ತನ್ನ ಕನ್ಯತ್ವವನ್ನು ಹರಾಜಿಗಿಟ್ಟ ವಿದ್ಯಾರ್ಥಿನಿ: 18ಕೋಟಿ ರೂ.ಗೆ ಖರೀದಿಸಿದ ಹಾಲಿವುಡ್ ಹೀರೊ
ಹಾಲಿವುಡ್ ಹೀರೋಗಳ ವಿವಿಧ ಕಯಾಲಿ ಇರುವವರು. ಇದೀಗ ಹಾಲಿವುಡ್ ಹೀರೋ ಒಬ್ಬರು ದೊಡ್ಡ ಮೊತ್ತಕ್ಕೆ ವಿದ್ಯಾರ್ಥಿನಿಯೊಬ್ಬಳ ಕನ್ಯತ್ವ ಖರೀದಿಸಿದ್ದು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಹೌದು, ಇತ್ತೀಚೆಗೆ ನಡೆದ ಬಿಡ್ಡಿಂಗ್ನಲ್ಲಿ ಈ ಘಟನೆ ನಡೆದಿದೆ.
ಲಂಡನ್ ಮೂಲದ ವಿದ್ಯಾರ್ಥಿನಿಯೊಬ್ಬಳು ಕನ್ಯತ್ವ ಕಳೆದುಕೊಳ್ಳಲು ಇಷ್ಟೊಂದು ದೊಡ್ಡ ಮೊತ್ತದ ಹಣ ಪಡೆದುಕೊಂಡಿದ್ದಾಳೆ. ಜೀವನದಲ್ಲಿ ಸೆಟಲ್ ಆಗಬೇಕು ಎಂಬುದು ಆಕೆಯ ಆಸೆ. ಅದಕ್ಕಾಗಿ ಈ ಹಾದಿ ಹಿಡಿದಿದ್ದಾಳಂತೆ.
ಲಂಡನ್ನ ಮ್ಯಾಂಚೆಸ್ಟರ್ ವಿದ್ಯಾರ್ಥಿನಿ ಲೌರಾ ಎಂಬಾ 22 ವರ್ಷದ ವಿದ್ಯಾರ್ಥಿನಿ ಬಾಲಿವುಡ್ ಹೀರೋಗಾಗಿ ತನ್ನ ಕನ್ಯತ್ವ ಕಳೆದುಕೊಳ್ಳಲು ತಯಾರಾಗಿ ಇದೀಗ ಸುದ್ದಿಯಲ್ಲಿ ಇದ್ದಾಳೆ. ಅವಳು ತನ್ನ ಕನ್ಯತ್ವವನ್ನು ವೆಬ್ಸೈಟ್ ಮೂಲಕ ಹರಾಜಿಗೆ ಇಟ್ಟಿದ್ದಳು. ಈ ಹರಾಜಿನಲ್ಲಿ ಜನಸಾಮಾನ್ಯರು, ಉದ್ಯಮಿಗಳು, ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದರು. ಈಗ ಈ ವಿದ್ಯಾರ್ಥಿನಿಯ ಕನ್ಯತ್ವ ಹಾಲಿವುಡ್ ಹೀರೋಗೆ ಮಾರಾಟ ಆಗಿದೆ. ಆದರೆ, ಹೀರೋನ ಹೆಸರು ಎಲ್ಲಿಯೂ ರಿವೀಲ್ ಆಗಿಲ್ಲ.
ಲೌರಾ ಧಾರ್ಮಿಕ ಹಿನ್ನೆಲೆ ಹೊಂದಿರುವವಳು. ಅವಳಿಗೆ ತನ್ನ ನಿರ್ಧಾರದ ಬಗ್ಗೆ ಯಾವುದೇ ಬೇಸರ ಇಲ್ಲ. ತನ್ನ ಜೀವನ ಸೆಟಲ್ ಮಾಡಿಕೊಳ್ಳಲು ಇದು ಒಳ್ಳೆಯ ಆಯ್ಕೆ ಎಂದು ಆಕೆ ಹೇಳಿದ್ದಾಳೆ. ‘ನನಗೆ ಈ ಬಗ್ಗೆ ಬೇಸರವಿಲ್ಲ ಏನೂ ಸಿಗದೇ ಕೆಲವರು ಕನ್ಯತ್ವ ಕಳೆದುಕೊಳ್ಳುತ್ತಾರೆ. ನನಗೆ ಭವಿಷ್ಯವೇ ಸೆಟಲ್ ಆಗುತ್ತಿದೆ’ ಎಂದು ಅವಳು ಹೇಳಿದ್ದಾಗಿ ವರದಿ ಆಗಿದೆ.
ಲೌರಾನ ಕನ್ಯತ್ವ ಪಡೆದುಕೊಳ್ಳಲು ಹಾಲಿವುಡ್ನ ಹೀರೋಗಳೊಂದಿಗೆ ಅನೇಕ ರಾಜಕಾರಣಿಗಳು, ಉದ್ಯಮಿಗಳು ರೇಸ್ನಲ್ಲಿದ್ದರು. ಅಂತಿಮವಾಗಿ 18 ಕೋಟಿ ರೂ. ಕೊಡಲು ರೆಡಿಯಾದ ಹೀರೋಗೆ ಲೌರಾ ಸಿಕ್ಕಿದ್ದಾಳೆ. ಲೌರಾ ಇನ್ನೂ ಶಿಕ್ಷಣ ಪಡೆಯುತ್ತಿದ್ದಾಳೆ. ಈ ರೀತಿ ಬಂದ ಹಣವನ್ನು ಓದಿಗೆ ಬಳಕೆ ಮಾಡೋದಾಗಿ ಹೇಳಿದ್ದಾಳೆ. ಅಲ್ಲದೆ, ಭವಿಷ್ಯದಲ್ಲಿ ಹಣಕ್ಕಾಗಿ ಸುಗರ್ ಡ್ಯಾಡಿನ ಹುಡುಕಿಕೊಳ್ಳೋದಾಗಿ ಹೇಳಿದ್ದಾಳೆ.
ಲೌರಾ ಕನ್ಯೆ ಹೌದೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಲು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಆಕೆ ಕನ್ಯತ್ವ ಹೊಂದಿದ್ದಾಳೆ ಎಂಬ ವರದಿ ಬಂದ ಬಳಿಕವೇ ಅವಳನ್ನು ಹರಾಜಿಗೆ ಇಡಲಾಗಿತ್ತು. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಕೆಲವರು ಇದನ್ನು ಟೀಕಿಸಿದ್ದಾರೆ. ಆದರೆ, ಇದಕ್ಕೆ ಲೌರಾ ತಲೆಕೆಡಿಸಿಕೊಂಡಿಲ್ಲ.