ಮುನಿಯಾಲು ವಿಜಯಲಕ್ಷ್ಮೀ ಅವರ ಜೀವನ ಸಂಗೀತ ಕವನ ಸಂಕಲನ ಬಿಡುಗಡೆ
Monday, February 17, 2025
ಕಾರ್ಕಳ: ಮುನಿಯಾಲು ವಿಜಯಲಕ್ಷೀ ಅವರ ಚೊಚ್ಚಲ ಕವನ ಸಂಕಲನ ಜೀವನ ಸಂಗೀತ ಇತ್ತೀಚೆಗೆ ಬಿಡುಗಡೆಯಾಯಿತು.
ಶಿವಪುರದಲ್ಲಿ ನಡೆದ ಹೆಬ್ರಿ ತಾಲೂಕ ಮಟ್ಟದ ಐದನೇ ಸಾಹಿತ್ಯ ಸಮ್ಮೇಳನದಲ್ಲಿ ಮುನಿಯಾಲಿನ ವಿಜಯಲಕ್ಷ್ಮಿ ಆರ್ ಕಾಮತ್ ಇವರ ಜೀವನ ಸಂಗೀತ ಎಂಬ ಚೊಚ್ಚಲ ಕವನ ಸಂಕಲನವು ಅನಾವರಣಗೊಂಡಿದೆ. ಈ ಸಂದರ್ಭದಲ್ಲಿ ಹೆಬ್ರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸರ್ವ ಸದಸ್ಯರು ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.