-->

ಕಾಂಪ್ ಕ್ಲೌಡ್ ಐಟಿ ಸರ್ವಿಸಸ್ ಜತೆ ಆಳ್ವಾಸ್ ಒಪ್ಪಂದ: ಸುರಕ್ಷಿತ, ವಿಶ್ವಾಸಾರ್ಹ ಐಟಿ ತಂತ್ರಜ್ಞಾನ ವ್ಯವಸ್ಥೆಗೆ ಕರಾರು

ಕಾಂಪ್ ಕ್ಲೌಡ್ ಐಟಿ ಸರ್ವಿಸಸ್ ಜತೆ ಆಳ್ವಾಸ್ ಒಪ್ಪಂದ: ಸುರಕ್ಷಿತ, ವಿಶ್ವಾಸಾರ್ಹ ಐಟಿ ತಂತ್ರಜ್ಞಾನ ವ್ಯವಸ್ಥೆಗೆ ಕರಾರು

ಕಾಂಪ್ ಕ್ಲೌಡ್ ಐಟಿ ಸರ್ವಿಸಸ್ ಜತೆ ಆಳ್ವಾಸ್ ಒಪ್ಪಂದ: ಸುರಕ್ಷಿತ, ವಿಶ್ವಾಸಾರ್ಹ ಐಟಿ ತಂತ್ರಜ್ಞಾನ ವ್ಯವಸ್ಥೆಗೆ ಕರಾರು





ಎಜುಕೇಶನ್ ಡೆಸ್ಕಟಾಪ್-ಆಸ್-ಎ-ಸರ್ವೀಸ್ (EDaaS) ಮೂಲಕ ಸಂಸ್ಥೆಯಲ್ಲಿನ ದತ್ತಾಂಶಗಳ ವ್ಯವಸ್ಥಿತ ನಿರ್ವಹಣೆಗಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯಗಳನ್ನು ಒದಗಿಸುವ ಕಾಂಪ್ ಕ್ಲೌಡ್ ಐಟಿ ಸರ್ವಿಸಸ್‌ನ ಜೊತೆಗೆ (CompCloud IT Services) ಮುಂದಿನ 5 ವರ್ಷಗಳಿಗೆ ಒಡಂಬಡಿಕೆ ಮಾಡಿಕೊಂಡಿದೆ.


ಈ ವ್ಯವಸ್ಥೆಯ ನೆರವಿನಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತನ್ನ ಸಂಸ್ಥೆಗಳಲ್ಲಿ ವರ್ಚುವಲ್ ಡೆಸ್ಕ್ ಟಾಪ್ ಸೌಕರ್ಯವನ್ನು ಪ್ರತಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಒದಗಿಸಿದ್ದು, ಈ ಮೂಲಕ ಸಾಫ್ಟ್ವೇರ್ ಡಿಫೈನ್ಡ್ ನೆಟ್‌ವರ್ಕ್ (ಎಸ್‌ಡಿಎನ್) ಜೊತೆಗೆ ಕೇಂದ್ರೀಕೃತ ಗಣಕ ನಿರ್ವಹಣಾ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಂಪ್ರದಾಯಿಕ ಡೆಸ್ಕಟಾಪ್‌ಗಳಿಗೆ ಹೋಲಿಸಿದರೆ, ಎಜುಕೇಶನ್ ಡೆಸ್ಕಟಾಪ್-ಆಸ್-ಎ-ಸರ್ವೀಸ್ ವ್ಯವಸ್ಥೆಯ ಮೂಲಕ ಶೇ. 80 ವಿದ್ಯುತ್ ಉಳಿತಾಯವಾಗಲಿದೆ.


ಸ್ಕಾಟ್ಲೆಂಡ್‌ನಲ್ಲಿ ನೆಲೆಸಿರುವ ಕಾಂಪ್ ಕ್ಲೌಡ್ ಐಟಿ ಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ, ಆ ದೇಶದಲ್ಲಿನ ಶಿಕ್ಷಣ ಕ್ಷೇತ್ರದಲ್ಲಿನ ಅತ್ಯಾಧುನಿಕ ಗುಣಮಟ್ಟದ ಮಾಹಿತಿ ತಂತ್ರಜ್ಞಾನದ ಸೇವೆಯನ್ನು ಈ ವ್ಯವಸ್ಥೆಯ ಮೂಲಕ ನೀಡಲಿದ್ದಾರೆ.


ಒಡಂಬಡಿಕೆಯ ಕುರಿತು ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ , ದೀರ್ಘ ಬಾಳಿಕೆ ಇರದ ವಸ್ತುಗಳ ಮೇಲೆ ಹೂಡಿಕೆ ಮಾಡುವುದರಿಂದ ಮತ್ತಷ್ಟು ದುಂದು ವೆಚ್ಚ ಉಂಟಾಗುತ್ತದೆ. ಮಾಹಿತಿ ತಂತ್ರಜ್ಞಾನದ ಮೂಲ ಸೌಕರ್ಯಗಳ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಐಟಿ ಸರ್ವಿಸಸ್‌ಗಳ ಅಗತ್ಯ ಇದೆ. ಎಜುಕೇಶನ್ ಡೆಸ್ಕಟಾಪ್-ಆಸ್-ಎ-ಸರ್ವೀಸ್ (EDaaS) ಮೂಲಕ ಹೆಚ್ಚು ಸುರಕ್ಷಿತ, ವಿಶ್ವಾಸಾರ್ಹ, ಕಡಿಮೆ ವೆಚ್ಚದಲ್ಲಿ ಸಂಪೂರ್ಣ ನಿರ್ವಹಣೆಯ ಪರಿಹಾರಗಳನ್ನು ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.


ತಂತ್ರಜ್ಞಾನದ ಆಳವಡಿಕೆಯಿಂದ ಉದ್ಯಮಸಿದ್ದ ವೃತ್ತಿಪರ ವಿದ್ಯಾರ್ಥಿಗಳಿಗೆ ಸಹಕಾರಿ: ಡಾ ಎಂ ಮೋಹನ ಆಳ್ವ

ಮೈಕ್ರೋಸಾಫ್ಟ್ ಆಫೀಸ್ ೩೬೫ ಹಾಗೂ ಎಜುಕೇಶನ್ ಡೆಸ್ಕಟಾಪ್-ಆಸ್-ಎ-ಸರ್ವೀಸ್ (EDaaS) ಸಹಯೋಗದ ಕಲಿಕಾ ವಾತವರಣವು ಡಿಜಿಟಲ್ ಡೋಕ್ಯುಮೆಂಟೇಶನ್ ಹಾಗೂ ಡೇಟಾ ಸಂಗ್ರಹಣೆಯನ್ನು ಸುಗಮಗೊಳಿಸುತ್ತದೆ. ತರಗತಿ ಕೊಠಡಿಗಳನ್ನು ಸ್ಮಾರ್ಟ್ ಲರ್ನಿಂಗ್ ಸ್ಪೇಸ್‌ಗಳಾಗಿ ರೂಪಿಸುವ ಮೂಲಕ, ವಿದ್ಯಾರ್ಥಿಗಳಿಗೆ ವೈಯಕ್ತಿಕ ಕಲಿಕೆ ಅನುಭವ ನೀಡಲು ಸಾಧ್ಯ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಯಲ್ಲಿ ಈ ತಂತ್ರಜ್ಞಾನದ ಆಳವಡಿಕೆಯಿಂದ ವಿದ್ಯಾರ್ಥಿಗಳನ್ನು ಉದ್ಯಮಸಿದ್ದ ವೃತ್ತಿಪರರನ್ನಾಗಿಸಲು ಸಹಕಾರಿಯಾಗಲಿದೆ- ಡಾ ಎಂ ಮೋಹನ ಆಳ್ವ.


ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ವರ್ಚುವಲ್ ಡೆಸ್ಕಟಾಪ್ ಮುಖಾಂತರ ಕಾಲೇಜಿನ ಸಿಬ್ಬಂದಿಗಳು ಡಾಕ್ಯುಮೆಂಟ್‌ಗಳನ್ನು ಸುಲಭವಾಗಿ ಯಾವುದೇ ಸ್ಥಳದಿಂದ ಪಡೆದುಕೊಳ್ಳಬಹುದಾಗಿದೆ. ಈ ವ್ಯವಸ್ಥೆಯಲ್ಲಿ ಡೇಟಾ ಸಂಗ್ರಹಣೆಯು ಕೇಂದ್ರಿಕೃತವಾಗಿದ್ದು, ಅತ್ಯಂತ ಸುರಕ್ಷಿತವಾಗಿದ್ದು, ಡೇಟಾ ಬ್ಯಾಕಪ್ ವ್ಯವಸ್ಥೆಯು ಇರಲಿದೆ. ಈ ತಂತ್ರಜ್ಞಾನಗಳನ್ನು ಅಳವಡಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಮ್ಮ ವೈಯ್ಯಕ್ತಿಕ ಸಾಧನಗಳನ್ನು ತರುವ ಹೊರೆ ಕಡಿಮೆಗೊಳಿಸಬಹುದಾಗಿದೆ ಎಂದರು.


ಎಜುಕೇಶನ್ ಡೆಸ್ಕಟಾಪ್-ಆಸ್-ಎ-ಸರ್ವೀಸ್ ವ್ಯವಸ್ಥೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪದವಿ ಮತ್ತು ಸ್ನಾತಕೋತ್ತರ ಕಾಲೇಜು, ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಳ್ವಾಸ್ ಶಾಲೆಗಳಲ್ಲಿ ಆಳವಡಿಸಲಾಗಿದೆ.


ಕಾಂಪ್ ಕ್ಲೌಡ್ ಐಟಿ ಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ, ಆಳ್ವಾಸ್ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ ಎನ್ ಪಿ ನಾರಾಯಣ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಣಕಾಸು ಅಧಿಕಾರಿ ಶಾಂತಾರಾಮ ಕಾಮತ್, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು.


Ads on article

Advertise in articles 1

advertising articles 2

Advertise under the article