ಬೆಂಗಳೂರು: ಅತ್ತೆಯನ್ನು ಸಾಯಿಸುದಕ್ಕೆ ಯಾವುದಾದರೂ ಮಾತ್ರೆ ಇದ್ದರೆ ಹೇಳಿ- ಮಹಿಳೆಯ ಮೆಸೇಜ್ ನೋಡಿ ದಂಗಾದ ವೈದ್ಯರು
Wednesday, February 19, 2025
ಬೆಂಗಳೂರು: ಅತ್ತೆಯನ್ನು ಸಾಯಿಸೋದಕ್ಕೆ ಮಾತ್ರೆ ಬರೆದುಕೊಡಿ ಡಾಕ್ಟ್ರೇ ಎಂಬ ವಾಟ್ಸ್ಆ್ಯಪ್ ಸಂದೇಶವನ್ನು ನೋಡಿ ಬೆಂಗಳೂರಿನ ವೈದ್ಯ ಡಾ. ಸುನೀಲ್ ಕುಮಾರ್ ಒಂದು ಸಲಕ್ಕೆ ಗಲಿಬಿಲಿಗೊಂಡಿದ್ದಾರೆ.
ಹೌದು... ಅತ್ತೆ ಸೊಸೆ ಜಗಳ ಎಲ್ಲಾ ಕಡೆಯೂ ಇದೆ. ಆದರೆ ಇಲ್ಲೊಬ್ಬ ಸೊಸೆ ಅತ್ತೆಯನ್ನು ಸಾಯಿಸುವ ಮಟ್ಟಕ್ಕೆ ಬಂದು ಬಿಟ್ಟಿದ್ದಾಳೆ. 'ಅತ್ತೆ ಕಾಟ ಬಹಳ ಜಾಸ್ತಿಯಾಗಿದೆ, ಹೇಗಾದ್ರು ಮಾಡಿ ಸಾಯಿಸಬೇಕಿತ್ತು, ಮಾತ್ರೆ ಬರೆದುಕೊಡಿ' ಎಂದು ಬೆಂಗಳೂರು ವೈದ್ಯ ಸುನಿಲ್ ಕುಮಾರ್ ಅವರಿಗೆ ಮಾಡಿದ ಮೆಸೇಜ್ ಈಗ ವೈರಲ್ ಆಗಿದೆ. ಆದ್ರೆ ಇದನ್ನು ಅಲ್ಲಿಗೇ ಬಿಡದ ವೈದ್ಯರು, ಇಂತಹ ಪ್ರಕರಣಗಳು ಆಗುತ್ತಲೇ ಇರುತ್ತವೆ. ಇದನ್ನು ನಿರ್ಲಕ್ಷ್ಯ ಮಾಡುವ ಪ್ರಕರಣವಲ್ಲ ಎಂದು ವೈದ್ಯರು ಸಂಜಯ ನಗರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಯುವತಿಯ ಮೆಸೇಜ್‌ನಿಂದ ದಿಗ್ದಾಂತನಾಗಿದ್ದೇನೆ ಎಂದು ಡಾ.ಸುನೀಲ್ ಕುಮಾರ್ ಹೆಬ್ಬಿ ಹೇಳಿದ್ದಾರೆ.
ಮಸೆಸೇಜ್‌ನಲ್ಲಿ ಏನಿದೆ...?
ಡಾಕ್ಟರ್: ಸಂಪರ್ಕ ಮಾಡಿದ ವಿಷಯ ಹೇಳಿ..
ಸೊಸೆ: ಭಯ ಆಗ್ತಾ ಇದೆ ಹೇಳಕ್ಕೆ
ಡಾಕ್ಟರ್: ಹೇಳಿ
ಸೊಸೆ: ಸಾಯಿಸುವ ವಿಚಾರ, ಹೇಗೆ ಸಾಯಿಸುವುದು ಅಂತ
ಡಾಕ್ಟರ್: ಯಾರನ್ನ
ಸೊಸೆ: ಅತ್ತೆನ
ಡಾಕ್ಟರ್: ಯಾಕೆ
ಸೊಸೆ: ತುಂಬಾ ಹಿಂಸೆ ಕೊಡ್ತಾ ಇದ್ದಾರೆ, ಅದಕ್ಕೆ ನಿಮ್ಮನ್ನ ಕೇಳೋಣ ७०३, ಏನಾದ್ರು ಹೇಳ್ತಿರಾ ಹೇಗೆ ಸಾಯಿಸೋದು ಅಂತ, ಫೀಸ್ ಹೇಳಿ, ತುಂಬಾ ಏಜ್ ಆಗಿದೆ,
ಡಾಕ್ಟರ್: ನಾವು ಪ್ರಾಣ ಉಳಿಸೋ ಜನ
ಸೊಸೆ: ಟ್ಯಾಬ್ಲೆಟ್ ಇರುತ್ತಲ್ಲ ಅದು ಹೇಳಿ...ಒಂದು ಎರಡು ತಗೊಂಡ್ರೆ ಸಾಯ್ತಾರಲ್ವ ಆತರ ಇಲ್ವಾ..
ಈ ರೀತಿಯಾಗಿ ಎಂದು ಮೊಬೈಲ್ ನಂಬರ್ ಒಂದರಿಂದ ವೈದ್ಯರಿಗೆ ದಿನಾಂಕ ಫೆ.17ರಂದು ಮಧ್ಯಾಹ್ನ 2ಗಂಟೆಗೆ ಮೆಸೇಜ್ ಬಂದಿದೆ. ತಕ್ಷಣವೇ ಸಂಜೆ 4-38ಕ್ಕೆ ವೈದ್ಯರು ಮೆಸೇಜ್ ಸ್ಟೀನ್ ಶಾಟ್ ನೊಂದಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಇನ್‌ಸ್ಟಾಗ್ರಾಂ ಮೂಲಕ ನಂಬರ್ ಪಡೆದ ಮಹಿಳೆ, ವೈದ್ಯರಿಗೆ ಮೆಸೇಜ್ ಮಾಡಿ ಈ ರೀತಿ ಸಾಯಿಸುವ ಮಾತ್ರೆ ಕೇಳಿದ್ದಾರೆ. ವೈದ್ಯರು ನಿರಾಕರಿಸಿದ ತಕ್ಷಣ ಮಹಿಳೇ ಮೆಸೇಜ್ ಡಿಲೀಟ್ ಮಾಡಿ, ವೈದ್ಯರ ನಂಬರನ್ನು ಬ್ಲಾಕ್ ಮಾಡಿದ್ದಾಳೆ. ನಂತರ ಕರೆಮಾಡಿ ಕ್ಷಮೆ ಕೂಡಾ ಕೇಳಿದ್ದಾಳೆ. ಇನ್ನು ಈ ಪ್ರಕರಣದ ಬಗ್ಗೆ ಅನುಮಾನ ಇರುವ ವೈದ್ಯರು, ಈ ಘಟನೆ ಬಗ್ಗೆ ಗೊಂದಲ ಇದ್ದು, ನಾನು ಸಾಮಾಜಿಕವಾಗಿ ಸಕ್ರಿಯನಾಗಿದ್ದು, ವಿಜಯಪುರದಲ್ಲಿ ಶಾಸಕ ಚುನಾವಣೆಗೂ ಸ್ಪರ್ಧಿಸಿದ್ದರಿಂದ ಯಾರಾದರೂ ಟ್ಯಾಪ್ ಮಾಡಲು ಈ ರೀತಿ ಮೆಸೇಜ್ ಮಾಡಿರಬಹುದು, ಹಿಂದೆಯೂ ಒಂದು ಇದೇ ರೀತಿಯ ಕರೆ ಬಂದಿತ್ತು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಅತ್ತೆಯನ್ನು ಸಾಯಿಸಲು ಮಾತ್ರೆಯ ಕುರಿತು ಸಲಹೆ ನೀಡುವಂತೆ ಮಹಿಳೆಯೊಬ್ಬರು ವೈದ್ಯರೊಬ್ಬರ ಕೇಳಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೈದ್ಯ ಸುನಿಲ್ ಕುಮಾರ್ ಎಂಬವರಿಗೆ ಮೆಸೇಜ್ ಕಳುಹಿಸಿರುವ ಮಹಿಳೆಯೊಬ್ಬರು, ತಮ್ಮ ಅತ್ತೆಯನ್ನು ಸಾಯಿಸಲು ಮಾತ್ರೆಯ ವಿವರ ಕೊಡುವಂತೆ ಕೇಳಿದ್ದಾರೆ. ಮಹಿಳೆಯ ಮಾತು ಕೇಳಿ ಆತಂಕಗೊಂಡ ವೈದ್ಯ ಸುನಿಲ್ ಕುಮಾರ್ ಅವರು ಸಂಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಇನ್‌ಸ್ಟಾಗ್ರಾಂ ಮೂಲಕ ಸುನಿಲ್ ಕುಮಾರ್ ಅವರ ನಂಬರ್ ಪಡೆದಿದ್ದ ಮಹಿಳೆ, ಸೋಮವಾರ ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್ ಮಾಡಿದ್ದಾರೆ. 'ನಮ್ಮ ಅತ್ತೆಗೆ ವಯಸ್ಸಾಗಿದೆ, ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರನ್ನು ಸಾಯಿಸಲು ಯಾವುದಾದರೂ ಐಡಿಯಾ ಹೇಳಿ, ಟ್ಯಾಬ್ಲೆಟ್ ಕುರಿತು ಮಾಹಿತಿ ಕೊಡಿ' ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್ 'ನಾವು ಪ್ರಾಣ ಉಳಿಸುವವರು' ಎಂದಿದ್ದಾರೆ. ತಕ್ಷಣ ತನ್ನ ಮೆಸೇಜ್‌ಗಳನ್ನ ಡಿಲೀಟ್ ಮಾಡಿರುವ ಮಹಿಳೆ ಸುನಿಲ್ ಕುಮಾರ್ ಅವರ ನಂಬರ್ ಬ್ಲಾಕ್ ಮಾಡಿದ್ದಾರೆ. ಇದೊಂದು ಪ್ರಾಂಕ್ ಸಂದೇಶವೋ ಅಥವಾ ಅಸಲಿ ಉದ್ದೇಶವೋ ಎಂಬುದು ತಿಳಿಯದೇ, ಗೊಂದಲಕ್ಕೀಡಾಗಿರುವ ಸುನಿಲ್ ಕುಮಾರ್ ಮಹಿಳೆಯ ಕುರಿತು ಸಂಜಯನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.
"ಮೆಸೇಜ್‌ಗಳನ್ನು ಕಳುಹಿಸಿರುವ ನಂಬರ್ ಸ್ವಿಚ್ ಆಫ್ ಆಗಿದೆ. ಪ್ರಾಂಕ್ ಮೆಸೇಜ್ ಆಗಿರಬಹುದು ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸುನಿಲ್ ಕುಮಾರ್ ಅವರು ನೀಡಿರುವ ಮಾಹಿತಿಯ ಅನ್ವಯ ತನಿಖೆ ನಡೆಸುತ್ತಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ.