ಕಾಂತಾವರ ಪ್ರಕೃತಿ ನ್ಯಾಷನಲ್ ಸ್ಕೂಲ್ ನಲ್ಲಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ
ಕಾರ್ಕಳ: ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ ಹಾಗೂ ಪ್ರಕೃತಿ ಸಮೂಹ ಸಂಸ್ಥೆಗಳು ಕಾಂತಾವರ ಗ್ರಾಮ, ಸಾಣೂರು ಅಂಚೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯ ಅಂಗವಾಗಿ, ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ಪ್ರಕೃತಿ ನ್ಯಾಷನಲ್ ಸ್ಕೂಲ್ ಕಾಂತಾವರ ಗ್ರಾಮ ಇಲ್ಲಿ ಜರಗಿತು.
ಸಮಾರಂಭವನ್ನು ಉದ್ಘಾಟಿಸಿದ ಕಾರ್ಕಳ ನ್ಯಾಯವಾದಿಗಳ ಸಂಘ (ರಿ.) ಉಪಾಧ್ಯಕ್ಷ ಕೆ. ಹರೀಶ್ ಅಧಿಕಾರಿ ಅವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007ರ ಫೆಬ್ರವರಿ 20 ರಂದು ಈ ದಿನವನ್ನು ಅಂಗೀಕರಿಸಲಾಯಿತು ಹಾಗೂ 2009ರಲ್ಲಿ ಈ ದಿನವನ್ನು ಆಚರಿಸಲು ಅನುಮೋದನೆ ನೀಡಲಾಯಿತು. ಪ್ರತಿ ಸಮಾಜದಲ್ಲೂ ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅದನ್ನು ಸಂಪೂರ್ಣವಾಗಿ ಕಿತ್ತು ಹಾಕಿದಾಗ ದೇಶದ ಮತ್ತು ವಿಶ್ವದ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಲೋಲಾಕ್ಷ ನ್ಯಾಯವಾದಿಗಳು ಕಾರ್ಕಳ ಇವರು ಸಾಮಾಜಿಕ ಅಸಮಾನತೆಯ ಬಗ್ಗೆ ವಿವರವಾಗಿ ಮಾತನಾಡಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯ ಔಚಿತ್ಯವನ್ನು ವಿವರಿಸಿದರು.
ಶ್ರೀ ಕ್ರಿಸ್ಟಿನ್ ಜೆರಾಲ್ಡ್ ಕ್ರಾಸ್ತಾ, ಅಧ್ಯಕ್ಷರು ಪ್ರಕೃತಿ ಸಮೂಹ ಸಂಸ್ಥೆಗಳು ಕಾಂತಾವರ ಗ್ರಾಮ, ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಧುಸೂದನ್ ಶಿಂಧೆ ಆಡಳಿತ ಅಧಿಕಾರಿಗಳು ಪ್ರಕೃತಿ ಸಮೂಹ ಸಂಸ್ಥೆಗಳು ಕಾಂತಾವರ ಗ್ರಾಮ ಇವರು ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯ ಬಗ್ಗೆ ಮಾತನಾಡಿದರು. ಶ್ರೀ ಚಾರ್ಲ್ಸ್ ಕ್ರಾಸ್ತಾ ಕಾರ್ಯದರ್ಶಿಗಳು, ಪ್ರಕೃತಿ ಸಮೂಹ ಸಂಸ್ಥೆಗಳು ಕಾಂತಾವರ ಗ್ರಾಮ, ಶ್ರೀ ಹರೀಶ್ ಶೆಟ್ಟಿ ಸುಪರ್‌ವೈಸರ್ ಪ್ರಕೃತಿ ಸಮೂಹ ಸಂಸ್ಥೆಗಳು, ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಜಯ ಶೆಣೈಯವರು ಸ್ವಾಗತಿಸಿದರು. ಶ್ರೀಮತಿ ಸೌಮ್ಯ ವೈ ಎಸ್. ವಿಜ್ಞಾನ ಶಿಕ್ಷಕಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಸೌರಭ ಜಿ. ಶೆಟ್ಟಿ ವಿಜ್ಞಾನ ಶಿಕ್ಷಕಿ ವಂದನಾರ್ಪಣೆಗೈದರು.