
ಬೆಂಗಳೂರು: ನಮ್ಮ ಮೆಟ್ರೋ 'ದುಬಾರಿ'- ಪ್ರಯಾಣ ದರದಲ್ಲಿ ಭಾರಿ ಹೆಚ್ಚಳ
ಬೆಂಗಳೂರು: ನಮ್ಮ ಮೆಟ್ರೋ 'ದುಬಾರಿ'- ಪ್ರಯಾಣ ದರದಲ್ಲಿ ಭಾರಿ ಹೆಚ್ಚಳ
ಬೆಂಗಳೂರು ನಗರದ ಪ್ರಮುಖ ಸಾರ್ವಜನಿಕ ಸಾರಿಗೆಯಾಗಿರುವ ನಮ್ಮ ಮೆಟ್ರೋ ದುಬಾರಿಯಾಗಿದೆ. ನಮ್ಮ ಮೆಟ್ರೋ ಪ್ರಯಾಣ ದರವನ್ನು ಸುಮಾರು ಶೇಕಡ 47 ರಷ್ಟು ಹೆಚ್ಚಿಸಿ ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದೆ. ಹೊಸ ದರಗಳು ತಕ್ಷಣದಿಂದಲೇ ಜಾರಿಯಾಗಲಿದೆ.
ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಮೂವರು ಸದಸ್ಯರ ದರ ನಿಗದಿ ಸಮಿತಿಯನ್ನು ಕೇಂದ್ರ ಸರ್ಕಾರ ನೇಮಿಸಿತ್ತು. ಈ ಸಮಿತಿಯು ನಮ್ಮ ಮೆಟ್ರೋ ದರವನ್ನು ಶೇಕಡ 40 ರಿಂದ ಶೇಕಡ 45ರ ವರೆಗೆ ಹೆಚ್ಚಿಸುವಂತೆ ಶಿಫಾರಸು ಮಾಡಿತ್ತು.
ನಮ್ಮ ಮೆಟ್ರೋದ ಬಿಎಂಆರ್‌ಸಿಎಲ್ ಆಡಳಿತ ಮಂಡಳಿಯು ಸಮಿತಿಯ ಶಿಫಾರಸಿನಂತೆ ಪ್ರಯಾಣ ದರವನ್ನು ಹೆಚ್ಚಳ ಮಾಡಲು ಜನವರಿ ಮೊದಲ ವಾರದಲ್ಲಿಯೇ ನಿರ್ಧರಿಸಿತ್ತು. ಆದರೆ ಅದು ಜಾರಿಗೆ ಬಂದಿರಲಿಲ್ಲ
ಸ್ಮಾರ್ಟ್ ಕಾರ್ಡ್‌ದಾರರಿಗೆ ಶೇಕಡ ಐದರಷ್ಟು ರಿಯಾಯಿತಿ ನೀಡುತ್ತಿದೆ. ಇದರ ಜೊತೆಗೆ ಜನದಟ್ಟಣೆ ರಹಿತ ಸಮಯದಲ್ಲಿ ಸಂಚರಿಸಿದರೆ ಹೆಚ್ಚುವರಿ ಶೇಕಡ ಐದರಷ್ಟು ರಿಯಾಯಿತಿ ಸೇರಿ ಒಟ್ಟು ಶೇಕಡ 10 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ.
ಆದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣದ ಪಾವತಿಸುವ ಪ್ರಯಾಣಿಕರಿಗೆ ಯಾವುದೇ ರಿಯಾಯಿತಿ ನೀಡಿಲ್ಲ. ದರ ಹೆಚ್ಚಳದ ಪ್ರಕಾರ, ಕನಿಷ್ಠ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಗರಿಷ್ಠ ದರವು ರು. 60 ಇದ್ದಿದ್ದು ರೂ. 90 ಕ್ಕೇರಿದೆ.