-->

ಎ.28 - ಮೇ 6 ವರೆಗೆ  ವಿಟ್ಲ  ಅನಂತೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶಾಂಗ ರಥೋತ್ಸವ

ಎ.28 - ಮೇ 6 ವರೆಗೆ ವಿಟ್ಲ ಅನಂತೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶಾಂಗ ರಥೋತ್ಸವ


ವರದಿ: ಅರುಣ್ ಭಟ್, ಕೈಲಾಜೆ, ಕಾರ್ಕಳ

ಮಂಗಳೂರು: ಎ.28 ರಿಂದ ಮೇ 6 ವರೆಗೆ ವಿಟ್ಲ  ಅನಂತೇಶ್ವರ ದೇವಸ್ಥಾನದಲ್ಲಿ ಚಿತ್ರಾಪುರ ಮಠಾಧೀಶರಾದ ಶ್ರೀಶ್ರೀಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಯವರ ಮಾರ್ಗದರ್ಶನದಲ್ಲಿ ಬ್ರಹ್ಮಕಲಶಾಂಗ ರಥೋತ್ಸವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.



ಕಾರ್ಯಕ್ರಮದ ವಿವರ


ಕಾರ್ಯಕ್ರಮಗಳು


28-04-2025 ಸೋಮವಾರ ವೈಶಾಖ ಶುಕ್ಲ ಪ್ರತಿಪದೆ


ಪ್ರಾತಃಕಾಲದಲ್ಲಿ ಮೃತ್ತಿಕಾಹರಣ (ಆದಿಸ್ಥಳದಿಂದ), ಸಾಮೂಹಿಕ ಪ್ರಾರ್ಥನೆ, ಕೋಶಾಗಾರ ಪೂಜೆ, ಶ್ರೀ ಮಹಾಗಣಪತಿ ಪ್ರೀತ್ಯರ್ಥ ಗಣಹೋಮ, ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಅಭಿಷೇಕ, ಪೂಜೆ, ರಾತ್ರಿ ರಂಗಪೂಜೆ (ಮಹಾಗಣಪತಿ ಸನ್ನಿಧಿ), ನಿತ್ಯಪೂಜೆ (ಶ್ರೀಮತ್ ಅನಂತೇಶ್ವರ ಸನ್ನಿಧಿ) ಸಂಜೆ ನಾಗತಂಬಿಲ (ನಾಗಕಟ್ಟೆಯಲ್ಲಿ)


29-04-2025 | ಮಂಗಳವಾರ ವೈಶಾಖ ಶುಕ್ಲ ಬಿದಿಗೆ


ಶ್ರೀ ಮಹಾಲಕ್ಷ್ಮೀ ಪ್ರೀತ್ಯರ್ಥ ನವಚಂಡೀ ಹವನ, ಶ್ರೀ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಅಭಿಷೇಕ, ಪೂಜೆ, ರಾತ್ರಿ ರಂಗಪೂಜೆ (ಶ್ರೀ ಮಹಾಲಕ್ಷ್ಮೀ ಸನ್ನಿಧಿ) ಧ್ವಜದೇವತಾ -ಅಧಿವಾಸಾಧಿಕಾರ್ಯ, ನಿತ್ಯಪೂಜೆ, ಸಂಜೆ ನಾಗತಂಬಿಲ (ನಾಗಕಟ್ಟೆಯಲ್ಲಿ)


30-04-2025 ಬುಧವಾರ ವೈಶಾಖ ಶುಕ್ಲ ತದಿಗೆ


ಶ್ರೀ ಗುರುಪಾದುಕಾ ಪ್ರೀತ್ಯರ್ಥ ಶ್ರೀ ಗುರುಮಂತ್ರ ಹವನ, (ಶ್ರೀ ಗುರುಪಾದುಕಾ ಸನ್ನಿಧಿಗಳಲ್ಲಿ) ಕಲಶಾಭಿಷೇಕ, ಪೂಜೆ, ಧ್ವಜಾರೋಹಣ ಮಧ್ಯಾಹ್ನ 12.00 ಕ್ಕೆ, ಬಲಿ, ರಾತ್ರಿ ರಂಗಪೂಜೆ (ಶ್ರೀ ಆನಂದಾಶ್ರಮ ಪಾದುಕಾ ಸನ್ನಿಧಿ, ಶ್ರೀ ಪರಿಜ್ಞಾನಾಶ್ರಮ ಪಾದುಕಾ ಸನ್ನಿಧಿ), ನಿತ್ಯಪೂಜೆ ಹಾಗೂ ಉತ್ಸವ


01-05-2025 | ಗುರುವಾರ ವೈಶಾಖ ಶುಕ್ಲ ಚತುರ್ಥಿ |


ಶ್ರೀ ಉಮಾಮಹೇಶ್ವರ ಪ್ರೀತ್ಯರ್ಥ ರುದ್ರಹೋಮ, ಸಪ್ತದ್ರವ್ಯದಿಂದ ಮೃತ್ಯುಂಜಯ ಹೋಮ ಅಭಿಷೇಕ, ಪೂಜೆ (ಶ್ರೀ ಉಮಾಮಹೇಶ್ವರ ಸನ್ನಿಧಿಯಲ್ಲಿ) ರಾತ್ರಿ ರಂಗಪೂಜೆ, ನಿತ್ಯಪೂಜೆ ಹಾಗೂ ಉತ್ಸವ


02-05-2025 ಶುಕ್ರವಾರ ವೈಶಾಖ ಶುಕ್ಲ ಪಂಚಮಿ


ಶ್ರೀಮತ್ ಅನಂತೇಶ್ವರ ಮತ್ತು ಶ್ರೀ ಲಕ್ಷ್ಮೀನರಸಿಂಹ ದೇವರ ಪ್ರೀತ್ಯರ್ಥ ಚಕ್ರಾಬ್ಬಪೂಜೆ 1008 ಕಲಶ ಸ್ಥಾಪನೆ, ಮಹಾಪೂಜೆ, ರಾತ್ರಿ ರಂಗಪೂಜೆ (ಶ್ರೀ ಲಕ್ಷ್ಮೀನರಸಿಂಹ ಪ್ರೀತ್ಯರ್ಥ) ನಿತ್ಯಪೂಜೆ ಹಾಗೂ ಉತ್ಸವ


03-05-2025 ಶನಿವಾರ | ವೈಶಾಖ ಶುಕ್ಲ ಷಷ್ಠಿ


ಶ್ರೀಮತ್‌ ಅನಂತೇಶ್ವರ ದೇವರ ವರ್ಧಂತಿ ಶ್ರೀ ಚಿತ್ರಾಪುರ ಮಠಾಧೀಶರಾದ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪೂರ್ಣಾಹುತಿ, ಶ್ರೀಗಳ ಅಮೃತಹಸ್ತದಿಂದ ಸಹಸ್ರಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನೆರವೇರುವುದು. ರಾತ್ರಿ ಶ್ರೀಮತ್ ಅನಂತೇಶ್ವರ ಸನ್ನಿಧಿಯಲ್ಲಿ ರಂಗಪೂಜೆ, ಮೃಗಬೇಟೆ ಉತ್ಸವ


04-05-2025 ರವಿವಾರ ವೈಶಾಖ ಶುಕ್ಲ ಸಪ್ತಮಿ


ಶ್ರೀ ಹನುಮಂತ ಹಾಗೂ ಶ್ರೀ ಗರುಡ ಪ್ರೀತ್ಯರ್ಥ ಹವನ, ಅಭಿಷೇಕ, ಪೂಜೆ ಮಧ್ಯಾಹ್ನ ರಥಾರೋಹಣ, ಶ್ರೀಗಳಿಂದ ಪೂಜೆ, ಮಹಾರಥೋತ್ಸವ, ಅನ್ನಸಂತರ್ಪಣೆ ಸಂಜೆ ಧರ್ಮಸಭೆ, ಭಂಡಿ ಉತ್ಸವ


05-05-2025 ಸೋಮವಾರ ವೈಶಾಖ ಶುಕ್ಲ ಅಷ್ಟಮಿ


ಅವಚ್ಛತೋತ್ಸವ, ಧ್ವಜಾವರೋಹಣ, ಸಾಮೂಹಿಕ ಪ್ರಾರ್ಥನೆ, ಅಂಕುರ ಪ್ರಸಾದ ವಿತರಣೆ ಸಂಜೆ ನಾಗತಂಬಿಲ (ನಾಗಕಟ್ಟೆಯಲ್ಲಿ)


06-05-2025 ಮಂಗಳವಾರ ವೈಶಾಖ ಶುಕ್ಲ ನವಮಿ


ಬೆಳಿಗ್ಗೆ ಆಶ್ಲೇಷಬಲಿ ಸಂಜೆ ನಾಗತಂಬಿಲ (ನಾಗಕಟ್ಟೆಯಲ್ಲಿ)


ಈ ಎಲ್ಲಾ ಕಾರ್ಯಕ್ರಮಗಳು  ಚಿತ್ರಾಪುರ ಮಠಾಧೀಶರಾದ  ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿವೆ. ಈ ಪುಣ್ಯಕಾರ್ಯದಲ್ಲಿ ಭಗವದ್ಭಕ್ತರಾದ  ಭಾಗವಹಿಸುವಂತೆ  ವಿಟ್ಲ  ಅನಂತೇಶ್ವರ ದೇವಸ್ಥಾನದ ಬ್ರಹ್ಮಕಲಶ ಸಮಿತಿ ತಿಳಿಸಿದೆ.

 


Ads on article

Advertise in articles 1

advertising articles 2

Advertise under the article