-->
ದುರುದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಲ್ಲಿ ವಾಟ್ಸ್‌ಆ್ಯಪ್ ರದ್ದಾಗುತ್ತೆ ಹುಷಾರ್: 84 ಲಕ್ಷ ಭಾರತೀಯ ಖಾತೆಗಳು ಒಂದೇ ತಿಂಗಳಲ್ಲಿ ನಿಷೇಧ

ದುರುದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಲ್ಲಿ ವಾಟ್ಸ್‌ಆ್ಯಪ್ ರದ್ದಾಗುತ್ತೆ ಹುಷಾರ್: 84 ಲಕ್ಷ ಭಾರತೀಯ ಖಾತೆಗಳು ಒಂದೇ ತಿಂಗಳಲ್ಲಿ ನಿಷೇಧ


ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಆತಂಕಕಾರಿ ಬೆಳವಣಿಗೆಗಳೂ ಹೆಚ್ಚುತ್ತಿದೆ. ಒಳ್ಳೆಯ ಉದ್ದೇಶಕ್ಕೆ, ಸಂವಹಕ್ಕಾಗಿ ಇರುವ ಜಾಲತಾಣಗಳು ಇಂದು ಅಪಾಯಕಾರಿ ಮಟ್ಟವನ್ನು ತಲುಪಿಬಿಟ್ಟಿದೆ. ಅಪರಾಧಿ ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಹಿಂಸಾಚಾರಗಳೂ ಹೆಚ್ಚುತ್ತಾ ಸಾಗಿವೆ.

ಈಗಾಗಲೇ ಹಲವಾರು ರೀತಿಯಲ್ಲಿ ವಾಟ್ಸ್​ಆ್ಯಪ್​ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದರೂ ಇವುಗಳು ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಆದ್ದರಿಂದ, ವಾಟ್ಸ್​ಆ್ಯಪ್​ ಮಾತೃಸಂಸ್ಥೆ ಮೆಟಾ ಈಗ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು, 84 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ. 10,707 ಬಳಕೆದಾರರಿಂದ ದೂರುಗಳು ಬಂದ ಬಳಿಕ, ಶೇಕಡಾ 93 ರಷ್ಟು ದೂರುಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪೆನಿ ಹೇಳಿದೆ.


ಅಂದಹಾಗೆ, ಇಂಥದ್ದೊಂದು ಕ್ರಮ ತೆಗೆದುಕೊಳ್ಳಲು ಕಾರಣ, ವಾಟ್ಸ್​​ಆ್ಯಪ್​ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು. ವಂಚನೆಯ ಚಟುವಟಿಕೆಗಳಿಗೆ ಅವುಗಳನ್ನು ಬಳಸುತ್ತಿದ್ದುದು.  84 ಲಕ್ಷ ಖಾತೆಗಳನ್ನು ಅದಾಗಲೇ ವಿವಿಧ ಹಂತಗಳಲ್ಲಿ ನಿಷೇಧಿಸಲಾಗಿದ್ದು, ಈ ನಿರ್ಧಾರ ಬಳಕೆದಾರರಿಗೆ ವಂಚನೆಯನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಮೆಟಾ ಕಂಪೆನಿ ಹೇಳುತ್ತದೆ.

ಮೆಟಾದ ಪಾರದರ್ಶಕತೆ ವರದಿಯ ಪ್ರಕಾರ, ವಾಟ್ಸ್​ಆ್ಯಪ್​ ಭಾರತದಲ್ಲಿ 8.45 ಮಿಲಿಯನ್ (84 ಲಕ್ಷಕ್ಕೂ ಹೆಚ್ಚು) ಖಾತೆಗಳನ್ನು ನಿಷೇಧಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 4(1)(d) ಮತ್ತು ಸೆಕ್ಷನ್ 3A(7) ರ ನಿಬಂಧನೆಗಳನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ.  



ವರದಿಯ ಪ್ರಕಾರ, ನಿಯಮಗಳ ಉಲ್ಲಂಘನೆಯಿಂದಾಗಿ 1.66 ಮಿಲಿಯನ್ ಖಾತೆಗಳನ್ನು ತಕ್ಷಣವೇ ನಿರ್ಬಂಧಿಸಲಾಗಿದೆ. ಉಳಿದ ವಾಟ್ಸ್​ಆ್ಯಪ್​ ಖಾತೆಗಳನ್ನು ಮೊದಲು ತನಿಖೆ ಮಾಡಿ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ನಿಷೇಧಿಸಲಾಗಿದೆ ಎಂದು ಮೆಟಾ ಕಂಪೆನಿ ಹೇಳಿದೆ.  ವಾಟ್ಸ್​ಆ್ಯಪ್​ನ ಮೇಲ್ವಿಚಾರಣೆಯ ಸಮಯದಲ್ಲಿ 1.6 ಮಿಲಿಯನ್‌ಗಿಂತಲೂ ಹೆಚ್ಚು ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ. ಈ ಖಾತೆಗಳು ಈ ಹಿಂದೆಯೂ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ.


 ಮೆಟಾ ಕಂಪೆನಿ ಕೊಟ್ಟಿರುವ ಕಾರಣಗಳು ಈ ರೀತಿಯಾಗಿವೆ. 
- ಸ್ಪ್ಯಾಮಿಂಗ್ ಮತ್ತು ವಂಚನೆಯ ಚಟುವಟಿಕೆಗಳು ಹೆಚ್ಚಿರುವುದನ್ನು ಗಮನಿಸಲಾಗಿದೆ.
 -ದೊಡ್ಡ ಪ್ರಮಾಣದಲ್ಲಿ ಸಂದೇಶಗಳನ್ನು ಕಳುಹಿಸುವ ಮೂಲಕ ಅಕ್ರಮ ಚಟುವಟಿಕೆಗಳನ್ನು ಬೆಂಬಲಿಸಿರುವುದು. 
- ದಾರಿತಪ್ಪಿಸುವ/ಹಾನಿಕಾರಕ ಮಾಹಿತಿಯನ್ನು ಹಂಚಿಕೊಂಡಿರುವುದು, 
-ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿರುವುದು ಇವೆಲ್ಲವೂ ಕಾರಣವಾಗಿವೆ.  


Ads on article

Advertise in articles 1

advertising articles 2

Advertise under the article