ಕುಲ್ಕುಂದ ಬಸವೇಶ್ವರ ದೇವಳಕ್ಕೆ ವಾಟರ್ ಫಿಲ್ಟರ್ ಹಾಗೂ ಕಾಣಿಕೆ ಹುಂಡಿ ಉಚಿತ ಕೊಡುಗೆ.
Thursday, March 27, 2025
ಸುಬ್ರಹ್ಮಣ್ಯ
800 ವರ್ಷಗಳ ಇತಿಹಾಸವನ್ನು ಹೊಂದಿರುವ ಪುರಾಣ ಪ್ರಸಿದ್ಧ ದೇವಸ್ಥಾನ, ಈ ಭಾಗದಲ್ಲಿ ಬಸವನ ಹಣೆಯ ಮೇಲೆ ಈಶ್ವರ ಲಿಂಗ ಇರುವಂತಹ ಏಕೈಕ ದೇವಸ್ಥಾನ, ಸುಬ್ರಹ್ಮಣ್ಯ ಸಮೀಪದ ಕುಲಕುಂದ ಬಸವೇಶ್ವರ ದೇವಸ್ಥಾನಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಪ್ರಾದೇಶಿಕ ಹಾಗೂ ವಲಯ ಕಛೇರಿ ವತಿಯಿಂದ ದೇವಸ್ಥಾನಕೆ ದೂರದೂರುಗಳಲ್ಲಿ ಇರುವ ಭಕ್ತಾದಿಗಳಿಗೆ ಕಾಣಿಕೆಯನ್ನ ಸಲ್ಲಿಸಲು ಅನುಕೂಲವಾಗುವಂತೆ ಸ್ಕ್ಯಾನರ್ ಕೊಡುಗಳನ್ನ ಬಳಸಿ ಕಾಣಿಕೆಯನ್ನು ಸಲ್ಲಿಸುವ ಕಾಣಿಕೆಹುಂಡಿಯನ್ನು ಹಾಗೂ ಇಲ್ಲಿ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಸ್ಕ್ಯಾನರ್ ಕಾಣಿಕೆ ಹುಂಡಿ ಹಾಗೂ ಅಕ್ವಾಗಾರ್ಡ್ ವಾಟರ್ ಫಿಲ್ಟರ್ ಗಳನ್ನು ಉಚಿತವಾಗಿ ಮಂಗಳವಾರ ದೇವಳಕ್ಕೆ ಹಸ್ತಾಂತರಿಸಲಾಯಿತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಲಯ ಕಚೇರಿಯ ಜನರಲ್ ಮ್ಯಾನೇಜರ್ ರೇಣು ನಾಯರ್ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ ಅವರಿಗೆ ಕೀಯನ್ನು ಹಸ್ತಾಂತರಿಸುವುದರ ಮೂಲಕ ಉದ್ಘಾಟನೆಯನ್ನು ನೆರೆವೇರಿಸಿದರು.
ಈ ಸಂದರ್ಭದಲ್ಲಿ ವಲಯ ಕಚೇರಿಯ ಡೇಫ್ಯೂಟಿ ಜನರಲ್ ಮ್ಯಾನೇಜರ್ ರಾಜ್ ಮಣಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪುರಂದರ, ವಲಯ ಕಚೇರಿಯ ಲಿಖಿತ್, ಸುಬ್ರಹ್ಮಣ್ಯ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸುರೇಶ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ನಿವೃತ್ತ ಉಪನ್ಯಾಸಕ ಹಾಗೂ ರೋಟರಿ ವಲಯ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ಎಲ್ಲರನ್ನು ಸ್ವಾಗತಿಸಿದರು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ ಪ್ರಾಸ್ತಾವಿಕ ನುಡಿಯೊಂದಿಗೆ ದೇವಸ್ಥಾನದ ವಿವರಣೆಯನ್ನು ನೀಡಿದರು .ದೇವಳದ ಮುಖ್ಯ ಅರ್ಚಕ ಗಣೇಶ ದೀಕ್ಷಿತ್, ಆಡಳಿತ ಮಂಡಳಿ ಕಾರ್ಯದರ್ಶಿ ಚಂದ್ರಶೇಖರ ಬಸವನ ಮೂಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.