JEE ಮೈನ್ಸ್ 2025 (ಸೆಷನ್1)ನಲ್ಲಿ ಮಂಗಳೂರಿನ ನಾಲ್ಕು ವಿದ್ಯಾರ್ಥಿಗಳ ಸಾಧನೆ
Wednesday, February 12, 2025
ಮಂಗಳೂರು : ಆಕಾಶ್ ಎಜುಕೇಷನ್ ಸರ್ವೀಸ್ ಲಿಮಿಟೆಡ್ (AESL), 2025 ರಜೆ JEE ಮೈನ್ಸ್ (ಸೆಷನ್1)ನಲ್ಲಿ ಗಮನಾರ್ಹ ಸಾಧನೆಯನ್ನೂ ಘೋಷಿಸುತ್ತಿದೆ. ಮಂಗಳೂರು ನಗರದಿಂದ ನಾಲ್ಕು ವಿದ್ಯಾರ್ಥಿಗಳು 99 ಪರ್ಸೇಂಟೆ ಮೀರಿ ಶ್ರೇಷ್ಠ ಅಂಕ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಅತ್ಯುತ್ತಮ ಸಾಧನೆಯನ್ನಾಚರಿಸಿದ ವಿದ್ಯಾರ್ಥಿಗಳಲ್ಲಿ ಅನಿಕೇತಿ ಡಿ ಶೆಟ್ಟಿ ಮತ್ತು ವಿತ್ತಲಾದಾಸ್ ಎ ಅವರ ತಲಾ ಶೇ 99.90 ರಷ್ಟು ಹಾಗೂ ರೇಮಂಡ್ ಎಲಿಜಾಪಿಂಟೋ ಶೇ 99.62 ಪರ್ಸೇಂಟ್ ಹಾಗೂ ಆಯುಷ್ಯು ನಾಯಕ್ ಶೇ 99.34 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಈ ಫಲಿತಾಂಶಗಳು ವಿದ್ಯಾರ್ಥಿಗಳ ನಿಷ್ಠೆ ಮತ್ತು ಶೈಕ್ಷಣಿಕ ಮೆಟ್ಟಿಲು ಏರಿದ ಪ್ರತಿಭೆಯನ್ನು ಪ್ರತಿಬಿಂಬಿಸುತ್ತವೆ, ಭಾರತದಲ್ಲಿ ಅತ್ಯಂತ ಸವಾಲಿನ ಪರೀಕ್ಷೆಗಳೊಂದರಲ್ಲಿ ಇದು ದೊರಕಿದ ಸಾಧನೆಯಾಗಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಿನ್ನೆ ಫಲಿತಾಂಶ ಪ್ರಕಟಿಸಿದ್ದು, ಈ ವರ್ಷ ನಿಯೋಜಿತವಾಗಿರುವ ಎರಡು ಎಇಇ ಅಧಿವೇಶನಗಳ ಪ್ರಾರಂಭವನ್ನು ಸೂಚಿಸಿದೆ. ಈವಿದ್ಯಾರ್ಥಿಗಳ ಹೆಚ್ಚಿನವರು ಆಕಾಶ್ ಕ್ಲಾಸ್ ರೂಂ ಪ್ರೋಗಾಂಗೆ ದಾಖಲಾಗಿ ಕಠಿಣ ಪ್ರವೇಶ ಪರೀಕ್ಷೆಗಳಲ್ಲೊಂದಾದ ಐಐಟಿ , JEEಪರೀಕ್ಷೆಯನ್ನು ಉತ್ತೀರ್ಣಗೊಳ್ಳುವ ಗುರಿಯೊಂದಿಗೆ ಶ್ರಮಿಸಿದರು.
ಆಕಾಶ್ ಎಜುಕೇಷನ್ ಸರ್ವೀಸ್ ಲಿಮಿಟೆಡ್ ಮುಖ್ಯ ಅಕಾಡೆಮಿ ಮತ್ತು ವ್ಯವಹಾರ ಮುಖ್ಯಸ್ಥ ಶ್ರೀಧೀರಕುಮಾರ್ ಮಿಶ್ರಾ ಮಾತನಾಡಿ, "JEEಮೇನ್ಸ್ 2025 ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳು ಸಾಧಿಸಿದ ಅದ್ಭುತ ಫಲಿತಾಂಶಕ್ಕಾಗಿ ನಾವು ಹೆಮ್ಮೆಪಡುತ್ತೇವೆ. ಅವರ ಶ್ರಮ, ದೃಢ ನಿಶ್ಚಯ ಮತ್ತು ಸರಿಯಾದ ಮಾರ್ಗದರ್ಶನದಿಂದ ಈಅತಿ ಉತ್ತಮ ಫಲಿತಾಂಶಗಳ ಸಾಧ್ಯವಾಗಿದೆ. ಆಕಾಶ್‍ನಲ್ಲಿ, ವಿದ್ಯಾರ್ಥಿಗಳು ತಮ್ಮ ಪೂರ್ಣಸಾಮಥ್ರ್ಯವನ್ನು ಬೆಳಸಿಕೊಳ್ಳಲು ಉತ್ತಮಗುಣಮಟ್ಟದ ಶಿಕ್ಷಣವನ್ನು ಒದಗಿಸುವುದೇ ನಮ್ಮಆದ್ಯತೆ. ಎಲ್ಲಾ ಯಶಸ್ವಿ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು, ಮತ್ತು ಅವರ ಮುಂದಿನಹಾದಿಗೆ ಶುಭಾಶಯಗಳು ಕೋರಿದ್ದಾರೆ.
ಆಕಾಶ್ ಎಜುಕೇಷನ್ ಸರ್ವೀಸ್ ಲಿಮಿಟೆಡ್ (AESL), ನೀಟ್ ಮತ್ತು JEE ಪರೀಕ್ಷೆಗಳಿಗೆ ಪೂರ್ಣ ಮತ್ತು ಪರಿಣಾಮಕಾರಿ ತಯಾರಿ ಕಾರ್ಯಕ್ರಮಗಳನ್ನು ಒದಗಿಸುವ ವಿಶ್ವಾಸಾರ್ಹ ಸಂಸ್ಥೆಯಾಗಿದೆ. NTSE, ಒಲಿಂಪಿಯಾಡ್‍ಗಳು ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಮಥ್ರ್ಯವನ್ನು ಅರಿಯಲು ಮತ್ತು ಅವರ ಉನ್ನತ ಭವಿಷ್ಯಕ್ಕಾಗಿ ಸದೃಢ ಪಯಣವನ್ನು ರೂಪಿಸಲು ಈ ಸಂಸ್ಥೆ ಬದ್ಧವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಗಳೂರುಸಹಾಯಕ ನಿರ್ದೇಶಕ ಶ್ಯಾಮ ಪ್ರಸಾದ, ಪತ್ರಿಕಾಗೋಷ್ಠಿಯಲ್ಲಿದ್ದರು.