ಪುರುಷರು ಯಾಕೆ ಉದ್ದ ಕೂದಲಿನ ಯುವತಿಯರನ್ನು ಇಷ್ಟಪಡುತ್ತಾರೆ ಗೊತ್ತಾ?
ಫ್ಯಾಷನ್ ಟ್ರೆಂಡ್‌ಗಳು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಸಣ್ಣ ಕೂದಲಿನ ಟ್ರೆಂಡ್ ಇದ್ದರೆ, ಮತ್ತೊಮ್ಮೆ ಉದ್ದ ಕೂದಲಿನ ಟ್ರೆಂಡ್ ಬರುತ್ತದೆ. ಆದರೆ ಸಿನಿಮಾಗಳಲ್ಲಿ, ನಾಯಕಿಯರು ಹೆಚ್ಚಾಗಿ ತಮ್ಮ ಉದ್ದನೆಯ ಕೂದಲನ್ನು ಓಪನ್ ಆಗಿ ಬಿಟ್ಟುಕೊಂಡಿರೋದನ್ನೆ ನಾವು ಹೆಚ್ಚಾಗಿ ಕಂಡಿದ್ದೀವಿ. 'ಕುಚ್ ಕುಚ್ ಹೋತಾ ಹೈ' (Kuch Kuch Hota Hai) ಸಿನಿಮಾ ನೆನಪಿಸಿಕೊಳ್ಳಿ, ಅಲ್ಲಿ ಸಣ್ಣ ಕೂದಲಿನ ಅಂಜಲಿ, ವರ್ಷಗಳ ಬಳಿಕ ರಾಹುಲ್ ಮುಂದೆ ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಾಗ, ರಾಹುಲ್‌ಗೆ ಅಂಜಲಿ ಮೇಲೆ ಪ್ರೀತಿಯಾಗುತ್ತದೆ. ಯಾಕೆ ಹೀಗೆ? ಆದ್ಯತೆಗಳ ವಿಷಯಕ್ಕೆ ಬಂದಾಗ, ಪುರುಷರು ಉದ್ದನೆಯ ಕೂದಲನ್ನು ಹೊಂದಿರುವ ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಅದು ಏಕೆ? ಅದಕ್ಕೆ ಉತ್ತರ ಇಲ್ಲಿದೆ ನೋಡೋಣ.
ಹಳೆಯ ಕಾಲದ ಹುಡುಗಿಯರು ಉದ್ದನೆಯ ಕೂದಲಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಇದು ಆರೋಗ್ಯಕ್ಕೆ ಸಂಬಂಧಿಸಿದಷ್ಟೇ ಸೌಂದರ್ಯಕ್ಕೂ ಸಂಬಂಧಿಸಿದೆ. ಉದ್ದ ಮತ್ತು ದಪ್ಪ ಕೂದಲನ್ನು ಹೆಚ್ಚಾಗಿ ಉತ್ತಮ ಆರೋಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಉದ್ದನೆಯ ಕೂದಲು ಆರೋಗ್ಯ ಮತ್ತು ಫಲವತ್ತತೆಯ ಸಂಕೇತ ಅನ್ನೋದನ್ನು ಅಧ್ಯಯನಗಳು ತಿಳಿಸಿವೆ. ಜೊತೆಗೆ ಇವು ಉತ್ತಮ ಪೋಷಣೆ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ (healthy lifestyle) ಸಂಬಂಧ ಹೊಂದಿದೆ. ಅಷ್ಟೇ ಆಲ್ಲ, ಮಹಿಳೆಯರ ದೇಹದಲ್ಲಿ ಹೆಚ್ಚಿನ ಮಟ್ಟದ ಈಸ್ಟ್ರೊಜೆನ್ ಹಾರ್ಮೋನ್ ಉದ್ದ ಮತ್ತು ದಪ್ಪ ಕೂದಲನ್ನು ಉತ್ತೇಜಿಸುತ್ತದೆ. ಹಾಗಾಗಿ ಪುರುಷರು ಉದ್ದ ಕೂದಲಿನ ಹುಡುಗಿಯ ಕಡೆಗೆ ನ್ಯಾಚುರಲ್ ಆಗಿಯೇ ಆಕರ್ಷಿತರಾಗುತ್ತಾರೆ.
ಸೌಂದರ್ಯದ ಸಂಕೇತ:
ಅನೇಕ ಸಂಸ್ಕೃತಿಗಳಲ್ಲಿ, ಉದ್ದನೆಯ ಕೂದಲನ್ನು ಸೌಂದರ್ಯ ಮತ್ತು ಸ್ತ್ರೀತ್ವದ ಸಂಕೇತವೆಂದು ಪರಿಗಣಿಸಲಾಗುತ್ತೆ. ಭಾರತೀಯ ಸಂಸ್ಕೃತಿಯಲ್ಲಿ, ಉದ್ದನೆಯ ಕೂದಲು (long hair)ಸಾಂಪ್ರದಾಯಿಕ ಸೌಂದರ್ಯದ ಒಂದು ಭಾಗ. ಚಲನಚಿತ್ರಗಳು, ಪುಸ್ತಕಗಳು ಮತ್ತು ಕಲೆಯಲ್ಲಿ, ಉದ್ದನೆಯ ಕೂದಲನ್ನು ಹೊಂದಿರುವ ಮಹಿಳೆಯರನ್ನು ಹೆಚ್ಚಾಗಿ ಆದರ್ಶ ಮತ್ತು ಆಕರ್ಷಕವಾಗಿ ಚಿತ್ರಿಸಲಾಗಿದೆ. ಇದು ಪುರುಷರ ಗ್ರಹಿಕೆಗಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಉದ್ದನೆಯ ಕೂದಲು "ಸ್ತ್ರೀತ್ವ" ಮತ್ತು "ಮೃದುತ್ವ" ದೊಂದಿಗೆ ಸಂಬಂಧಿಸಿದೆ ಎಂಬ ಸಾಮಾನ್ಯ ನಂಬಿಕೆಗಳಿವೆ. ಹಾಗಾಗಿಯೇ ಪುರುಷರು ಇದರತ್ತ ಆಕರ್ಷಿತರಾಗುತ್ತಾರೆ.
ಮನೋವಿಜ್ಞಾನ ಏನು ಹೇಳುತ್ತದೆ?
ಉದ್ದನೆಯ ಕೂದಲನ್ನು ಹೆಚ್ಚಾಗಿ ಲೈಂಗಿಕ ಆಕರ್ಷಣೆಯ (sexual attraction) ಸಂಕೇತವಾಗಿ ನೋಡಲಾಗುತ್ತದೆ. ಉದಾಹರಣೆಗೆ, ಉದ್ದನೆಯ ಕೂದಲನ್ನು ತಿರುಗಿಸುವುದು ಅಥವಾ ಸರಸವಾಡಲು ಅದನ್ನು ಬಳಸುವುದು ಇದನ್ನೆಲ್ಲಾ ನಾವು ಸಿನಿಮಾದಲ್ಲಿ ನೋಡಿದ್ದೀವಿ ಅಲ್ವಾ? ಮಹಿಳೆ ಸೊಂಟ ಬಳುಕಿಸಿ ನಡೆಯುವಾಗ, ಅತ್ತಿಂದಿತ್ತಾ ಓಲಾಡುವ ಹೆಣ್ಣಿನ ಕೂದಲು ಪುರುಷರನ್ನು ಆಕರ್ಷಿಸುತ್ತದೆ, ಹಾಗಾಗಿಯೇ ಇದನ್ನು ಲೈಂಗಿಕವಾಗಿ ಆಕರ್ಷಿಸುವ ಸಂಕೇತ ಎನ್ನಲಾಗುವುದು.
ಸಂಶೋಧನೆ ಏನು ಹೇಳುತ್ತದೆ?
ಕೆಲವು ಸಂಶೋಧನೆಗಳು ಪುರುಷರು ಹೆಚ್ಚಾಗಿ ಉದ್ದ ಕೂದಲು ಹೊಂದಿರುವ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಎಂದು ಕಂಡುಹಿಡಿದಿದೆ. 2004 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಉದ್ದನೆಯ ಕೂದಲನ್ನು ಹೊಂದಿರುವ ಮಹಿಳೆಯರನ್ನು ಪುರುಷರು ಹೆಚ್ಚು ಆಕರ್ಷಕ ಮತ್ತು ಯಂಗ್ ಎಂದು ಪರಿಗಣಿಸುತ್ತಾರಂತೆ.
ಅಷ್ಟೇ ಅಲ್ಲ ಉದ್ದನೆಯ ಕೂದಲು ನೈಸರ್ಗಿಕ ಮತ್ತು ಆಕರ್ಷಕ ಲುಕ್ ನೀಡುತ್ತದೆ ಎಂದು ಈ ಅಧ್ಯಯನವು ತಿಳಿಸಿದೆ. ಪುರುಷರು ಉದ್ದನೆಯ ಕೂದಲಿನತ್ತ ಆಕರ್ಷಿತರಾಗಲು ವಿವಿಧ ಜೈವಿಕ, ಸಾಂಸ್ಕೃತಿಕ, ಮಾನಸಿಕ ಮತ್ತು ಸಾಮಾಜಿಕ ಕಾರಣಗಳೂ ಇವೆ. ಇದು ಕೇವಲ ದೈಹಿಕ ಆಕರ್ಷಣೆಯ (physical attraction) ವಿಷಯವಲ್ಲ, ಆದರೆ ಸಮಾಜ ಮತ್ತು ಸಂಸ್ಕೃತಿಯಲ್ಲೂ ಕೂಡ ಉದ್ದ ಕೂದಲಿನ ಮಹಿಳೆಯರ ಬಗ್ಗೆ ವಿಶೇಷವಾದ ಒಲವನ್ನು ತೋರಿಸಲಾಗಿದೆ.