ಒಂದು ಪ್ಯಾಕ್ ಸಿಗರೇಟ್‌ನಿಂದ ವ್ಯಕ್ತಿಯೊಬ್ಬಮ ಜೀವಿತಾವಧಿ ಎಷ್ಟು ಕಡಿಮೆ ಆಗುತ್ತದೆ ಗೊತ್ತಾ? ಅಧ್ಯಯನದಿಂದ ವರದಿ ಬಹಿರಂಗ
Friday, February 21, 2025
ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲ. ಸೇದುವವರ ಜೀವನವೂ ಅಂತ್ಯವಾಗಬಹುದು. ಹೌದು, ನಿಧಾನವಾಗಿ ಅದು ವ್ಯಕ್ತಿಯ ಜೀವಿತಾವಧಿಯನ್ನು ಕೂಡ ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಹೊಸ ಅಧ್ಯಯನದಲ್ಲಿ ಭಯಾನಕ ಸಂಗತಿಯೊಂದು ಬಹಿರಂಗವಾಗಿದೆ. ಲಂಡನ್ ವಿಶ್ವವಿದ್ಯಾಲಯದ ಕಾಲೇಜು ನಡೆಸಿದ ಸಂಶೋಧನೆಯ ಪ್ರಕಾರ, ದಿನಕ್ಕೆ ಒಂದು ಸಿಗರೇಟ್ ಸೇದುವುದರಿಂದ ಜೀವಿತಾವಧಿ ಸರಾಸರಿ 20 ನಿಮಿಷಗಳಷ್ಟು ಕಡಿಮೆಯಾಗುತ್ತದೆ. ಆದ್ದರಿಂದ, ತಕ್ಷಣ ಸಿಗರೇಟ್ ಸೇದುವವರು ಬಿಡುವಂತೆ ಏಚ್ಚರಿಕೆ ಕೊಟ್ಟಿದ್ದಾರೆ.
ಒಂದು ಸಿಗರೇಟ್ ಪುರುಷರ ಸರಾಸರಿ ಜೀವಿತಾವಧಿ 17ನಿಮಿಷಗಳು ಕಡಿಮೆ ಮಾಡುತ್ತದೆ. ಮಹಿಳೆಯರ ಜೀವಿತಾವಧಿಯನ್ನು 22 ನಿಮಿಷಗಳ ಕಾಲ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಒಂದು ಪ್ಯಾಕ್ ಸಿಗರೇಟ್‌ನಿಂದ 7 ಗಂಟೆಗಳ ಜೀವಿತಾವಧಿ ಕಡಿಮೆಯಾಗಲಿದೆ ಎಂದು ಹೊಸ ಅಧ್ಯಯನವೊಂದು ಅಂತಕಕಾರಿ ಅಂಶವನ್ನು ಹೊರ ಹಾಕಿದೆ.
ಸಿಗರೇಟ್ ಸೇವನೆಯೂ ನಿಮ್ಮ ಜೀವಿತಾವಧಿನ್ನು ನಿಧಾನವಾಗಿ ಕಸಿದಿಕೊಳ್ಳಲಿದೆ ಎಂದು ಸಂಶೋಧಕರು ಹೇಳುತ್ತಾರೆ. ಧೂಮಪಾನಿಗಳು ಎಷ್ಟು ಬೇಗ ಧೂಮಪಾನ ಬಿಡುತ್ತಾರೊ ಅಷ್ಟು ಬೇಗ ಅವರಿಗೆ ಲಾಭ. ಇದರಿಂದ ಆರೋಗ್ಯದ ಲಾಭ ಮತ್ತು ದೀರ್ಘ ಆರೋಗ್ಯಕರ ಜೀವನವನ್ನು ಪಡೆಯುತ್ತೀರ. ಅಲ್ಲದೆ, ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಿದರೆ ಮಾತ್ರ ಅದರಿಂದ ಲಾಭವಾಗಲಿದೆ ಎಂದು ಸಂಶೋಧಕರು ಹೇಳುತ್ತಾರೆ.