ತಿರುವನಂತಪುರಂ ರೈಲ್ವೇ ಹಳಿಯಲ್ಲಿ ಮಹಿಳಾ ಐಬಿ ಅಧಿಕಾರಿಯ ಮೃತದೇಹ ಪತ್ತೆ
Tuesday, March 25, 2025
ತಿರುವನಂತಪುರ: ಇಲ್ಲಿನ ಚಾಕಾ ಸಮೀಪದ ರೈಲು ಹಳಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ.
ಪತ್ತನಂತಿಟ್ಟದ ಅತಿರುಂಕಳ್‌ನ ನಿವಾಸಿ ಮೇಘಾ ಮಧುಸೂಧನನ್ (25) ಮೃತಪಟ್ಟ ಮಹಿಳೆ.
ವಿಧಿ ವಿಜ್ಞಾನದ ಪದವೀಧರೆಯಾಗಿರುವ ಮೇಘಾ ಮಧುಸೂದನ್ ತಿರುವನಂತಪುರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಬೇಹುಗಾರಿಕೆ ಬ್ಯೂರೊ ಅಧಿಕಾರಿಯಾಗಿ ಹುದ್ದೆ ಪಡೆದಿದ್ದರು. ಆ ಬಳಿಕ ಅವರು ತಿರುವನಂತಪುರಕ್ಕೆ ಸ್ಥಳಾಂತರಗೊಂಡಿದ್ದರು.
"ಪ್ರಾಥಮಿಕ ತನಿಖೆ ಇದು ಆತ್ಮಹತ್ಯೆ ಪ್ರಕರಣ ಎಂದು ಹೇಳಿದೆ. ಆದರೆ, ನಮಗೆ ಸುಸೈಡ್ ನೋಟ್ ಸಿಕ್ಕಿಲ್ಲ. ಮುಂದಿನ ತನಿಖೆ ನಡೆಯುತ್ತಿದೆ” ಎಂದು ಪೆಟ್ಟಾಹ್ ಸಿಐ ಪ್ರೇಮ್ ಕುಮಾರ್ ತಿಳಿಸಿದ್ದಾರೆ.
ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಈ ಕುರಿತು ಸೋಮವಾರ ಬೆಳಗ್ಗೆ 8.30ರಿಂದ 9ರ ನಡುವೆ ಪೊಲೀಸರಿಗೆ ಮಾಹಿತಿ ನೀಡಿತ್ತು.