
ಮುಂಡ್ಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಗಲು ಉತ್ಸವ- ಬ್ರಹ್ಮ ರಥೋತ್ಸವ. (VIDEO)
Wednesday, February 19, 2025
ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದಿವ್ಯ ಸನ್ನಿಧಿಯಲ್ಲಿ ವರ್ಷಾವಧಿ ನಡೆಯುವ ಹಗಲು ಬ್ರಹ್ಮ ರಥೋತ್ಸವ ಕ್ಷೇತ್ರದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯರ ನೇತೃತ್ವದಲ್ಲಿ ಎಡಪದವು ನಾರಾಯಣ ತಂತ್ರಿಗಳ ಪೌರತ್ವದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಕಲಶಾಭಿಷೇಕ ಪೂರ್ವಾಹ್ನ 11 ಗಂಟಗೆ ಮಹಾಪೂಜೆ, ದೇವರ ಉತ್ಸವ ಬಲಿಮೂರ್ತಿ ಪೂಜೆ ,ದೇವರ ರಥೋರಣ, ಹಗಲು ರಥೋತ್ಸವ ಪಲ್ಲಪೂಜೆ ,ಮಹಾ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭದಲ್ಲಿ ದೇವಳದ ಪವಿತ್ರ ಪಾಣಿ ರಾಮ ಮಡ್ಮಣ್ಣಾಯ ದೇಗುಳದ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ. ರಾವ್ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುರೇಂದ್ರ ಎಸ್ . ಶೆಟ್ಟಿ ಕೋರಿಬೆಟ್ಟು ಗುತ್ತು , ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸುಜಾತ ಸುಭೋಧ್ ಶೆಟ್ಟಿ ಸಚ್ಚೇರಪರಾರಿ, ಅಕ್ಷತಾ ವಿಶ್ರಿ ತ್ ಶೆಟ್ಟಿ, ಜಗದೀಶ್ ಶೆಟ್ಟಿ ನಡಿಗುತ್ತು, ಶೇಖರ್ ಶೆಟ್ಟಿ ಮಾಣೆಬೆಟ್ಟು, ಕೃಷ್ಣ ಪೂಜಾರಿ ಬಂಟ್ರೋಟ್ಟು ,ಸುರೇಶ ಸಾಲಿಯಾನ್ ಅಲಂಗಾರ್, ನಲಿನಾಕ್ಷಿ ರಾಜು ಸೇರಿಗಾರ ಕಡಪು ಕರಿಯ ಮುಂಡ್ಕೂರು ಮುಲ್ಲಡ್ಕ ,ಇನ್ನಾ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂಜೆ ಬ್ರಹ್ಮರಥದಲ್ಲಿ ಹೂವಿನ ಪೂಜೆ ರಾತ್ರಿ ರಥೋತ್ಸವ ನಡೆಯಲಿದೆ .