ಛತ್ರಪತಿ ಶಿವಾಜಿ ಜಯಂತೋತ್ಸವ ಪ್ರಯುಕ್ತ ಆಶ್ರಮಕ್ಕೆ ಆಹಾರ ಧಾನ್ಯವಿತರಣೆ
Wednesday, February 19, 2025
ಛತ್ರಪತಿ ಶಿವಾಜಿ ಮಹಾರಾಜರ ಜಯಂತೋಸ್ಸವದ ಪ್ರಯುಕ್ತ ಕ್ಷತ್ರೀಯ ಮರಾಠ ಸಮಾಜ ರಿ. ಕಾರ್ಕಳ ಇದರ ಆಶ್ರಯದಲ್ಲಿ ಕಾರ್ಕಳ ಜರಿಗುಡ್ಡೆಯ ಸುರಕ್ಷಾ ಆಶ್ರಮಕ್ಕೆ ಆಹಾರ ಧಾನ್ಯ ಮತ್ತು ನಗದು ಆರ್ಥಿಕ ಸಹಾಯವನ್ನು ವಿತರಿಸಲಾಯಿತು.
ಕ್ಷತ್ರಿಯ ಮರಾಠ ಸಮಾಜದ ಅದ್ಯಕ್ಷ ಶುಭದರಾವ್ ಮಾತನಾಡಿ ಶಿವಾಜಿ ಮಹಾರಾಜರ ಜನ್ಮಾದಿನದ ಆಚರಣೆಯು ಅರ್ಥಪೂರ್ಣವಾಗಿ ನಡೆಯಬೇಕಾದರೆ ಅವರ ಹೆಸರಿನಲ್ಲಿ ಪುಣ್ಯದ ಕಾರ್ಯಗಳಾಗಬೇಕು, ಆಶ್ರಮಕ್ಕೆ ಅಹಾರ ಧಾನ್ಯವನ್ನು ಮತ್ತು ಆರ್ಥಿಕ ಸಹಾಯವನ್ನು ವಿತರಿಸುವ ಮೂಲಕ ಶಿವಾಜಿಯ ಆದರ್ಶಗಳನ್ನು ನೆನೆಸುವ ಕೆಲಸ ಮಾಡುತ್ತಿದೇವೆ ಮತ್ತು ಪ್ರತಿವರ್ಷ ಈ ಕೆಲಸವನ್ನು ಮುಂದುವರೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಬದಲ್ಲಿ ಪುರಸಭಾ ಸದಸ್ಯ ಶಿವಾಜಿರಾವ್ ಜಾದವ್, ಸಮಾಜದ ಕಾರ್ಯದರ್ಶಿ ಪ್ರಸನ್ನ ರಾವ್ ಉಚ್ಚ್ಲೇಕರ್, ಸಮಾಜ ಸಂಘಟನೆಯ ಪ್ರಮುಖರಾದ ಪ್ರಕಾಶ್ ಜಾದವ್, ಗುರುಪ್ರಸಾದ್ ಉಚ್ಚ್ಲೇಕರ್, ರೋಷನ್ ಮೋರೆ ,ರಾಕೇಶ್ ಮೋರೆ, ವಿನ್ಯಾಸ್ ಪವಾರ್, ವಿಶ್ವಾಸ್ ಪವಾರ್ ಮೊದಲಾದವರು ಉಪಸ್ಥಿತರಿದ್ದರು.