ಮಂಗಳೂರು: ಲೀವ್ಇನ್ ರಿಲೇಶನ್‌ಶಿಪ್‌ನಲ್ಲಿದ್ದು ವಂಚನೆ ಆರೋಪ- CISF ಮಹಿಳಾ ಅಧಿಕಾರಿ ವಿರುದ್ಧ ವೀಡಿಯೋ ಮಾಡಿ ವ್ಯಕ್ತಿ ಸುಸೈಡ್
Monday, March 3, 2025
ಮಂಗಳೂರು: CISF ಪಡೆಯ ಮಹಿಳಾ ಅಧಿಕಾರಿಯೊಬ್ಬರು ಪ್ರೀತಿಸಿ, ತನ್ನನ್ನು ಲೈಂಗಿಕವಾಗಿ ಬಳಸಿ ಹಣ ವಂಚನೆ ಮಾಡಿದ್ದಾರೆಂದು ವೀಡಿಯೋ ಮಾಡಿ ಉತ್ತರಪ್ರದೇಶದ ವ್ಯಕ್ತಿಯೋರ್ವರು ಮಂಗಳೂರಿನ ಲಾಡ್ಜೊಂದರಲ್ಲಿ ಸುಸೈಡ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಗಾಜಿಪುರ ನಿವಾಸಿ, ಚೆನೈನ ಖಾಸಗಿ ಕಂಪೆನಿ ಉದ್ಯೋಗಿ ಅಭಿಷೇಕ್ ಸಿಂಗ್ ಅಭಿಷೇಕ್ ಸಿಂಗ್(40) ನೇಣು ಬಿಗಿದು ಆತ್ಮಹತ್ಯೆಗೈದ ವ್ಯಕ್ತಿ. ಅಭಿಷೇಕ್ ಸಿಂಗ್ ಮಂಗಳೂರಿನ ರಾವ್ & ರಾವ್ ವೃತ್ತದ ಬಳಿಯಿರುವ ಲಾಡ್ಜ್‌ನಲ್ಲಿ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಐಎಸ್‌ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಎಂದು ಹೇಳಲಾಗುತ್ತಿರುವ ಹರಿಯಾಣ ಮೂಲದ ಮೋನಿಕಾ ಸಿಹಾಗ್ ಎಂಬಾಕೆ ಮೋಸ ಮಾಡಿದವಳು ಎಂದು ಅಭಿಷೇಕ್ ಸಿಂಗ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ತನ್ನ ಕಂಪೆನಿಯ ಎಕ್ಸಿಬಿಷನ್ ನಡೆಯುತ್ತಿದ್ದು, ಅದಕ್ಕೆ ಆಗಮಿಸಿದ್ದ ಅಭಿಷೇಕ್ ಸಿಂಗ್, ಪ್ರೀತಿಸುತ್ತಿದ್ದ ಯುವತಿಯಿಂದಲೇ ಮೋಸ ಹೋಗಿದ್ದೇನೆಂದು ನೊಂದು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಮೋನಿಕಾ ಸಿಹಾಗ್ ಮೇಲೆ ಗಂಭೀರ ಆರೋಪ ಮಾಡಿ ತನ್ನ ಸಾವಿಗೆ ಆಕೆಯೇ ಕಾರಣ ಎಂದು ಹೇಳಿ ಸುದೀರ್ಘ 22ನಿಮಿಷಗಳ ವೀಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ ಅಭಿಷೇಕ್ ಸಿಂಗ್.
ಒಂದೂವರೆ ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಿತರಾದ ಅಭಿಷೇಕ್‌ರೊಂದಿಗೆ ಆಕೆಗೆ ಮದುವೆಯಾಗಿದೆ, ಮಗುವಿರುವುದನ್ನು ಮುಚ್ಚಿಟ್ಟಿದ್ದಳು. ಬಳಿಕ ''ತನ್ನ ಪತಿ ಸರಿಯಿಲ್ಲ ನಿನ್ನನ್ನೇ ಮದುವೆಯಾಗುತ್ತೇನೆಂದು" ಹೇಳಿ ನಂಬಿಸಿದ್ದಳು. ಬಳಿಕ ನಾವು ಲಿವಿಂಗ್ ರಿಲೇಶನ್ ಹೊಂದಿದ್ದೆವು. ಆದರೆ ಪ್ರೀತಿಯ ನೆಪದಲ್ಲಿ ತನ್ನಿಂದ ದೈಹಿಕ ಸುಖ ಪಡೆದು, 7-8ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ಮೋಸ ಮಾಡಿದ್ದಾಳೆ ಎಂದು ಆರೋಪಿಸಿ ಅಭಿಷೇಕ್ ಸುಸೈಡ್ ಮಾಡಿಕೊಂಡಿದ್ದಾರೆ.