-->
ವರದಕ್ಷಿಣೆಯಾಗಿ ಅಳಿಯನಿಗೆ ಮೂರು ಕೋಟಿ ರೂ. ಕೊಟ್ಟ ರೈತ

ವರದಕ್ಷಿಣೆಯಾಗಿ ಅಳಿಯನಿಗೆ ಮೂರು ಕೋಟಿ ರೂ. ಕೊಟ್ಟ ರೈತ


ರಾಜಸ್ಥಾನ: ಪುತ್ರಿಯ ವಿವಾಹವನ್ನು ಅದ್ದೂರಿಯಾಗಿ ನಡೆಸಿದ ರೈತನೋರ್ವನು, ಅಳಿಯನಿಗೆ ನಗದು, ಚಿನ್ನ ಮತ್ತು ಫ್ಲ್ಯಾಟ್ ರೂಪದಲ್ಲಿ ಬರೊಬ್ಬರಿ 3 ಕೋಟಿ ರೂ. ನೀಡುವ ಮೂಲಕ ಎಲ್ಲರನ್ನೂ ನಿಬ್ವೆರಗಾಗಿಸಿದ್ದಾನೆ.

ಹೌದು, ರಾಜಸ್ತಾನೀ ಸಂಸ್ಕೃತಿಯಲ್ಲಿ, ಸಂಪ್ರದಾಯಕವಾಗಿ ವರನಿಗೆ ವಧುವಿನ ಕಡೆಯವರು ವರದಕ್ಷಿಣೆ ರೂಪದಲ್ಲಿ ಏನಾದರೂ ನೀಡಬೇಕಾಗುತ್ತದೆ. ಅದರಂತೆ ಇಲ್ಲೊಬ್ಬ ತಂದೆ(ರೈತ) ತನ್ನ ಪುತ್ರಿಯ ಮದುವೆಯಲ್ಲಿ ಈ ರೀತಿಯ ಬಹುಮಾನವನ್ನು ಉದಾರವಾಗಿ ನೀಡುವ ಮೂಲಕ ರಾಜಸ್ತಾನದ ತುಂಬಾ ವೈರಲ್ ಆಗಿದ್ದಾನೆ. ಈ ವಿವಾಹದಲ್ಲಿ, ಮದುವೆಯ ಖರ್ಚಿಗಿಂತ ವರನಿಗೆ ಕೊಟ್ಟ ಬಹುಮಾನವೇ ದುಬಾರಿಯಾಗಿದೆ ಎಂದು ವರದಿಯಾಗಿದೆ.


ರಾಜಸ್ಥಾನದ ನಾಗೌರ್‌ ನಗರದ ಹನುಮಾನ್ ಬಾಗ್‌ನಲ್ಲಿ ವಾಸಿಸುತ್ತಿರುವ ರಾಬಕ್ಸ್ ಖೋಜ 1.5 ಕೋಟಿ ರೂ.ಕ್ಯಾಶ್ ನೀಡಿದ ರೈತ. ಖೋಜಗೆ ಮೂವರು ಪುತ್ರರು, ಏಕೈಕ ಪುತ್ರಿ ಇದ್ದಾಳೆ. ಮೂವರ ಪುತ್ರರಲ್ಲಿ ಇಬ್ಬರು ಸರ್ಕಾರಿ ನೌಕರರು ಮತ್ತು ಓರ್ವ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾನೆ. ತನ್ನ ಏಕೈಕ ಪುತ್ರಿಯನ್ನು ರಾಜಸ್ತಾನದ ಫರ್ದೋಡ್ ಗ್ರಾಮದಲ್ಲಿ ವಾಸಿಸುವ ಶಿಕ್ಷಕ ಮದನ್ಹಾಲ್‌ಗೆ ಧಾರೆರೆದು ಕೊಟ್ಟಿದ್ದಾನೆ.

"ಮಾಯ್ತಾ” (ರಾಜಸ್ತಾನದಲ್ಲಿ ರಾಜವಂಶ ಕಾಲದಿಂದಲೂ ಇರುವ ಮದುವೆ ಸಂಪ್ರದಾಯ) ಪದ್ಧತಿಯಲ್ಲಿ ಮದುವೆ ಮಾಡಿದ್ದಾರೆ. ಮೂವರು ಸಹೋದರರು ಒಗ್ಗಟ್ಟಿನಿಂದ ಸಹೋದರಿಗೆ ದುಪಟ್ಟಾ ಹೊದಿಸಿ 'ಮೈರಾ' ಸಮಾರಂಭವನ್ನು ಪಾರಂಭಿಸಿದರು. ಮೈರಾ ಸಮಯದಲ್ಲಿ 1.5 ಕೋಟಿ ರೂ. ನಗದು, 30 ತೊಲ ಚಿನ್ನ ಮತ್ತು 5 ಕಿಲೋಗ್ರಾಂ ಬೆಳ್ಳಿ ಸೇರಿ ನಾಗೌರ್ ನಗರದಲ್ಲಿನ ಎರಡು ಫ್ಲ್ಯಾಟ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article