-->

ಕುಮಾರಧಾರ ನದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಕುಕ್ಕೆ ಶ್ರೀ ದೇವಳದ ಅಧಿಕಾರಿಗಳು ಹಾಗೂ ನೌಕರರು.

ಕುಮಾರಧಾರ ನದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಕುಕ್ಕೆ ಶ್ರೀ ದೇವಳದ ಅಧಿಕಾರಿಗಳು ಹಾಗೂ ನೌಕರರು.

ಸುಬ್ರಹ್ಮಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಪರಿಸರದ ಪ್ರದೇಶಗಳಲ್ಲಿ ವಿಪರೀತ ತ್ಯಾಜ್ಯ ವಸ್ತುಗಳನ್ನ ಭಕ್ತಾದಿಗಳು ಎಸೆದು ಇಡೀ ನೀರು ಹಾಗೂ ಪರಿಸರ ಮಲಿನಗೊಳಿಸುತ್ತಿದ್ದು, ದೇಗುಲದ ವತಿಯಿಂದ ಸ್ವಚ್ಚತಾ ಕಾರ್ಯ ನಡೆಯಿತು.

ಶ್ರೀ ದೇವಳದ ವತಿಯಿಂದ ಇಲ್ಲಿನ ನೌಕರರು ನೀರಿನಿಂದ ಎಷ್ಟೇ ತ್ಯಾಜ್ಯಗಳಾದ ಬಟ್ಟೆ ಬರೆಗಳನ್ನ ತೆಗೆದರೂ ಮತ್ತೆ ಮತ್ತೆ ಭಕ್ತಾದಿಗಳು ನೀರಲ್ಲೇ ಬಟ್ಟೆಗಳನ್ನ ನದಿ ನೀರಿನಲ್ಲಿ ಎಸೆಯುವ ಚಾಳಿಯನ್ನು ಮುಂದುವರಿಸುತ್ತಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಏಸುರಾಜ್ ಹಾಗೂ ಅಧಿಕಾರಿ ವೃಂದದವರು ಹಾಗೂ ಸುಮಾರು 150ಕ್ಕೂ ಮಿಕ್ಕಿ ನೌಕರರು ಸ್ವತಃ ಕುಮಾರ ಸ್ಥಾನಘಟ್ಟದ ಪ್ರದೇಶದಲ್ಲಿ ನೀರಿಗಿಳಿದು ಬಟ್ಟೆ ಬರೆಗಳನ್ನು  ಸ್ವಚ್ಛಗೊಳಿಸಿದರು. 

ತದನಂತರ ರಾಶಿ ರಾಶಿಯಾಗಿ ಇದ್ದ ಬಟ್ಟೆ ಬರೆಗಳನ್ನು ಗ್ರಾಮ ಪಂಚಾಯಿತಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕೊಂಡಯ್ಯಲಾಯಿತು.

Ads on article

Advertise in articles 1

advertising articles 2

Advertise under the article