ಮಹಾ ಕುಂಭ ಮೇಳದಲ್ಲಿ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಪುಣ್ಯ ಸ್ನಾನ ( VIDEO)
Thursday, February 13, 2025
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳದಲ್ಲಿ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಪತ್ನಿ ಸಮೇತರಾಗಿ ಪಾಲ್ಗೊಂಡು ಮಾಘ ಹುಣ್ಣಿಮೆಯ ಪವಿತ್ರ ದಿನದಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.
ಅವರೊಂದಿಗೆ ಕಾರ್ಕಳದ ಉದ್ಯಮಿಗಳಾದ ಗಿರೀಶ್ ಶೆಟ್ಟಿ ತೆಳ್ಳಾರು, ಪ್ರಕಾಶ್ ಶೆಟ್ಟಿ ಬಜಗೋಳಿ, ಆನಂದ ಶೆಟ್ಟಿ ಮಂಜೆಮನೆ ಮಿಯ್ಯಾರು ಉಪಸ್ಥಿತರಿದ್ದರು. ಧರ್ಮ ಸಂಸ್ಕೃತಿ ಬಗ್ಗೆ ಕಾಳಜಿ ಹೊಂದಿರುವ ಉದಯ ಶೆಟ್ಟಿ ಮುನಿಯಾಲು ಅವರು ಅಪಾರ ದೈವಭಕ್ತರಾಗಿದ್ದು ಕಳೆದ ಮೌನೀ ಅಮಾವಾಸ್ಯೆಯ ದಿನದಂದು ಕೂಡ ಪ್ರಯಾಗರಾಜ್,ಗೆ ತೆರಳಿ ಪುಣ್ಯಸ್ನಾನವನ್ನು ಕೈಗೊಂಡಿದ್ದು ಇಂದು ಎರಡನೇ ಬಾರಿ ಅವರು ಮಹಾ ಕುಂಭಮೇಳದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.