ಬೆಂಗಳೂರು: ಜಯಾಮಾಲಾ ಪುತ್ರಿ ವಿವಾಹದಲ್ಲಿ ನಟ ಧ್ರುವ ಸರ್ಜಾ ಈ ಕೆಲಸಕ್ಕೆ ನೆಟ್ಟಿಗರು ಫಿದಾ..!
Sunday, February 9, 2025
ಬೆಂಗಳೂರು: ಸ್ಟಾರ್ ನಟನಾದರೂ ಸರಳತೆಯನ್ನು ಮೆರೆದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಈ ಗುಣಕ್ಕೆ ಅಭಿಮಾನಿಗಳು, ನೆಟ್ಟಿಗರು ಫಿದಾ ಆಗಿದ್ದಾರೆ.
ಕನ್ನಡದ ಖ್ಯಾತ ನಟಿ ಜಯಮಾಲಾ ಪುತ್ರಿ ಸೌಂದರ್ಯ ವಿವಾಹ ಕಾರ್ಯಕ್ರಮಕ್ಕೆ ಭಾಗವಹಿಸಲು ನಟ ಧ್ರುವ ಸರ್ಜಾ ಪತ್ನಿಯೊಂದಿಗೆ ಆಗಮಿಸಿದ್ದರು. ಅವರು ಮದುವೆ ಮಂಟಪಕ್ಕೆ ಬರುತ್ತಿದ್ದಂತೆ ಮಹಿಳೆಯೊಬ್ಬರು ಚಪ್ಪಲಿ ಮಿಸ್ ಆಗಿ ಹುಡುಕ್ತಾ ಇದ್ದರು. ಇದನ್ನು ಧ್ರುವ ಮಹಿಳೆ ಹುಡುಕಾಟ ಗಮನಿಸ್ತಾರೆ. ತಕ್ಷಣ ಬಾಗಿದ ಅವರು ಮಹಿಳೆಯ ಹಿಂದೆ ಬಿದ್ದಿದ್ದ ಚಪ್ಪಲಿ ಎತ್ತಿ ಕೊಟ್ಟಿದ್ದಾರೆ. ಇದು ಅಲ್ಲಿಯೇ ಇದ್ದವರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಭಿಮಾನಿಗಳು ನೆಚ್ಚಿನ ನಟನ ಸರಳತೆಗೆ ಖುಷಿ ಆಗಿದ್ದಾರೆ..