-->

ಮುತ್ತು ನೀಡಿದರೆ 50ಸಾವಿರ, ಜೊತೆ ಸುತ್ತಾಟಕ್ಕೆ 15ಲಕ್ಷ- ವಿದ್ಯಾರ್ಥಿನಿ ತಂದೆಯನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿದ ಪ್ಲೇಸ್ಕೂಲ್ ಟೀಚರ್ ಅರೆಸ್ಟ್

ಮುತ್ತು ನೀಡಿದರೆ 50ಸಾವಿರ, ಜೊತೆ ಸುತ್ತಾಟಕ್ಕೆ 15ಲಕ್ಷ- ವಿದ್ಯಾರ್ಥಿನಿ ತಂದೆಯನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿದ ಪ್ಲೇಸ್ಕೂಲ್ ಟೀಚರ್ ಅರೆಸ್ಟ್



ಬೆಂಗಳೂರು: ಒಂದು ಮುತ್ತು ಕೊಡಬೇಕಾದರೆ 50 ಸಾವಿರ ರೂ., ಜೊತೆಗೆ ಸುತ್ತಾಡಬೇಕಾದರೆ 15 ಲಕ್ಷಕ್ಕೆ ಡಿಮಾಂಡ್... ಹೌದು ಇದು ಬೆಂಗಳೂರಿನ ಟೀಚರಮ್ಮನ ಲವ್ ಕಮ್ ಬ್ಲಾಕ್ಮೇಲ್ ಸ್ಟೋರಿ. ಪುತ್ರನನ್ನು ಪ್ರೀಸ್ಕೂಲ್‌ಗೆ ಕರೆದೊಯ್ದು ಪರಿಚಯವಾಗಿದ್ದ ಟೀಚರಮ್ಮನ ಮುತ್ತು ಉದ್ಯಮಿಯ ಜೀವ ಬಾಯಿಗೆ ಬಂದಂತಾಗಿದೆ. 

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪ್ರೀ ಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ಎಂಬ ಟೀಚರ್‌ ಈಗ ಉದ್ಯಮಿಯನ್ನು ಬ್ಲಾಕ್ಮೇಲ್ ಮಾಡಲು ಹೋಗಿ ತನ್ನಿಬ್ಬರು ಸಹಚರರೊಂದಿಗೆ ಕಂಬಿ ಎಣಿಸುತ್ತಿದ್ದಾಳೆ. 2023ರಲ್ಲಿ ತನ್ನ ಪುತ್ರಿಯನ್ನು ಪ್ರೀಸ್ಕೂಲ್‌ಗೆ ಸೇರಿಸಲು ಹೋದ ಗುಜರಾತ್ ಮೂಲದ ಉದ್ಯಮಿಗೆ ಶ್ರೀದೇವಿಗೆ ಪರಿಚಯ ಆಗಿದ್ದರು. ದಿನವೂ ಮಗುವನ್ನು ಪ್ಲೇ ಹೋಮ್‌ಗೆ ಬಿಡಲು ಹೋಗುತ್ತಿದ್ದ ಉದ್ಯಮಿ ಹಾಗೂ ಶ್ರೀದೇವಿ ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗಿತ್ತು. ಇದೇ ವೇಳೆ, ಶ್ರೀದೇವಿ ತನ್ನ ಪ್ರೀಸ್ಕೂಲ್ ನಿರ್ವಹಣೆಗೆಂದು ಉದ್ಯಮಿಯಿಂದ 2 ಲಕ್ಷ ರೂ. ಸಾಲ ಪಡೆದಿದ್ದಾರೆ. ಸ್ನೇಹ ಬೆಳೆದಿದ್ದ ಕಾರಣ ಆತ ಶ್ರೀದೇವಿಗೆ ಸುಲಭದಲ್ಲಿ ಹಣ ಕೊಟ್ಟಿದ್ದಾರೆ.


2024ರ ನವೆಂಬರ್‌ನಲ್ಲಿ ತನ್ನ ತಂದೆಗೆ ಅನಾರೋಗ್ಯವೆಂದು ಮತ್ತೆ 2 ಲಕ್ಷ ರೂ. ಪಡೆದಿದ್ದಾಳೆ. ಹಣ ವಾಪಸ್ ಕೇಳಿದಾಗ ಈಗ ಹಣ ವಾಪಸ್ ಕೊಡಲು ಕಷ್ಟವಿದೆ, ಶಾಲೆ ಪಾರ್ಟ್ನರ್ ಆಗಿ ಎಂದಿದ್ದರಂತೆ. ಈ ಮಧ್ಯೆ ಉದ್ಯಮಿ ಹಾಗೂ ಶ್ರೀದೇವಿ ಮಧ್ಯೆ ಸಲುಗೆ ಬೆಳೆದು ಸುತ್ತಾಟ ಶುರುವಾಗಿತ್ತು. ಉದ್ಯಮಿ ಕೂಡ ಶ್ರೀದೇವಿಯೊಂದಿಗೆ ಮಾತಾಡಲೆಂದೇ ಹೊಸ ಸಿಮ್, ಫೋನ್ ಖರೀದಿ ಮಾಡಿದ್ದರು.

50 ಸಾವಿರಕ್ಕೊಂದು ಮುತ್ತು!

2025ರ ಜನವರಿ ಮೊದಲ ವಾರದಲ್ಲಿ ಉದ್ಯಮಿ ತನ್ನ ಹಣ ವಾಪಸ್ ಕೇಳಿದ್ದರು. ಆಗ ನೇರವಾಗಿ ಉದ್ಯಮಿ ಮನೆಗೆ ತೆರಳಿದ್ದ ಶ್ರೀದೇವಿ, ಸಲುಗೆಯಿಂದ ಮಾತನಾಡಿದ್ದಲ್ಲದೆ ತುಟಿಗೆ ಮುತ್ತಿಟ್ಟು ಮತ್ತೆ 50 ಸಾವಿರ ಕಿತ್ತುಕೊಂಡಿದ್ದಾಳೆ. ಬಳಿಕ ನಿನ್ನೊಂದಿಗೆ ರಿಲೇಷನ್ ಶಿಪ್‌ನಲ್ಲಿ ಇರ್ತೇನೆಂದು ಹೇಳಿ ಉದ್ಯಮಿಯನ್ನು ಯಾಮಾರಿಸಿದ್ದಳು ಎಂದು ಉದ್ಯಮಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮುತ್ತು ಕೊಟ್ಟರೆ ಹಣ ಬರುತ್ತದೆಂದು ತಿಳಿದ ತಕ್ಷಣ ಶ್ರೀದೇವಿಯ ಅಸಲಿ ಆಟ ಶುರುವಾಗಿತ್ತು. ಈ ವೇಳೆ ಮತ್ತೆ 15 ಲಕ್ಷ ರೂ. ಹಣಕ್ಕೆ ಶ್ರೀದೇವಿ ಡಿಮ್ಯಾಂಡ್ ಮಾಡಿದ್ದಾಳೆ. ಪದೇ ಪದೆ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ರಿಂದ ಉದ್ಯಮಿ ತನ್ನಲ್ಲಿದ್ದ ಸಿಮ್ಮನ್ನು ಮುರಿದು ಹಾಕಿದ್ದರು. ಮಾರ್ಚ್ 12ರಂದು ಉದ್ಯಮಿಯ ಪತ್ನಿಗೆ ಕರೆ ಮಾಡಿದ ಶ್ರೀದೇವಿ ಮಕ್ಕಳ ಸ್ಕೂಲ್ ಟಿ.ಸಿ ಕೊಡುತ್ತೇನೆ, ನಿಮ್ಮ ಪತಿಯನ್ನು ಸ್ಕೂಲ್‌ಗೆ ಕಳಿಸಿಕೊಡಿ ಎಂದಿದ್ದಾಳೆ. ಇದರ ಬೆನ್ನಲ್ಲೇ ಉದ್ಯಮಿ ಪ್ರೀ ಸ್ಕೂಲ್ಲೆ ತೆರಳಿದ್ದು ಶ್ರೀದೇವಿ ಜೊತೆಗಿದ್ದ ಸಾಗರ್, ಗಣೇಶ್ ಎಂಬ ಯುವಕರು ನೇರವಾಗಿ ಆವಾಜ್ ಹಾಕಿದ್ದಾರೆ. ಸಾಗರ್‌ನೊಂದಿಗೆ ಎಂಗೇಜೆಂಟ್ ಆಗಿದೆ. ನೀನು ಯಾಕೆ ಹುಡುಗಿ ತಿರುಗಾಡ್ತಿದ್ಯಾ? ಈ ವಿಚಾರ ನಿನ್ನ ಪತ್ನಿಗೆ ತಿಳಿಸ್ತೇನೆಂದು ಬ್ಲಾಕೇಲ್ ಮಾಡಿದ್ದಾರೆ. ಆಗ ಉದ್ಯಮಿ ಶ್ರೀದೇವಿಗೆ ಬಾಯ್ ಫ್ರೆಂಡ್ ಇರುವ ವಿಚಾರ ನನಗೆ ಗೊತ್ತಿಲ್ಲ. ಶ್ರೀದೇವಿ ಜೊತೆ ಊಟ, ತಿಂಡಿ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.

ಮಾರ್ಚ್ 17ರಂದು ಮತ್ತೆ ಉದ್ಯಮಿಗೆ ಶ್ರೀದೇವಿ ಕರೆ ಮಾಡಿದ್ದು, 15 ಲಕ್ಷ ಕೊಡುವಂತೆ ಪೀಡಿಸಿದ್ದಾಳೆ. ಹಣ ಕೊಟ್ಟರೆ ನಿನ್ನ ಅಶ್ಲೀಲ ವಿಡಿಯೋ, ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದ್ರೆ ನಿನ್ನ ಪತ್ನಿಗೆ ತೋರಿಸಿ ಸಂಸಾರ ಹಾಳು ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾಳೆ. ನಿರಂತರ ಬ್ಲಾಕ್ ಮೇಲ್ ಹಾಗೂ ಸುಲಿಗೆಯಿಂದ ಬೇಸತ್ತ ಉದ್ಯಮಿ ಕೊನೆಗೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲೇ ಟೀಚರ್ ಶ್ರೀದೇವಿ ಕಳ್ಳಾಟ ಬೆಳಕಿಗೆ ಬಂದಿದ್ದು ಶ್ರೀದೇವಿ, ಗಣೇಶ್ ಮತ್ತು ಸಾಗರ್‌ನನ್ನು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article