ಸೌತೆಕಾಯಿ-ಟೊಮ್ಯಾಟೊ ಜೊತೆಯಾಗಿ ತಿನ್ನುವ ಸಾಹಸ ಬೇಡ- ಇದರಿಂದ ಕಾದಿದೆ ದೊಡ್ಡ ಅಪಾಯ
Friday, March 14, 2025
ತೂಕ ಇಳಿಸಿಕೊಳ್ಳಲು ಪ್ರತಿಯೊಬ್ಬರು ಡಯಟ್ ಮೊರೆಹೋಗುತ್ತಾರೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬರುವ ಟಿಪ್ಸ್‌ಗಳನ್ನು ನೋಡಿದರೆ ಯಾವುದನ್ನು ಫಾಲೋ ಮಾಡಬೇಕು ಯಾವುದನ್ನು ಫಾಲೋ ಮಾಡಬಾರದು ಗೊತ್ತಾಗದೆ ತಲೆ ಕೆಟ್ಟುಹೋಗುತ್ತದೆ. ಕೆಲವರು ಕೇವಲ ಡಯಟ್ ಮಾಡ್ಕೊಂಡು ತೂಕ ಇಳಿಸಿಕೊಳ್ಳುತ್ತಾರೆ. ಡಯಟ್ ಫಾಲೋ ಮಾಡುವ ಮುನ್ನ ನಿಮ್ಮ ನ್ಯೂಟ್ರಿಷನಿಸ್ಟ್ ಮತ್ತು ಡಯಟೀಶಿಯನ್ ಸಂಪರ್ಕ ಮಾಡಬೇಕು. ಅವರಿಂದ ಸರಿಯಾದ ರೀತಿಯಲ್ಲಿ ತೂಕ ಇಳಿಸಲು ಸಲಹೆ ನೀಡುತ್ತಾರೆ. ಆದರೆ ಯಾದಾರೂ ನಿಮಗೆ ಸೌತೆಕಾಯಿ- ಟೊಮ್ಯಾಟೋ ಕಥೆ ಹೇಳಿದಾರಾ?
ಆಯುರ್ವೇದದ ಪ್ರಕಾರ ಸೌತೆಕಾಯಿ ಮತ್ತು ಟೊಮ್ಯಾಟೋವನ್ನು ಜೊತೆಗೇ ಸೇವಿಸಬಾರದು. ಇದರಿಂದ ಮೊದಲು ಎದುರಾಗುವ ಸಮಸ್ಯೆನೇ ಅಜೀರ್ಣ. ಸೌತೆಕಾಯಿ ನಮ್ಮ ದೇಹಕ್ಕೆ ಶೀತ ಅಥವಾ ಕೋಲ್ಡ್, ಸಪ್ಪೆ ಅಥವಾ ಸ್ವೀಟ್ ರುಚಿಯನ್ನು ನೀಡುತ್ತದೆ. ಇದರರ್ಥ ನಮ್ಮ ದೇಹವನ್ನು ತಂಪು ಮಾಡುತ್ತದೆ. ಆದರೆ ಟೊಮ್ಯಾಟೋ ತದ್ವಿರುದ್ಧ ಏಕೆಂದರೆ ದೇಹದಲ್ಲಿ ಇರುವ ಮೂರು ದೋಷಗಳಾದ ವಾತ ಪಿತ್ತ ಕಫ ಮೇಲೆ ಇದು ಪರಿಣಾಮ ಬೀರಲಿದ್ದು ದೇಹವನ್ನು ಬೆಚ್ಚಗೆ ಅಥವಾ ಬಿಸಿಯಾಗಿಡುತ್ತದೆ. ಹೀಗಾಗಿ ಸೌತೆಕಾಯಿ ಮತ್ತು ಟೊಮ್ಯಾಟೋ ಎರಡೂ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತದೆ.
ಸೌತೆಕಾಯಿ ಮತ್ತು ಟೊಮ್ಯಾಟೋ ಜೀರ್ಣವಾಗಲು ತೆಗೆದುಕೊಳ್ಳುವ ಸಮಯವೂ ಬೇರೆ ಬೇರೆಯಾಗಿದೆ. ಸೌತೆಕಾಯಿ ಸಿಕ್ಕಾಪಟ್ಟೆ ಲೈಟ್ ಮತ್ತು ಬೇಗ ಜೀರ್ಣವಾಗುತ್ತದೆ. ಆದರೆ ಟೊಮ್ಯಾಟೋ ಮತ್ತು ಅದರ ಬೀಜಗಳು ಜೀರ್ಣವಾಗಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಅಷ್ಟಲ್ಲದೆ ಸಲಾಡ್ ತಿನ್ನಬೇಕೆಂದು ಟೊಮ್ಯಾಟೋ ಮತ್ತು ಸೌತೆಕಾಯಿ ಮೇಲೆ ಏನಾದರೂ ನಿಂಬೆ ರಸ ಹಾಕಿಕೊಂಡರೆ ಅಪಾಯ ಮತ್ತೂ ಹೆಚ್ಚಾಗುತ್ತದೆ. ಏಕೆಂದರೆ ಟೊಮ್ಯಾಟೋ ರೀತಿ ನಿಂಬೆ ಹಣ್ಣು ಮತ್ತು ಅದರ ರಸ ಕೂಡ ನಮ್ಮ ದೇಹ ಬೆಚ್ಚಗಿಡುತ್ತದೆ. ಸೌತೆಕಾಯಿ ಟೊಮ್ಯಾಟೋ ಆರೋಗ್ಯಕ್ಕೆ ಒಳ್ಳೆಯದು ಎಂದು ಮಕ್ಕಳಿಗೆ ಒಟ್ಟಿಗೆ ಕೊಡಬೇಡಿ ಏಕೆಂದರೆ ಅವರಿಗೆ ಅಜೀಣ ಸಮಸ್ಯೆ ಆದರೆ ಹಿಂಸೆ ಪಡುತ್ತಾರೆ ಹಾಗೂ ಒಂದರಿಂದ ಮತ್ತೊಂದಕ್ಕೆ ಸಮಸ್ಯೆ ಹೆಚ್ಚಾಗುತ್ತದೆ.