-->

ದೈಹಿಕ ಸಂಪರ್ಕಕ್ಕಾಗಿ ಪ್ರೀತಿಯ ನಾಟಕ, ಗರ್ಭಿಣಿ ಆಗುತ್ತಿದ್ದಂತೆ ಕಿರುತೆರೆ ನಟಿಯ ಕೊಲೆ- ದೇವಸ್ಥಾನದ ಅರ್ಚಕನಿಗೆ ಜೀವಾವಧಿ ಶಿಕ್ಷೆ, 10ಲಕ್ಷ ದಂಡ

ದೈಹಿಕ ಸಂಪರ್ಕಕ್ಕಾಗಿ ಪ್ರೀತಿಯ ನಾಟಕ, ಗರ್ಭಿಣಿ ಆಗುತ್ತಿದ್ದಂತೆ ಕಿರುತೆರೆ ನಟಿಯ ಕೊಲೆ- ದೇವಸ್ಥಾನದ ಅರ್ಚಕನಿಗೆ ಜೀವಾವಧಿ ಶಿಕ್ಷೆ, 10ಲಕ್ಷ ದಂಡ




ಪ್ರೀತಿ-ಪ್ರೇಮ ಎಂದು ಕಿರುತೆರೆ ನಟಿ ಅಪ್ಸರಾರೊಂದಿಗೆ ದೈಹಿಕ ಸಂಪರ್ಕ ಹೊಂದಿ ಆಕೆಯನ್ನು ಮದುವೆ ಮಾಡಿಕೊಳ್ಳದೆ ಬಲವಂತವಾಗಿ ಗರ್ಭಪಾತ ಮಾಡಿಸಿದ್ದ ಆರೋಪಿ ದೇವಸ್ಥಾನವೊಂದರ ಪ್ರಧಾನ ಅರ್ಚಕ ವೆಂಕಟ ಸಾಯಿ ಕೃಷ್ಣ, ಆಕೆಯನ್ನು ಕೊಲೆಗೈದು, ಮೃತದೇಹವನ್ನು ಒಳಚರಂಡಿಯಲ್ಲಿ ಮುಚ್ಚಿಟ್ಟಿದ್ದ. ಈ ಕೊಲೆ ಕೇಸ್ ಪ್ರಕರಣದಲ್ಲಿ ನಿನ್ನೆಯಷ್ಟೇ ಕೋರ್ಟ್ ತೀರ್ಪು ನೀಡಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ನಟಿ ಅಪ್ಸರಾಳನ್ನು ದೇವಸ್ಥಾನದಲ್ಲಿ ಪರಿಚಯ ಮಾಡಿಕೊಂಡಿದ್ದ ಸಾಯಿ ಕೃಷ್ಣ, ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕ ಇಟ್ಟುಕೊಂಡಿದ್ದ. ಬಳಿಕ ಈ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ಬೆಳೆದಿತ್ತು. ಇದೇ ನಟಿಯ ಬಾಳಿಗೆ ಉರುಳಾಯಿತು. ಆರಂಭದಲ್ಲಿ ತಾನು ನೈಜವಾಗಿ ಪ್ರೀತಿಸುತ್ತಿರುವುದಾಗಿ ನಟಿಯೊಂದಿಗೆ ನಟಿಸಿದ್ದ ಸಾಯಿ ಕೃಷ್ಣ, ಅಪ್ಸರಾ ಮದುವೆ ಮಾಡಿಕೊಳ್ಳೋಣ ಎಂದು ಹೇಳುತ್ತಿದ್ದಂತೆ ತನ್ನ ಮಾತಿಗೆ ವಿರುದ್ಧವಾಗಿ ಸಾಗಲು ಪ್ರಾರಂಭಿಸಿದ್ದ. ಅಲ್ಲದೆ ಆಕೆ ಗರ್ಭವತಿಯಾದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದ. ಈ ವೇಳೆ ಮದುವೆ ಮಾಡಿಕೊಳ್ಳದೆ ಹೋದರೆ ನಿನ್ನ ಕರಾಳ ಮುಖ ಕಳಚಿಡುತ್ತೇನೆ ಎಂದು ಅಪ್ಸರಾ ಎಚ್ಚರಿಕೆ ನೀಡಿದ್ದಳು.

ಮದುವೆ ವಿಷಯದಿಂದ ಅಕ್ಷರಶಃ ಕಂಗಾಲಾಗಿದ್ದ  ಸಾಯಿ, ಆಕೆಯನ್ನು ಹತ್ಯೆಗೈಯುವುದೇ ಕೊನೆಯ ಆಯ್ಕೆ ಎಂದು ನಿರ್ಧರಿಸಿ, ಕಾರಿನ ಸೀಟ್ ಕವರ್‌ನಿಂದ ಅಪ್ಸರಾಳನ್ನು ಉಸಿರುಗಟ್ಟಿಸಿ, ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದ. ಬಳಿಕ ಕಾರಿಗೆ ಮುಚ್ಚುವ ಕವರ್‌ನಲ್ಲಿ ಅಪ್ಸರಾ ಮೃತದೇಹವನ್ನು ಸುತ್ತಿಟ್ಟಿದ್ದ ಸಾಯಿ, ದೇಹವನ್ನು ಕಾರಿನ ಡಿಕ್ಕಿಯಲ್ಲೇ ಎರಡು ದಿನಗಳ ಕಾಲ ಅಡಗಿಸಿಟ್ಟಿದ್ದ. ಬಳಿಕ ಮನೆಯ ಸಮೀಪದಲ್ಲಿದ್ದ 20 ಅಡಿ ಆಳದ ಒಳಚರಂಡಿಗೆ ಅಪ್ಸರಾಳ ಮೃತದೇಹ ಎಸೆದಿದ್ದ. ಆದರೆ ಮೃತದೇಹ ಕೊಳೆತು ಕೆಟ್ಟ ವಾಸನೆ ಬರುತ್ತಿದ್ದಂತೆ ಎಲ್.ಬಿ. ನಗರದಿಂದ ಕಾರ್ಮಿಕರನ್ನು ಕರೆಸಿ, ಎರಡು ಲೋಡ್ ಮಣ್ಣನ್ನು ತರಿಸಿ, ಗುಂಡಿಯನ್ನು ಸಿಮೆಂಟ್‌ನಿಂದ ಮುಚ್ಚಿಸಿದ್ದ. ಕಡೆಗೆ ಪೊಲೀಸರ ತನಿಖೆಯಲ್ಲಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ.

ತನಗೆ ಮದುವೆಯಾಗಿದ್ದರೂ, ಅಪ್ಸರಾಳೊಂಸಿಗೆ ಸಂಬಂಧ ಹೊಂದಿದ್ದ ಸಾಯಿ ಕೃಷ್ಣ, ವೃತ್ತಿಯಲ್ಲಿ ಅರ್ಚಕ. ಆದರೂ ವಿಚ್ಛೇದನ ಪಡೆದುಕೊಂಡಿದ್ದ ಕಿರುತೆರೆ ಕಲಾವಿದೆ ಅಪ್ಸರಾರೊಂದಿಗೆ ಪ್ರೀತಿ ಸಂಬಂಧ ಹೊಂದಿದ್ದ. ಬಳಿಕ ಆಕೆಯೊಂದಿಗಿನ ದೈಹಿಕ ಸುಖಕ್ಕಾಗಿ, ನಟಿಯನ್ನು ನಿಜವಾಗಿ ಪ್ರೀತಿಸುತ್ತಿರುವಂತೆ ನಟಿಸಿ, ಮದುವೆ ಆಗುವುದಾಗಿಯೂ ನಂಬಿಸಿದ್ದ. ನಾಲ್ಕು ವರ್ಷಗಳ ಕಾಲ ಈ ಸಂಬಂಧವನ್ನು ಮುಂದುವರಿಸಿಕೊಂಡು ಬಂದಿದ್ದ ಅಪ್ಸರಾ, ತನ್ನನ್ನು ಮದುವೆಯಾಗುವಂತೆ ಸಾಯಿಗೆ ಒತ್ತಡ ಹೇರಿದ್ದಳು. ಇದೇ ಆಕೆಯ ದುರಂತ ಅಂತ್ಯಕ್ಕೆ ಕಾರಣವಾಯಿತು.

ಗೂಗಲ್‌ನಲ್ಲಿ ಸರ್ಚ್, ಕೊಲೆಗೆ ಸ್ಕೆಚ್

ಪರಿಚಯವಾಗಿ ಒಂದು ವರ್ಷದೊಳಗೆ ಅಪ್ಸರಾ-ಸಾಯಿ ಕೃಷ್ಣ ನಡುವಿನ ಬಾಂಧವ್ಯ ಮತ್ತಷ್ಟು ಬಲವಾಯಿತು. ತನ್ನ ತಾಯಿಯೊಂದಿಗೆ ಚೆನ್ನೈನಿಂದ ಹೈದರಾಬಾದ್‌ಗೆ ಬಂದ ಅಪ್ಸರಾ, ಸರೂ‌ರ್ ನಗರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದು ಸಿನಿಮಾ ಅವಕಾಶಗಳನ್ನು ಹುಡುಕುತ್ತಿದ್ದಳು. ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದ ಅಪ್ಸಾರಾಗೆ, 2022ರಲ್ಲಿ, ಸರೂರ್ ನಗರ ಬಂಗಾರು ಮೈಸಮ್ಮ ದೇವಸ್ಥಾನದ ಪ್ರಧಾನ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ವೆಂಕಟ ಸಾಯಿ ಕೃಷ್ಣನ ಪರಿಚಯವಾಗಿದೆ. ಸಾಯಿ ಕೃಷ್ಣ ಆಗಾಗ್ಗೆ ಆಕೆಗೆ ವಾಟ್ಸ್ಆ್ಯಪ್ ಮೂಲಕ ಸಂದೇಶಗಳನ್ನು ಕಳುಹಿಸುತ್ತಿದ್ದ. ಸಾಯಿ ಆಗಾಗ್ಗೆ ಅವಳನ್ನು ಶಂಶಾಬಾದ್‌ನಲ್ಲಿ ನಡೆಸುತ್ತಿದ್ದ ಗೋಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ಹೀಗೆ ಇಬ್ಬರ ನಡುವಿನ ಸ್ನೇಹ ಆಳವಾಗಿ ಬೇರೂರಿತು.

ಇಬ್ಬರೂ ವಾಟ್ಸ್ಆ್ಯಪ್ ಮೂಲಕ ತಮ್ಮ ಪ್ರೀತಿ ನಿವೇದನೆ ಮಾಡಿಕೊಂಡಿದ್ದರು. ಆಗಲೇ, ಅಪ್ಸರಾ ಈಗಾಗಲೇ ಮದುವೆಯಾಗಿ ತನ್ನ ಪತಿಗೆ ವಿಚ್ಛೇದನ ನೀಡಿದ್ದರು. ಮತ್ತೊಂದೆಡೆ, ಸಾಯಿ ಕೃಷ್ಣ ಕೂಡ ಮದುವೆಯಾಗಿದ್ದ. ಆದರೆ, ಇಬ್ಬರೂ ಅತ್ಯಾಪ್ತರಾಗಿದ್ದ ಹಿನ್ನೆಲೆ ಇದ್ಯಾವುದು ಹೆಚ್ಚಾಗಿ ಚರ್ಚೆಯಾಗಿರಲಿಲ್ಲ. ಚಿತ್ರಗಳಲ್ಲಿ ನಟಿಸುವ ಅವಕಾಶ ಕೊಡಿಸುವ ನೆಪದಲ್ಲಿ ಆಗಾಗ್ಗೆ ಆಕೆಯನ್ನು ಸಾಯಿ ಭೇಟಿ ಮಾಡುತ್ತಿದ್ದ. ದೈಹಿಕ ಸಂಪರ್ಕ ಬೆಳೆಸಿದ ನಂತರ ಮದುವೆಯಾಗಲು ನಕಾರ ತೆಗೆದಿದ್ದ ಆರೋಪಿ, ಅಪ್ಸರಾಳ ಮಾತಿಗೆ ಒಪ್ಪಿಗೆ ನೀಡಲಿಲ್ಲ. ಇದೇ ಇಬ್ಬರ ನಡುವಿನ ದೊಡ್ಡ ಜಟಾಪಟಿಗೆ ಕಾರಣವಾಯಿತು.

ತನ್ನಪಂದಿಗೆ ದೈಹಿಕ ಸಂಪರ್ಕ ಹೊಂದಿದ್ದೀಯಾ. ಈಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದೀಯಾ! ಇದು ಸರಿಯಲ್ಲ. ನೀನೇನಾದರೂ ನನ್ನನ್ನು ವಿವಾಹವಾಗಲು ಮುಂದಾಗಲಿಲ್ಲ ಎಂದರೆ, ಖಂಡಿತ ನಿನ್ನ ಅಸಲಿ ಮುಖವನ್ನು ಎಲ್ಲರ ಮುಂದೆ ಕಳಚಿಡುತ್ತೇನೆ ಎಂದು ಅಪ್ಸರಾ ಎಚ್ಚರಿಕೆ ನೀಡಿದ್ದಳು. ಇದನ್ನು ಸಹಿಸಲಾಗದ ಸಾಯಿ, ಒಂದೇ ಒಂದು ರಾತ್ರಿಯಲ್ಲಿ ಅಪ್ಸರಾಳ ಉಸಿರನ್ನೇ ನಿಲ್ಲಿಸಿದೆ.

ಜೀವಾವಧಿ ಶಿಕ್ಷೆ, 10 ಲಕ್ಷ ರೂ. ದಂಡ

2023ರಲ್ಲಿ ದಾಖಲಾದ ಪ್ರಕರಣದ ಕೇಸ್ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಸಾಯಿ ಕೃಷ್ಣನಿಗೆ ಇದೀಗ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರೊಂದಿಗೆ 10 ಲಕ್ಷ ರೂ. ದಂಡ ಕೂಡ ವಿಧಿಸಿದ್ದು, ಸಂತ್ರಸ್ತೆಯ ಕುಟುಂಬಕ್ಕೆ 9.75 ಲಕ್ಷ ಮತ್ತು ನ್ಯಾಯಾಲಯಕ್ಕೆ 25,000 ಪಾವತಿಸಲು ನಿರ್ದೇಶಿಸಿದೆ.

Ads on article

Advertise in articles 1

advertising articles 2

Advertise under the article