ಅತ್ತೂರು ಕೈಲಾಜೆ ಉಮಾಮಹೇಶ್ವರ ದೇವಸ್ಥಾನ ದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವ -ನಂದಿಗೋಣ,ರಕ್ತೇಶ್ವರಿ ಕುಕ್ಕಿ ನಂತಾಯಿ, ದೈವಗಳ ನೇಮೋತ್ಸವ ( VIDEO)
Monday, February 3, 2025
ವರದಿ ಅರುಣ್ ಭಟ್ ಕೈಲಾಜೆ ಕಾರ್ಕಳ
ಬೆಳಿಗ್ಗೆ ಕಲಶಾಭಿಷೇಕ,ಹೋಮ ಹವನ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳು ಮದ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ರಾತ್ರಿ ನಂದಿಗೋಣ,ರಕ್ತೇಶ್ವರಿ ಕಾಳರಾತ್ರಿ ಕುಕ್ಕಿ ನಂತಾಯಿ, ದೈವಗಳ ನೇಮೋತ್ಸವ ಹಾಗೂ ಶ್ರೀ ಉಮಾಮಹೇಶ್ವರ ದೇವರಿಗೆ ರಂಗ ಪೂಜೆ ಉತ್ಸವ ಇತ್ಯಾದಿ ವಿಜೃಂಭಣೆಯಿಂದ ನಡೆಯಿತು.
ವೇದಮೂರ್ತಿ ಗುರುರಾಜ್ ಭಟ್ ,ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಅರ್ಚಕರು ಶಿವಶಂಕರ್ ಭಟ್, ಆಡಳಿತ ಮಂಡಳಿ ಯ ಮೊಕ್ತೇಸರ ಅರವಿಂದ ಕಾರ್ನಾಡ್, ಆನಂದ್ ಕಾರ್ನಾಡ್, ಹಾಗೂ ವಿಜಯ್ ಆರೂರ್ ,ಪ್ರಸನ್ನ ಆರ್, ಕೈಲಾಜೆ, ಉದಯ್ ಭಜಕಲ್ ಮತ್ತು ಗಣ್ಯ ವ್ಯಕ್ತಿಗಳಾದ ರವೀಂದ್ರ ಶೆಟ್ಟಿ ಬಜಗೋಳಿ ಹಾಗೂ ಭಕ್ತಾದಿಗಳು ಶ್ರೀ ಉಮಾಮಹೇಶ್ವರ ದೇವರ ಪ್ರಸಾದ ಹಾಗೂ ದೈವಗಳ ಸಿರಿಮುಡಿ ಗಂದ ಪ್ರಸಾದ ಸ್ವೀಕರಿಸಿದರು.