ಎಪ್ರಿಲ್ 19 ರಿಂದ 27 : ಕಾರ್ಕಳ ಸ್ವರಾಜ್ ಮೈದಾನದಲ್ಲಿ ಸಮ್ಮರ್ ಫೆಸ್ಟಿವಲ್
Tuesday, April 8, 2025
ಕಾರ್ಕಳ: ಕಾರ್ಕಳದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ತರುವ ಮೂಲಕ, ಈ ವರ್ಷ ಪ್ರಥಮ ಬಾರಿಗೆ “SUMMER FESTIVAL – 2025” ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಾಯ್ಸ್ ಜೋನ್ ಡ್ಯಾನ್ಸ್ ಅಕಾಡೆಮಿ, ಕದ್ರಿ ಈವೆಂಟ್ಸ್ ಮತ್ತು ಅಸ್ತ್ರ ಗ್ರೂಪ್ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ “Traditional Fashion Show” ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವ ಉದ್ದೇಶವನ್ನು ಹೊಂದಿದ್ದು, ಈ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯರು ಭಾಗವಹಿಸಬಹುದಾಗಿದೆ.
ಪಾಲ್ಗೊಳ್ಳುವವರಿಗೆ ವಯೋಮಿತಿ :
ಮಕ್ಕಳು: 8 ರಿಂದ 15 ವರ್ಷ
ಯುವಕ/ಯುವತಿಯರು: 16 ರಿಂದ 27 ವರ್ಷ
ಹಿರಿಯರು: 28 ರಿಂದ 60 ವರ್ಷ
ಆಡಿಷನ್‌ಗೆ ನೋಂದಣಿ ಮಾಡಲು ಕೊನೆಯ ದಿನಾಂಕ: 13-04-2025
ಕಾರ್ಯಕ್ರಮ: ಎಪ್ರಿಲ್ 19 ರಿಂದ 27
ಆಡಿಷನ್ ಸ್ಥಳ: ಸ್ವರಾಜ್ ಮೈದಾನ, ಕಾರ್ಕಳ
ವಿವರಗಳಿಗೆ ಸಂಪರ್ಕ: ದರ್ಶಿತ್ – 9844613637
ಆಯೋಜಕರು ಎಲ್ಲರಿಗೆ ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶ ನೀಡಿದ್ದು, ಈ ಬೇಸಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ಸುಕರಾದವರು ಈ ಸಾಂಸ್ಕೃತಿಕ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಕಾರ್ಕಳದಲ್ಲಿ ನಡೆಯಲಿರುವ ಈ ಮಹತ್ವದ ಉತ್ಸವಕ್ಕೆ ಸಾರ್ವಜನಿಕರಿಂದ ಹೆಚ್ಚಿನ ನಿರೀಕ್ಷೆಯಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬರಲಿದೆ ಎಂಬ ಭರವಸೆ ವ್ಯಕ್ತವಾಗಿದೆ.