-->

19ರ ಯುವತಿಯನ್ನು ಅಪಹರಿಸಿ 22ಮಂದಿಯಿಂದ ಸಾಮೂಹಿಕ ಅತ್ಯಾಚಾರ- ಆರು ಮಂದಿ ಅರೆಸ್ಟ್

19ರ ಯುವತಿಯನ್ನು ಅಪಹರಿಸಿ 22ಮಂದಿಯಿಂದ ಸಾಮೂಹಿಕ ಅತ್ಯಾಚಾರ- ಆರು ಮಂದಿ ಅರೆಸ್ಟ್


ಲಕ್ನೋ: 19ರ ಯುವತಿಯನ್ನು ಅಪಹರಿಸಿರುವ ವಾರಕ್ಕೂ ಅಧಿಕ ಕಾಲ 22 ಮಂದಿ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಉತ್ತರ ವಾರಾಣಾಸಿಯ ಲಾಲ್‌ಪುರ ಪ್ರದೇಶದ ನಿವಾಸಿ ಯುವತಿಯೊಬ್ಬಳು ಮಾರ್ಚ್ 29ರಂದು ಸ್ನೇಹಿತೆಯನ್ನು ಭೇಟಿ ಮಾಡಲು ಮನೆಯಿಂದ ತೆರಳಿದ್ದಳು. ಇದಕ್ಕೂ ಮುನ್ನ ಹಲವು ಬಾರಿ ಹೋಗಿ ಬರುತ್ತಿದ್ದರೂ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಆದರೆ ಈ ಬಾರಿ ಮನೆಗೆ ಬಂದಿರಲಿಲ್ಲ. ಆಕೆಯ ಕುಟುಂಬದವರು ಎಪ್ರಿಲ್ 4ರಂದು ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು.

ಅದೇ ದಿನ ಆಕೆಗೆ ಮಾದಕ ವಸ್ತುಗಳನ್ನು ನೀಡಿದ ಅಪಹರಣಕಾರರು ಆಕೆಯನ್ನು ಪಾಂಡೆಪುರ ಬಳಿ ಬಿಟ್ಟುಹೋಗಿದ್ದರು. ಅದು ಹೇಗೋ ಸ್ನೇಹಿತೆಯ ಮನೆ ತಲುಪಿದ ಆಕೆಯನ್ನು ಮನೆಗೆ ಕರೆದೊಯ್ಯಲಾಗಿತ್ತು. ಮನೆಯಲ್ಲಿ ಆಕೆ ತನ್ನ ತಂದೆಗೆ ಘಟನಾವಳಿಗಳನ್ನು ವಿವರಿಸಿದ್ದು, ಆ ಬಳಿಕ ಪ್ರಕರಣ ದಾಖಲಿಸಲಾಗಿದೆ.

ದಾಳಿಕೋರರು ಆಕೆಯನ್ನು ಹುಕ್ಕಾಬಾರ್, ಹೋಟೆಲ್, ವಸತಿಗೃಹ ಮತ್ತು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಒಟ್ಟು 22 ಮಂದಿಯನ್ನು ದೂರಿನಲ್ಲಿ ಹೆಸರಿಸಲಾಗಿದೆ.

ಪೊಲೀಸರು ತನಿಖೆ ನಡೆಸುತ್ತಿದ್ದು, ಅದೇ ದಿನ ಕೆಲವರನ್ನು ಹುಕುಂಗಂಜ್ ಮತ್ತು ಲಲ್ಲಾಪುರ ಪ್ರದೇಶದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಈ ಪೈಕಿ ಕೆಲವರು ಅಪ್ರಾಪ್ತರು ಆರೋಪಿಗಳಾದ್ದರಿಂದ ಪೊಲೀಸರು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Ads on article

Advertise in articles 1

advertising articles 2

Advertise under the article