಮಿಲಿಯನ್ ಅಮೆರಿಕ ಡಾಲರ್ ಮೊತ್ತದ ನೆರವು ನೀಡುತ್ತಿತ್ತು. ಆದರೆ ಈ ಕಾಂಡೋಮ್‌ಗಳು ಗಾಜಾ ಪಟ್ಟಿ ಜನರಿಗೆ ಲಭ್ಯವಾಗುತ್ತಿರಲಿಲ್ಲ. ಇದನ್ನು ಉಗ್ರ ಗುಂಪುಗಳು, ಶಸಸ್ತ್ರ ಪಡೆಗಳು ಕೈವಶ ಮಾಡಿಕೊಳ್ಳುತ್ತಿತ್ತು ಎಂದು ವರದಿ ನೀಡಿದೆ.
ಕಾಂಡೋಮ್‌ಗೆ ನೀಡುತ್ತಿರುವ ಹಣ ಸಮಪರ್ಕವಾಗಿ ಬಳಕೆಯಾಗುತ್ತಿಲ್ಲ. ಇದನ್ನು ಹಮಾಸ್ ಉಗ್ರರು ಬಳಸುತ್ತಿದ್ದಾರೆ. ಇನ್ನು ಉಚಿತವಾಗಿ ವಿತರಿಸುವ ಕಾಂಡೋಮ್ ಕೂಡ ದಾಳಿಗೆ ಬಳಸಲಾಗುತ್ತಿದೆ. ಹಮಾಸ್ ಉಗ್ರರು ಲಾರ್ಜ್ ಕಾಂಡೋಮ್‌ಗಳನ್ನು ಬಳಸುತ್ತಿದ್ದಾರೆ. ಇದು ದಾಳಿಗೆ ಬಳಕೆ ಮಾಡುತ್ತಿದ್ದಾರೆ. ಅಮೆರಿಕ ಕೊಟ್ಟ ಕಾಂಡೋಮ್‌ನ್ನು ಇಸ್ರೇಲ್ ವಿರುದ್ಧ ದಾಳಿಗೆ ಬಳಸುತ್ತಿರುವುದು ಸರಿಯಲ್ಲ ಎಂದು DOGE ವರದಿ ನೀಡಿದೆ.ಕಾಂಡೋಮ್ ಹೆಸರಿನಲ್ಲಿ ಗಾಜಾ ಪಟ್ಟಿಯಲ್ಲಿ ಅವ್ಯವಹಾರಗಳು ನಡೆದಿದೆ.
ಎಲಾನ್ ಮಸ್ಕ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಹಮಾಸ್ ಉಗ್ರರು ಕಾಂಡೋಮ್‌ಗಳನ್ನು ಶಸ್ತ್ರಾಸ್ತ್ರದಲ್ಲಿ ಬಳಸುತ್ತಿದ್ದಾರೆ. ಶಸ್ತ್ರಗಳ ಶಕ್ತಿ ಸಾಮರ್ಥ್ಯ ವೃದ್ಧಿಗೆ ಕಾಂಡೋಮ್ ಬಳಸಲಾಗುತ್ತಿದೆ. ಹಮಾಸ್ ಉಗ್ರರು ಮ್ಯಾಗ್ನಮ್ ಕಾಂಡೋಮ್ ಬಳಸುತ್ತಿದ್ದಾರೆ. ಈ ಬ್ರ್ಯಾಂಡ್ ಎಕ್ಸ್‌ಟ್ರಾ ಲಾರ್ಜ್ ಕಾಂಡೋಮ್ ಬಳಸುತ್ತಿದ್ದಾರೆ. ಯಾಕೆ ಈ ರೀತಿ ಎಂದು ಮಸ್ಕ್ ಪ್ರಶ್ನಿಸಿದ್ದಾರೆ. ಅಮೆರಿಕ ತೆರಿಗೆದಾರರ ಹಣವನ್ನು ಗಾಜಾದಲ್ಲಿ ಕಾಂಡೋಮ್ ವಿತರಿಸಲು ಬಳಸಬೇಕೇ? ಈ ಕಾಂಡೋಮ್‌ಗಳನ್ನು ಉಗ್ರರು ತಮ್ಮ ಶಸ್ತ್ರಾಸ್ತ್ರಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಅಮೆರಿಕದ ಪ್ರತಿಯೊಬ್ಬನಿಗೂ ಮಾಡಿದ ಮೋಸವಾಗಿದೆ. ಇಂತಹ ಪ್ರಕ್ರಿಯೆಗೆ ಅಮೆರಿಕ ನಾಗರೀಕ ಜೊತೆಗೆ ನಿಲ್ಲುವುದಿಲ್ಲ. ಹೀಗಾಗಿ ಗಾಜಾಗೆ ಕಾಂಡೋಮ್ ಆರ್ಥಿಕ ನೆರವು ನಿಲ್ಲಿಸಿದ್ದು ಸರಿ ಅನ್ನೋ ಮಾತುಗಳು ಕೇಳಿಬಂದಿದೆ.
50 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಗಾಜಾ ಪಟ್ಟಿಗಾಗಿ ಅಮೆರಿಕ ಖರ್ಚು ಮಾಡುತ್ತಿದೆ ಅನ್ನೋ ವರದಿಬೆನ್ನಲ್ಲೇ ಇದು ಸತ್ಯಕ್ಕೆ ದೂರ ಅನ್ನೋ ಮಾತಗಳು ಕೇಳಿಬಂದಿದೆ. ಗಾಜಾ ಪಟ್ಟಿಯಲ್ಲರುವ ಜನಸಂಖ್ಯೆ ಕೇವಲ 2 ಮಿಲಿಯನ್. ಹೀಗಾಗಿ ಕಾಂಡೋಮ್‌ಗೆ 50 ಮಿಲಿಯನ್ ಖರ್ಚು ಮಾಡಲು ಸಾಧ್ಯವೇ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.