ಪ್ರಿಯಕರನೊಂದಿಗಿದ್ದ ಪತ್ನಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಪತಿ: ವಿವಾಹವಾಗಿ ಆರು ತಿಂಗಳಿಗೇ ವಿಚ್ಛೇದನ
Tuesday, March 11, 2025
ಮುಂಬೈ: ಖ್ಯಾತ ಕಿರುತೆರೆ ನಟಿ ಅದಿತಿ ಶರ್ಮಾ ವಿವಾಹವಾದ ಆರೇ ತಿಂಗಳಿಗೆ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಡಿವೋರ್ಸ್‌ಗೆ ಕಾರಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ.
ಅದಿತಿ ಹಾಗೂ ಅಭಿನೀತ್ ವಿವಾಹ 2024ರ ನವೆಂಬರ್ 12ರಂದು ನಡೆದಿತ್ತು. ಈ ಮದುವೆ ಗುರುಗ್ರಾಮದ ಅವರ ಮನೆಯಲ್ಲೇ ನಡೆದಿತ್ತು. ಕೇವಲ ಕುಟುಂಬದವರು ಹಾಗೂ ಕೆಲವೇ ಆಪ್ತರು ವಿವಾಹಕ್ಕೆ ಹಾಜರಿದ್ದರು. ಈ ಜೋಡಿ ಮದುವೆಗೆ ಮುನ್ನ, ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು. ವಿವಾಹದ ಬಳಿಕ 5BHK ಅಪಾರ್ಟೆಂಟ್ ಅನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗ್ತಿದೆ.
ಅವರು ತಮ್ಮ ಮದುವೆಯ ಫೋಟೋಗಳು ಎಲ್ಲೂ ಹೊರಬರದಂತೆ ನೋಡಿಕೊಂಡಿದ್ದರು. ವಿವಾಹವಾದ ಬಳಿಕ ಆಫರ್‌ಗಳು ಇಲ್ಲದಾಗುವ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಅದಿತಿ ಗುಟ್ಟಾಗಿ ವಿವಾಹ ಆಗುವ ನಿರ್ಧಾರಕ್ಕೆ ಬಂದಿದ್ದರು. ಇದಕ್ಕೆ ಅಭಿನೀತ್ ಕೂಡ ಬೆಂಬಲ ಕೊಟ್ಟಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ.
ವಕೀಲ ರಾಕೇಶ್ ಶೆಟ್ಟಿ ಹೇಳುವ ಪ್ರಕಾರ ಅಭಿನೀತ್ ಹಾಗೂ ಅದಿತಿ ಹಲವು ವರ್ಷಗಳಿಂದ ಜೊತೆಯಾಗಿದ್ದರು. ಆ ಬಳಿಕ ವಿವಾಹವಾಗಿದ್ದರು. ಕೆಲ ತಿಂಗಳ ಹಿಂದೆ ಇವರು ಅಪಾರ್ಟ್‌ಮೆಂಟ್‌ನ ಖರೀದಿ ಮಾಡಿ ಅಲ್ಲಿ ವಾಸ ಮಾಡುತ್ತಾ ಇದ್ದರು.
'ಅಪೊಲ್ಲೆನಾ' ಧಾರಾವಾಹಿಯಲ್ಲಿ ಅದಿತಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಟ ಸಮರ್ಥ್ಯ ಜೊತೆ ಅದಿತಿ ಆಪ್ತತೆ ಬೆಳೆಸಿಕೊಳ್ಳುತ್ತಿರುವ ಬಗ್ಗೆ ಅಭಿನೀತ್‌ಗೆ ಅನುಮಾನ ಬಂದಿದೆ. ಹೋಗಿ ಪರೀಕ್ಷಿಸಿದಾಗ ಇಬ್ಬರೂ ಒಟ್ಟಿಗೆ ಆಪ್ತವಾಗಿ ಇದ್ದಿದ್ದು ಕಂಡು ಬಂದಿದೆ.
ಆದ್ದರಿಂದ ಅಭಿನೀತ್ ಅವರು ಅದಿತಿಯಿಂದ ದೂರ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅದಿತಿ ಬಳಿ ಪ್ರಶ್ನೆ ಮಾಡಿದಾಗ, 'ನಮ್ಮ ಮದುವೆಗೆ ಯಾವುದೇ ಮಾನ್ಯತೆ ಇಲ್ಲ' ಎಂದು ಹೇಳಿದ್ದರಂತೆ.
ಅದಿತಿ ತನ್ನ ಸಹನಟ ಸಮರ್ಥ್ಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ನಟಿಯ ಪತಿ ಅಭಿನೀತ್ ಆರೋಪಿಸಿದ್ದಾರೆ. ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಅಭಿನೀತ್, ಜೊತೆ ಅದಿತಿ ದೊಡ್ಡ ಜಗಳ ತೆಗೆದು ರಂಪಾಟ ಮಾಡಿದ್ದಾರೆ ಎನ್ನಲಾಗ್ತಿದೆ.