-->
ಕಾರ್ಕಳದಲ್ಲಿ ಉಚಿತ ಹರ್ನಿಯ ತಪಾಸಣಾ ಶಿಬಿರ

ಕಾರ್ಕಳದಲ್ಲಿ ಉಚಿತ ಹರ್ನಿಯ ತಪಾಸಣಾ ಶಿಬಿರ



ಕಾರ್ಕಳ  19 ಫೆಬ್ರವರಿ 2025: ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ  ಆಸ್ಪತ್ರೆಯಲ್ಲಿ ಶುಕ್ರವಾರ , ಫೆಬ್ರವರಿ  21, 2025 ರಂದು  ಉಚಿತ ಹರ್ನಿಯ ತಪಾಸಣಾ ಶಿಬಿರ  ಆಯೋಜಿಸಲಾಗಿದೆ. ಶಿಬಿರವು ಬೆಳಿಗ್ಗೆ ಗಂಟೆ 9:30ರಿಂದ ಸಂಜೆ ಗಂಟೆ 05:00ರವರೆಗೆ   ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ  ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಓ ಪಿ ಡಿ ಯಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ  ಅವರು ತಿಳಿಸಿದ್ದಾರೆ.

ತಜ್ಞರ ಸಮಾಲೋಚನೆಯು ಉಚಿತವಾಗಿದ್ದು, ಹೊರರೋಗಿ ಪರೀಕ್ಷೆಗಳು ಮತ್ತು ಹರ್ನಿಯ ಶಸ್ತ್ರಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು.

ಹೊಟ್ಟೆನೋವು, ಹೊಟ್ಟೆಯ ಭಾಗದಲ್ಲಿ ಉಬ್ಬು ಅಥವಾ ಉಬ್ಬು ವಿಕೆ, ಹರ್ನಿಯ ಇತಿಹಾಸ ಉಳ್ಳವರು ಮತ್ತು ಹರ್ನಿಯ ಚಿಕಿತ್ಸೆ ಆಯ್ಕೆಗಳ ಕುರಿತು ತಜ್ಞರ ಸಲಹೆ ಬಯಸುವವರು ಶಿಬಿರದಲ್ಲಿ ಭಾಗವಹಿಸಬಹುದೆಂದು ಖ್ಯಾತ ಶಸ್ತ್ರ ಚಿಕಿತ್ಸಕ ಡಾ ಮೃಣಾಲ್ ಕುಮಾರ್ ಅವರು ತಿಳಿಸಿದ್ದಾರೆ.

ಮೊದಲು ನೋಂದಾಯಿಸಿದ 50 ಜನರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ ದೂರವಾಣಿ ಸಂಖ್ಯೆ: 9731601150 ಅಥವಾ 08258 230583. ಸಂಪರ್ಕಿಸಲು ಕೋರಲಾಗಿದೆ.

Ads on article

Advertise in articles 1

advertising articles 2

Advertise under the article