-->

ಪತ್ನಿಗೆ ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿಸಿದ ದಯಾಳು ಪತಿ

ಪತ್ನಿಗೆ ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿಸಿದ ದಯಾಳು ಪತಿ


ಉತ್ತರ ಪ್ರದೇಶ: ಮುದುವೆಯ ಸಂದರ್ಭ ಹೆತ್ತವರು ತಮ್ಮ ಪುತ್ರಿಯನ್ನು ಅಳಿಯನಿಗೆ ಧಾರೆ ಎರೆದು ಕೊಡುವುದು ಸಂಪ್ರದಾಯ. ಆದರೆ, ಇಲ್ಲೊಬ್ಬ ಪತಿಯೇ ತನ್ನ ಪತ್ನಿಯನ್ನೇ ಆಕೆಯ ಪ್ರೇಮಿಗೆ ಧಾರೆ ಎರೆದು ವಿವಾಹ ಮಾಡಿಸಿರುವ ಅಚ್ಚರಿಯ ಘಟನೆ ನಡೆದಿದೆ.

ಉತ್ತರಪ್ರದೇಶದ ಸಂತಕಬೀರ್​​ನಗರ ಜಿಲ್ಲೆಯಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ. ಪತಿಯೇ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಕಾನೂನಾತ್ಮಕವಾಗಿ ವಿವಾಹ ಮಾಡಿಸಿದ್ದಾನೆ. ಆತನೇ ನೋಟರಿ ಮಾಡಿಸಿ ವಿವಾಹ ನೋಂದಣಿ ಮಾಡಿಸಿ, ದೇವಸ್ಥಾನದಲ್ಲಿ ತಾನೇ ಖುದ್ದಾಗಿ ನಿಂತು ತಾಳಿ ಕಟ್ಟಿಸಿದ್ದಾನೆ.

ಸಂತಕಬೀರ್​​ ನಗರ ಜಿಲ್ಲೆಯ ಕಟರ್​ಜೋಟ್​​ ಗ್ರಾಮದ ಈ ವ್ಯಕ್ತಿಗೆ 2017ರಲ್ಲಿ ಈಕೆಯೊಂದಿಗೆ ವಿವಾಹವಾಗಿತ್ತು. ಇವರ 8ವರ್ಷಗಳ ದಾಂಪತ್ಯದಲ್ಲಿ 7 ವರ್ಷದ ಓರ್ವ ಪುತ್ರ, 2 ವರ್ಷದ ಪುತ್ರಿಯಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಪತಿಯು ಆಗಾಗ್ಗೆ ಮನೆಯಿಂದ ದೂರವಿರುತ್ತಿದ್ದ. ಈ ವೇಳೆ ಅದೇ ಗ್ರಾಮದ ಯುವಕನೊಂದಿಗೆ ಮಹಿಳೆ ಲವ್ವಿ-ಡವ್ವೀ ಬೆಳೆಸಿಕೊಂಡಿದ್ದಾಳೆ.

ಈ ಬಗ್ಗೆ ತಿಳಿದ ಪತಿ ತನ್ನ ಪತ್ನಿಗೆ ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿಸುವ ಅಚ್ಚರಿಯ ನಿರ್ಧಾರಕ್ಕೆ ಬಂದಿದ್ದಾನೆ. ಇತ್ತೀಚೆಗೆ ಪತ್ನಿ ಮತ್ತು ಆಕೆಯ ಪ್ರಿಯಕರನ ಸಹಿತ ಸ್ಥಳೀಯ ನ್ಯಾಯಾಲಯಕ್ಕೆ ತೆರಳಿ ಅವರಿಬ್ಬರ ವಿವಾಹದ ಅಫಿಡವಿಟ್​ ಮಾಡಿಸಿದ್ದಾನೆ. ಬಳಿಕ ದೇವಸ್ಥಾನಕ್ಕೆ ಕರೆದುಕೊಂಡು ಬಂದು ತನ್ನ ಮುಂಭಾಗದಲ್ಲೇ ಪತ್ನಿಗೆ ಪ್ರಿಯಕರನಿಂದ ತಾಳಿ ಕಟ್ಟಿಸಿದ್ದಾನೆ. ಇನ್ನು ಮುಂದೆ ಆಕೆಯು ತನ್ನ ಪ್ರಿಯಕರನ ಜೊತೆಗೆ ಇರಲಿ. ಇಬ್ಬರು ಮಕ್ಕಳೊಂದಿಗೆ ತಾನು ಇರುವುದಾಗಿ ತಿಳಿಸಿದ್ದಾನೆ.

ಕಾನ್ಪುರದಲ್ಲಿ ನಡೆದಿತ್ತು ಇಂಥದ್ದೇ ವಿವಾಹ: ಕಾನ್ಪುರದಲ್ಲೂ ಇದೇ ರೀತಿಯ ಮದುವೆ ಸುಮಾರು ಏಳು ವರ್ಷಗಳ ಹಿಂದೆ ನಡೆದಿತ್ತು. ಗಂಡ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿದ್ದಲ್ಲದೆ, ಮನಸಾರೆ ಕುಣಿದು ಕುಪ್ಪಳಿಸಿದ್ದ. ವಿವಾಹದ ಬಳಿಕ ಮನೆಗೆ ಹೊರಡುವ ಸಮಯದಲ್ಲಿ ಕಣ್ಣೀರಿಟ್ಟಿದ್ದ.

Ads on article

Advertise in articles 1

advertising articles 2

Advertise under the article