-->
ಪದೇಪದೇ ಇಂತಹ ಕನಸುಗಳು ಬಿದ್ದಲ್ಲಿ ದೇವರು ನಿಮ್ಮ ಮೇಲೆ ಆಶೀರ್ವದಿಸುತ್ತಿದ್ದಾನೆ ಎಂದರ್ಥ

ಪದೇಪದೇ ಇಂತಹ ಕನಸುಗಳು ಬಿದ್ದಲ್ಲಿ ದೇವರು ನಿಮ್ಮ ಮೇಲೆ ಆಶೀರ್ವದಿಸುತ್ತಿದ್ದಾನೆ ಎಂದರ್ಥ


ಯಾರಾದರೂ ನಿದ್ರೆಯಲ್ಲಿ ಇರುವಾಗ ಕಾಣುವ ಪ್ರತಿಯೊಂದು ಕನಸುಗಳು ಅದರದ್ದೇ ಆದ ಅರ್ಥವನ್ನು ಹೊಂದಿರುತ್ತದೆ. ನಾವು ಕನಸಿನಲ್ಲಿ ಕಾಣುವ ಪ್ರತೀ ಘಟನೆಗಳು ನಮ್ಮ ಭವಿಷ್ಯದ ಬಗ್ಗೆ ನಮಗೆ ಸೂಚನೆಯನ್ನು ನೀಡುತ್ತದೆ. ಸ್ವಪ್ನಶಾಸ್ತ್ರವೂ ಕೂಡ ಮಲಗಿದ್ದಾಗ ಕಾಣುವ ಪ್ರತಿಯೊಂದು ಕನಸುಗಳ ಹಿಂದೆಯೂ ಅದರದ್ದೇ ಆದ ಅರ್ಥವಿದೆಯೆಂದು ಹೇಳುತ್ತದೆ. ಅವುಗಳು ಭವಿಷ್ಯದ ಬಗ್ಗೆ ಒಳ್ಳೆಯ ಸೂಚನೆಗಳನ್ನು ನೀಡಬಹುದು, ಕೆಟ್ಟ ಸೂಚನೆಗಳನ್ನೂ ನೀಡಬಹುದು. ಅದರಲ್ಲೂ ನಾವು ಕನಸಿನಲ್ಲಿ ಪದೇ ಪದೇ ಇಂತಹ ಘಟನೆಗಳನ್ನು ನೋಡುತ್ತಿದ್ದರೆ ಅದರರ್ಥ ದೇವರು ನಮ್ಮೊಂದಿಗೆ ಇದ್ದಾನೆ ಎಂಬ ಸೂಚನೆಯನ್ನು ನೀಡುತ್ತದೆ. ಇಲ್ಲದಿದ್ದರೆ ದೇವರು ನಮ್ಮಿಂದ ಸಂತುಷ್ಟನಾಗಿದ್ದಾನೆ ಎಂಬುದರ ಸೂಚನೆಯಾಗಿದೆ. ಈ ಶುಭ ಕನಸುಗಳ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ..

ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ದೇವರು ಕಾಣಿಸಿಕೊಂಡು ನಿಮ್ಮನ್ನು ಆಶೀರ್ವದಿಸುತ್ತಿದ್ದಂತೆ ಕಾಣಿಸಿದರೆ ಅದು ನಿಮಗೆ ಶುಭ ಸೂಚನೆಯಾಗಿರುತ್ತದೆ. ದೇವರು ನಿಮ್ಮಿಂದ ಸಂತುಷ್ಟನಾಗಿದ್ದಾಗ ಮಾತ್ರ ನಿಮಗೆ ಇಂತಹ ಕನಸುಗಳು ಬೀಳುತ್ತವೆ. ಇದರರ್ಥ ನೀವು ದೇವರ ವಿಶೇಷ ಆಶೀರ್ವಾದವನ್ನು ಪಡೆದುಕೊಂಡಿದ್ದೀರಿ ಎಂಬುದಾಗಿದೆ. ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.


​ಕನಸಿನಲ್ಲಿ ಗೋವನ್ನು ಕಾಣುವುದು ಕೂಡ ಬಹಳ ಶುಭಕರವೆಂದು ಸ್ವಪ್ನಶಾಸ್ತ್ರ ಹೇಳುತ್ತದೆ. ಇದರ ಪ್ರಕಾರ, ನೀವು ಕನಸಿನಲ್ಲಿ ಗೋಮಾತೆಯನ್ನು ನೋಡಿದರೆ, ದೇವರು ನಿಮ್ಮ ಮೇಲೆ ಸಂತೋಷಪಟ್ಟಿದ್ದಾನೆ ಎಂದು ಅರ್ಥಮಾಡಿಕೊಳ್ಳಿ. ಏಕೆಂದರೆ ಎಲ್ಲಾ ದೇವರುಗಳು ಮತ್ತು ದೇವತೆಗಳು ಗೋಮಾತೆಯಲ್ಲಿ ನೆಲೆಸಿದ್ದಾರೆ ಎಂಬುದು ಹಿಂದೂ ಧರ್ಮದಲ್ಲಿನ ನಂಬಿಕೆಯಾಗಿದೆ. ಈ ಕನಸು ಬಿದ್ದರೆ ಆ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ದೂರಾಗಲಿದೆ ಮತ್ತು ಲಕ್ಷ್ಮಿದೇವಿಯು ನಿಮ್ಮ ಮನೆಗೆ ಶೀಘ್ರದಲ್ಲೇ ಆಗಮಿಸಲಿದ್ದಾಳೆ ಎಂಬುದಾಗಿದೆ.

ನೀವು ಕನಸಿನಲ್ಲಿ ಪದೇಪದೇ ದೇವಸ್ಥಾನವನ್ನು ನೋಡುತ್ತಿದ್ದರೆ ಅದು ಸಣ್ಣ ವಿಚಾರವಲ್ಲ, ಬದಲಿಗೆ ದೇವರು ನಿಮ್ಮ ಮೇಲೆ ತನ್ನ ಆಶೀರ್ವಾದ ಸುರಿಸಲಿದ್ದಾನೆ ಎಂದರ್ಥ. ಕನಸಿನ ಶಾಸ್ತ್ರದಲ್ಲಿ, ಇಂತಹ ಕನಸುಗಳನ್ನು ಕಾಣುವುದು ಶಭ ಎಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಈ ಕನಸು ಮುಂಬರುವ ಸಮಯದಲ್ಲಿ ನಿಮ್ಮ ಜೀವನದಿಂದ ಆರ್ಥಿಕ ಬಿಕ್ಕಟ್ಟು ಕೊನೆಗೊಳ್ಳಲಿದೆ ಎಂಬುದರ ಸೂಚನೆಯಾಗಿದೆ.

ನಿಮ್ಮ ಕನಸಿನಲ್ಲಿ ಬಿಳಿಯಬಣ್ಣದ ಆನೆಯನ್ನು ನೀವು ನೋಡಿದರೆ, ನಿಮ್ಮ ಅದೃಷ್ಟದ ಮುಚ್ಚಿದ ಬಾಗಿಲುಗಳು ತೆರೆಯಲಿವೆ ಎಂದು ಅರ್ಥಮಾಡಿಕೊಳ್ಳಿ. ಸ್ವಪ್ನ ಶಾಸ್ತ್ರದ ಪ್ರಕಾರ, ಬಿಳಿ ಆನೆ ಬಹಳ ಶುಭ ಮತ್ತು ಈ ಕನಸು ನಿಮಗೆ ಶೀಘ್ರದಲ್ಲೇ ಸಂಪತ್ತು ಸಿಗಲಿದೆ ಎಂಬುದನ್ನು ಸೂಚಿಸುತ್ತದೆ. ಈ ಕನಸು ನಿಮ್ಮ ಅದೃಷ್ಟ ಶೀಘ್ರದಲ್ಲೇ ಬದಲಾಗಲಿದೆ ಎಂಬುದರ ಸೂಚನೆಯನ್ನು ನೀಡುತ್ತದೆ.

ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಮಳೆಯನ್ನು ನೋಡುವುದು ತುಂಬಾ ಶುಭ ಮತ್ತು ಅದು ನಿಮ್ಮ ಜೀವನಕ್ಕೂ ಅತ್ಯಂತ ಮಂಗಳಕರ ಸೂಚನೆಯಾಗಿದೆ. ನೀವು ಸ್ವಪ್ನದಲ್ಲಿ ಮಳೆಯನ್ನು ನೋಡಿದರೆ ದೇವರು ನಿಮ್ಮ ಬಗ್ಗೆ ಸಂತೋಷವಾಗಿದ್ದಾನೆ ಮತ್ತು ಶೀಘ್ರದಲ್ಲೇ ನಿಮ್ಮ ಜೀವನದಿಂದ ಎಲ್ಲಾ ಸಮಸ್ಯೆಗಳು ದೂರ ಮಾಡುತ್ತಾನೆ ಎಂದು ಅರ್ಥಮಾಡಿಕೊಳ್ಳಿ. ಇದಲ್ಲದೆ, ನೀವು ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ಪಡೆಯುತ್ತೀರಿ ಮತ್ತು ಹಣ ಗಳಿಸುವ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂಬುದಾಗಿದೆ.

Ads on article

Advertise in articles 1

advertising articles 2

Advertise under the article