-->

ಮಂಗಳೂರು: ಮನೆ ಲಾಕರ್‌ನಲ್ಲಿಟ್ಟಿದ್ದ 90ಲಕ್ಷ ಮೌಲ್ಯದ 1ಕೆಜಿ ಚಿನ್ನಾಭರಣ ಕಳವು- ಸಿಸಿ ಕ್ಯಾಮರದಲ್ಲೂ ಕಳ್ಳನ ಪತ್ತೆಯಿಲ್ಲ

ಮಂಗಳೂರು: ಮನೆ ಲಾಕರ್‌ನಲ್ಲಿಟ್ಟಿದ್ದ 90ಲಕ್ಷ ಮೌಲ್ಯದ 1ಕೆಜಿ ಚಿನ್ನಾಭರಣ ಕಳವು- ಸಿಸಿ ಕ್ಯಾಮರದಲ್ಲೂ ಕಳ್ಳನ ಪತ್ತೆಯಿಲ್ಲ


ಮಂಗಳೂರು: ನಗರದ ಹೊರವಲಯದ ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ ಮನೆಯೊಂದರ ಲಾಕರ್‌ನಲ್ಲಿಟ್ಟಿದ್ದ ಬರೋಬ್ಬರಿ 90ಲಕ್ಷ ರೂ. ಮೌಲ್ಯದ ಒಂದು‌ ಕೆ.ಜಿ‌. ಚಿನ್ನಾಭರಣ ಕಳವು ಆಗಿರುವ ಬಗ್ಗೆ ದೂರು ದಾಖಲಾಗಿದೆ.

ಜೋಸೆಫ್ ಪಿಂಟೋ ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಜೋಸೆಫ್ ಪಿಂಟೋ ಅವರು ಕುವೈತ್‌ನಲ್ಲಿ ಉದ್ಯೋಗಿ.‌ ವರ್ಷಕ್ಕೊಮ್ಮೆ ಪೆರ್ಮುದೆಯ ಮನೆಗೆ ಬರುತ್ತಿದ್ದರು. ಇವರು ಕುವೈತ್‌ನಲ್ಲಿರುವ ವೇಳೆ ಕೇರಳ ಮೂಲದ ದಂಪತಿ ಮನೆಯನ್ನು ನೋಡಿಕೊಳ್ಳುತ್ತಿದ್ದರು.

ಈ ಮನೆಯಲ್ಲಿ ಲಾಕರ್ ಇದ್ದು, ಇದರಲ್ಲಿದ್ದ ಜೋಸೆಫ್ ಪಿಂಟೊ ಅವರಿಗೆ ಸೇರಿದ್ದ 1‌ಕೆ.ಜಿ ಚಿನ್ನಾಭರಣ ಕಳವು ಆಗಿರುವ ಕೃತ್ಯ ಮಂಗಳವಾರ ಬೆಳಕಿಗೆ ಬಂದಿದೆ. ಈ ಮನೆಯಲ್ಲಿ 12ಸಿ.ಸಿ.ಕ್ಯಾಮರಾಗಳಿದ್ದು, ಮನೆ ಕಾವಲಿಗೆ 6 ಶ್ವಾನಗಳಿತ್ತು. ಆದರೂ ಮನೆಯಲ್ಲಿ ಭಾರೀ ಕಳ್ಳತನ ನಡೆದಿದೆ. ವಿಶೇಷವೆಂದರೆ ಕಳ್ಳರು ಬಂದಿರುವ ಬಗ್ಗೆ ಯಾವುದೇ ದೃಶ್ಯವು ಸಿ.ಸಿ.ಕ್ಯಾಮರಾದಲ್ಲಿ ದಾಖಲಾಗಿಲ್ಲ. ಇದೀಗ ಮನೆ ನೋಡಿಕೊಳ್ಳುತ್ತಿದ್ದ ಕೇರಳ ಮೂಲದ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಜಪೆ ಪೊಲೀಸರು ತನಿಖೆಗೆ ಇಳಿದಿದ್ದಾರೆ.

Ads on article

Advertise in articles 1

advertising articles 2

Advertise under the article