-->

ಮೂಡುಬಿದಿರೆ: ಪ್ರತ್ಯೇಕ ಪ್ರಕರಣ ಇಬ್ಬರು ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ- ಕಾಮುಕರಿಬ್ಬರು ಅರೆಸ್ಟ್

ಮೂಡುಬಿದಿರೆ: ಪ್ರತ್ಯೇಕ ಪ್ರಕರಣ ಇಬ್ಬರು ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ- ಕಾಮುಕರಿಬ್ಬರು ಅರೆಸ್ಟ್


ಮೂಡುಬಿದಿರೆ: ಅಪ್ರಾಪ್ತೆಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ ಹಾಗೂ ವ್ಯಕ್ತಿಯೊಬ್ಬನನ್ನು ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಂಗಳವಾರ ಬಂಧಿಸಿರುವ ಮೂಡುಬಿದಿರೆ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಪ್ರಾಂತ್ಯ ಗ್ರಾಮದ ಅಜಂಕಲ್ಲುವಿನ ನಿವಾಸಿ ಪ್ರಕಾಶ್ (57) ಹಾಗೂ ಆಲಂಗಾರು ಉಮಿಯದ ಪವನ್ (19) ಎಂಬವರು ಬಂಧಿತ ಕಾಮುಕರು.

ಪ್ರಕಾಶ್ ತನ್ನ ಮನೆಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿರುವ ಬಾಲಕಿಗೆ ಮನೆಗೆ ಯಾರೂ ಇಲ್ಲದಾಗ ಕಳೆದ ಒಂದು ವರ್ಷದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಸಂತ್ರಸ್ತೆಯ ಹೆತ್ತವರು ಆರೋಪಿ ನಿರಂತರ ಲೈಂಗಿಕ ಕಿರುಕುಳ ನೀಡಿರುವುದಾಗಿ ಮೂಡುಬಿದಿರೆ ಠಾಣೆಯಲ್ಲಿ ದೂರು ನೀಡಿದ್ದರು.‌ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಮತ್ತೊಂದು ಪ್ರಕರಣ

ಮಾ.8ರಂದು ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಡಂದಲೆ ವಿದ್ಯಾಗಿರಿ ಬಳಿ, ಜನತಾ ನಗರದಲ್ಲಿ ಟ್ಯೂಶನ್ ಮುಗಿಸಿ ಬಾಲಕಿ ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಪವನ್ ದ್ವಿಚಕ್ರ ವಾಹನದಲ್ಲಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಗ ಬಾಲಕಿ ಆತನಿಂದ ತಪ್ಪಿಸಿಕೊಂಡು ಸೈಕಲ್ ಅಲ್ಲೇ ಬಿಟ್ಟು, ತಪ್ಪಿಸಿಕೊಂಡು ಮನೆಗೆ ಓಡಿಹೋಗಿದ್ದಾಳೆ. ಈ ವೇಳೆ ಪವನ್ ಅಲ್ಲಿಂದ ಪರಾರಿಯಾಗಿದ್ದನು.

ಈ ಬಗ್ಗೆ ಪೊಲೀಸರು ಕಳೆದ ಮೂರು ದಿನಗಳಿಂದ ಸಿಸಿ ಕ್ಯಾಮರಾ ಆಧರಿಸಿ ಆತನ ಹುಡುಕಾಟದಲ್ಲಿದ್ದರು. ಆರೋಪಿಯ ಮೂಡುಬಿದಿರೆ ಆಸುಪಾಸಿನಲ್ಲಿ ಇತ್ತೀಚೆಗೆ ಇಂತದಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ವಿವಿಧ ಮೂಲಗಳಿಂದ ಈತನ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ಮಂಗಳವಾರ ಅಲಂಗಾರು ಬಳಿ ಈತನನ್ನು ಬಂಧಿಸಿದ್ದಾರೆ.

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಅಖಿಲ್ ಅಹಮದ್‌, ನಾಗರಾಜ್ ಲಂಬಾಣಿ, ಮೊಹಮ್ಮದ್ ಹುಸೇನ್, ಮೊಹಮ್ಮದ್ ಇಟ್ಬಾಲ್ ಕಾರ್ಯಾಚರಣೆ ನಡೆಸಿದರು.

ಎರಡೂ ಪ್ರಕರಣದ ಆರೋಪಿಗಳ ವಿರುದ್ಧ ಫೋಕೋ ಕಾಯ್ದೆ ಪ್ರಕರಣ ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article