ಎ.8-10 : ಶ್ರೀ ಪೊಂಗಾಳಿ ಅಮ್ಮನ ಮತ್ತು ಪರಿವಾರ ದೇವತೆಗಳ 40ನೇ ವರ್ಷದ ವಾರ್ಷಿಕ ವರ್ಧಂತಿ ಮಹೋತ್ಸವ
ಮಂಗಳೂರು: ಎಪ್ರಿಲ್ 8 ರಿಂದ 10 ವರೆಗೆ ಶ್ರೀ ಪೊಂಗಾಳಿ ಅಮ್ಮನ ಮತ್ತು ಪರಿವಾರ ದೇವತೆಗಳ 40ನೇ ವರ್ಷದ ವಾರ್ಷಿಕ ವರ್ಧಂತಿ ಮಹೋತ್ಸವ ನಡೆಯಲಿದೆ.
ಕಾರ್ಕಳದ ಕುಕ್ಕುಂದೂರಿನ ಅಯ್ಯಪ್ಪನಗರದಲ್ಲಿರುವ
ಶ್ರೀ ಪೊಂಗಾಳಿ ಅಮ್ಮನ್ (ರಿ.) ಕೊಂಗುಕುರೈಕುಲಂ ದೇವಸ್ಥಾನದಲ್ಲಿ ಶ್ರೀ ಪೊಂಗಾಳಿ ಅಮ್ಮನ ಮತ್ತು ಪರಿವಾರ ದೇವತೆಗಳ 40ನೇ ವರ್ಷದ ವಾರ್ಷಿಕ ವರ್ಧಂತಿ ಮಹೋತ್ಸವ ಸಮಾರಂಭ ನಡೆಯಲಿದೆ.
ದಿನಾಂಕ 08-04-2025ನೇ ಮಂಗಳವಾರದಂದು ಪ್ರಾರಂಭವಾಗಿ ದಿನಾಂಕ 10-04-2025ನೇ ಗುರುವಾರದ ವರೆಗೆ ಕಾರ್ಯಕ್ರಮ ನಡೆಯಲಿರುವುದು.
08-04-2025 ರಂದು ಸಾಯಂಕಾಲ ಗಂಟೆ 4-30 ರಿಂದ 5-30ರ ವರೆಗೆ ಮಹಾಗಣಪತಿ ಪೂಜೆ ಮತ್ತು ರಾತ್ರಿ ಗಂಟೆ 7-30 ರಿಂದ 8-30ರ ವರೆಗೆ ಶ್ರೀ ಪೊಂಗಾಳಿ ಅಮ್ಮ ನವರಿಗೆ ಕಾವೇರಿ ತೀರ್ಥ ಕುಂಭಾಭಿಷೇಕ ಮೆರವಣಿಗೆ ಮತ್ತು ಪ್ರಾರ್ಥನೆ ಪೂಜೆ ನಡೆಯಲಿರುವುದು.
ದಿನಾಂಕ 09-04-2025ನೇ ಬುಧವಾರ
ಬೆಳಿಗ್ಗೆ ಗಂಟೆ 9-30 ರಿಂದ 10-30ರ ವರೆಗೆ ಗಣಹೋಮ, ಬೆಳಿಗ್ಗೆ ಗಂಟೆ 9-00 ರಿಂದ 9-30ರ ವರೆಗೆ ತೀರ್ಥಕುಂಭ ಜೋಡಣೆ ಪೂಜೆ, 10-30 ರಿಂದ 11-30ರ ವರೆಗೆ ಶ್ರೀ ಪೊಂಗಾಳಿ ಅಮ್ಮ ನವರಿಗೆ ಆರಸಿನ ನೀರು, ಹಾಲಾಭಿಷೇಕ, ಎಳನೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕ ಪೂಜೆ ನಡೆಯಲಿರುವುದು. ಮತ್ತು ಶ್ರೀ ಕರ್ಪೂರಾಯ ದೈವದೇವರಿಗೆ ಬಲಿಪೂಜೆ ನಡೆಯಲಿರುವುದು.
ಮಧ್ಯಾಹ್ನ ಗಂಟೆ 12-00ರಿಂದ 1-00ರ ವರೆಗೆ ಶ್ರೀ ಪೊಂಗಾಳಿ ಅಮ್ಮನ ಮಹಾ ಅಲಂಕಾರ ಪೂಜೆಯು ನಡೆಯಲಿರುವುದು ಮತ್ತು ತೀರ್ಥ ಪ್ರಸಾದವನ್ನು ಹಾಗೂ ಪಂಚಾಮೃತ ಪ್ರಸಾದವನ್ನು ನೀಡಲಿರುವುದು. ಹಾಗೂ ಗಂಟೆ 1-30ರಿಂದ 3-30ರ ವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿರುವುದು.
10-04-2025 ರಂದು ಬೆಳಿಗ್ಗೆ ಗಂಟೆ 10-30ರಿಂದ 11-30ರ ವರೆಗೆ ಶ್ರೀ ಪೊಂಗಾಳಿ ಅಮ್ಮ ದೇವರ ದರ್ಶನ ನಡೆಯಲಿರುವುದು ಮತ್ತು ಭಕ್ತಾಭಿಮಾನಿಗಳ ಕಷ್ಟ, ಸುಖಗಳ ಬಗ್ಗೆ ಪರಿಹಾರ ಮತ್ತು ಪ್ರಸಾದವನ್ನು ನೀಡಲಾಗುವುದು.
ಮಧ್ಯಾಹ್ನ ಗಂಟೆ 12-30ರಿಂದ 1-30ರ ವರೆಗೆ ಶ್ರೀ ಪೊಂಗಾಳಿ ಅಮ್ಮನ ತೀರ್ಥಕುಂಭ ವಿಸರ್ಜನಾ ಪೂಜೆ ನಡೆಯಲಿರುವುದು ಎಂದು ಪ್ರಕಟನೆ ತಿಳಿಸಿದೆ.