ಕರಾವಳಿ ಸಾಂಪ್ರದಾಯಿಕ ಉಡುಪಿನ ಪ್ಯಾಷನ್ ಶೋ ಸ್ಪರ್ಧೆ : ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ
Saturday, February 8, 2025
ಉಡುಪಿಯಲ್ಲಿ ನಡೆದ ಗ್ರೇಟ್ ಚಾಂಪಿಯನ್ಸ್ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಹತ್ತನೇ ತರಗತಿಯ ಅಲೋಕ್ ಸಿ ಶೆಟ್ಟಿ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಂಬಳದ ಉಡುಗೆ ತೊಟ್ಟು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
9ನೇ ತರಗತಿಯ ಹಮ್ದನ್ ಬೆಸ್ಟ್ ಸ್ಮೈಲ್ ಮತ್ತು ಎಂಟನೇ ತರಗತಿಯ ಶಮಿಕಾ ಬೆಸ್ಟ್ ಹೇರ್ ಬಹುಮಾನವನ್ನು ಗಳಿಸಿರುತ್ತಾರೆ.ಮಾತ್ರವಲ್ಲದೆ ತಂಡ ಸ್ಪರ್ಧೆಯಲ್ಲಿ ತಂಡಕ್ಕೆ ದ್ವಿತೀಯ ರನ್ನರ್ ಅಪ್ ಬಹುಮಾನ ಬಂದಿರುತ್ತದೆ.
ಇವರನ್ನು ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು, ಶಾಲಾ ಆಡಳಿತ ಮಂಡಳಿ ಯವರು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ರವರು ಅಭಿನಂದಿಸಿದರು.