ಬೆಳ್ತಂಗಡಿ: ಕಾಡುದಾರಿಯಲ್ಲಿ ಹಸುಗೂಸು ಪತ್ತೆ- ಪೋಷಕರ ಪತ್ತೆಗೆ ಮುಂದಾದ ಪೊಲೀಸರು
Saturday, March 22, 2025
ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮದ ಕೊಡೋಳುಕೆರೆ ಮುಂಡ್ರೋಟ್ಟು ರಸ್ತೆ ಬಳಿಯ ಕಾಡುದಾರಿಯಲ್ಲಿ ಪಾಪಿಗಳು ಹಸುಗೂಸೊಂದು ಪತ್ತೆಯಾಗುದೆ.
ಸುಮಾರು ನಾಲ್ಕು ತಿಂಗಳ ಈ ಹೆಣ್ಣು ಶಿಶು ಇದಾಗಿದ್ದು, ಪೋಷಕರು ತೊರೆದು ಹೋಗಿದ್ದಾರೆ. ದಾರಿಹೋಕರಿಗೆ ಶಿಶು ಇದ್ದಿರುವ ಬಗ್ಗೆ ತಿಳಿದಿದೆ. ತಕ್ಷಣ ಸ್ಥಳೀಯರು ಸೇರಿ ಮಗುವನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಧರ್ಮಸ್ಥಳ ಠಾಣೆಯ ಪೊಲೀಸರು ಶಿಶುವನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ವಶಕ್ಕೊಪ್ಪಿಸಿದ್ದಾರೆ. ಇದೀಗ ಪೊಲೀಸರು ಮಗುವಿನ ಪೊಷಕರ ಪತ್ತೆಗೆ ಮುಂದಾಗಿದ್ದಾರೆ.