-->

ಮೂಡುಬಿದಿರೆ ಪರಿಸರದ ಮೊಟ್ಟ ಮೊದಲ ಪ್ರಯೋಗ: ಆಳ್ವಾಸ್ ನಿಂದ ವೈಯಕ್ತಿಕ ಸೌಂದರ್ಯ, ಆರೈಕೆ ಕ್ಷೇತ್ರದ ನೂತನ ನಾಲ್ಕು ಉದ್ದಿಮೆ

ಮೂಡುಬಿದಿರೆ ಪರಿಸರದ ಮೊಟ್ಟ ಮೊದಲ ಪ್ರಯೋಗ: ಆಳ್ವಾಸ್ ನಿಂದ ವೈಯಕ್ತಿಕ ಸೌಂದರ್ಯ, ಆರೈಕೆ ಕ್ಷೇತ್ರದ ನೂತನ ನಾಲ್ಕು ಉದ್ದಿಮೆ

ಮೂಡುಬಿದಿರೆ ಪರಿಸರದ ಮೊಟ್ಟ ಮೊದಲ ಪ್ರಯೋಗ: ಆಳ್ವಾಸ್ ನಿಂದ ವೈಯಕ್ತಿಕ ಸೌಂದರ್ಯ, ಆರೈಕೆ ಕ್ಷೇತ್ರದ ನೂತನ ನಾಲ್ಕು ಉದ್ದಿಮೆ





ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯ ಸುತ್ತಮುತ್ತಲಿನ ಪರಿಸರದಲ್ಲಿ ಮೊಟ್ಟ ಮೊದಲ ಬಾರಿಗೆ ವೈಯಕ್ತಿಕ ಸೌಂದರ್ಯ ಹಾಗೂ ಆರೈಕೆ ಕ್ಷೇತ್ರಕ್ಕೆ ಸಂಬಂಧಿಸಿದ ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ, ಪೋಲಿಶ್- ನೈಲ್ಸ್ ಆ್ಯಂಡ್ ಬ್ಯೂಟಿ, ಹೆಲ್ದೀ ಸಿಪ್ ಹಾಗೂ ಲ್ಯಾಕ್ಟೇಶನ್ ಕನ್‌ಸಲ್ಟೇನ್ಸಿ ಸರ್ವೀಸಸ್ ಅನ್ನು ಮೂಡುಬಿದಿರೆಯ ಆಳ್ವಾಸ್ ಆ್ಯಸ್ಥೇಟಿಕ್ ರಿಜುವನೇಶನ್ ಸೆಂಟರ್ ಆವರಣದಲ್ಲಿ ಯುಗಾದಿಯ ಶುಭ ಸಂರ್ಭದಂದು ಉದ್ಘಾಟನೆಗೊಳಿಸಲಾಯಿತು.


ಮಂಗಳೂರಿನ ಕಾಸ್ಮೆಟಿಕ್ ಸ್ತ್ರೀರೋಗ ತಜ್ಞೆ ಹಾಗೂ ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ನ್ಯಾಷನಲ್ ಖ್ಯಾತಿಯ ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಲೋಕಾರ್ಪಣೆಗೊಳಿಸಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್, ನಿಮ್ಮ ಕನಸ್ಸನ್ನು ನನಸಾಗಿಸಲು ಸದಾ ಕಾರ್ಯಪ್ರವೃತ್ತರಾಗಿರಿ. ಎಂದೂ ಹಿಂಜರಿಕೆ ಬೇಡ. ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಉತ್ಸಾಹವಿದ್ದರೆ ಖಂಡಿತ ಸಮಯ ಲಭಿಸುತ್ತದೆ ಎಂದರು. ಮೇಕಪ್ ಕಲೆ ಸಾಮಾನ್ಯವಾಗಿ ಮಹಿಳೆಯರಿಗೆ ಮಾತ್ರ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಈ ಕಲೆಯು ಲಿಂಗಭೇದವನ್ನು ಮೀರಿ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕ್ಷೇತ್ರದಲ್ಲಿ ಪುರುಷರೇ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಆರೋಗ್ಯಪೂರ್ಣ ಜೀವನ ಸದಾ ದೀರ್ಘ ಆಯುಷ್ಯವನ್ನು ಕರುಣಿಸುತ್ತದೆ. ಆರೋಗ್ಯಕರ ಆಹಾರ ಪದಾರ್ಥವನ್ನೆ ಸೇವಿಸಿ. ಆರಂಭದಲ್ಲಿ ಈ ಪ್ರವೃತ್ತಿ ಕಷ್ಟವಾದರೂ, ನಂತರ ರೂಢಿಯಾಗಬಲ್ಲದು. ಮೂಡುಬಿದಿರೆ ಪರಿಸರದಲ್ಲಿ ಆರೋಗ್ಯ ಹಾಗೂ ವೈಯಕ್ತಿಕ ಸೌಂದರ್ಯ ವೃದ್ಧಿಗೆ ಸಹಕಾರಿಯಾಗಬಲ್ಲ ಈ ನಾಲ್ಕು ಉದ್ದಿಮೆಗಳು ಯಶಸ್ಸನ್ನುಗಳಿಸಲಿ ಎಂದು ಆಶಿಸಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಮೂಡುಬಿದಿರೆ ಪರಿಸರದಲ್ಲಿ ಯಾವುದರ ಅಗತ್ಯ ವಿದೆಯೋ ಅಂತಹವುದನ್ನು ಪೂರೈಸುವ ಕೆಲಸವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಾಂಗವಾಗಿ ಮಾಡುತ್ತಾ ಬಂದಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಹೆಚ್ಚು ಜನಾನುರಾಗಿಯಾಗಿ ಮಾಡಿ ಯಶಸ್ಸನ್ನು ಗಳಿಸಿದ್ದೇವೆ. ಇದೀಗ ಮೇಕಪ್ ಹಾಗೂ ಸೌಂರ‍್ಯ ಉದ್ದಿಮೆಯನ್ನು ನಮ್ಮ ಸಂಸ್ಥೆಯಲ್ಲಿನ ವೈದ್ಯರೆ ಪ್ರಾರಂಭಿಸುತ್ತಿರುವುದರಿಂದ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದರು.


ಪೋಲಿಶ್ ನೇಲ್ಸ್ ಅಂಡ್ ಬ್ಯೂಟಿ

ಮೂಡುಬಿದಿರೆಯ ಪರಿಸರದಲ್ಲಿ ಮೊಟ್ಟ ಮೊದಲ ಬಾರಿಗೆ ಉತ್ತಮ ಗುಣಮಟ್ಟದ ಪರಿಣಿತ ತಾಂತ್ರಿಕ ತಂಡದೊಂದಿಗೆ ನೇಲ್ಸ್ ಅಂಡ್ ಬ್ಯೂಟಿ ಕ್ಷೇತ್ರದ ವೈವಿಧ್ಯಮಯ ಸೇವೆಗಳನ್ನು ಒದಗಿಸಲಾಗುತ್ತದೆ. ಇದರಲ್ಲೂ ವಿಶೇಷವಾಗಿ ಜೆಲ್ ನೇಲ್ ಪಾಲಿಷ್, ನೇಲ್ ಆರ್ಟ್ ಮತ್ತು ಎಕ್ಸ್ಟೆನ್ಷನ್, ಮ್ಯಾನಿಕ್ಯೂರ್ ಹಾಗೂ ಪೆಡಿಕ್ಯೂರ್ ಸೇವೆಗಳು ಲಭ್ಯವಿವೆ.


ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ

ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ ಮೂಲಕ ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪ್ರಸಿದ್ಧ ಸೆಲೆಬ್ರಿಟಿ ಮೆಕಪ್ ತಜ್ಞ ವಿಜಿಲ್ಸ್ರವರ ಮೆಕಪ್ ಮಾಸ್ಟರ್ ಕ್ಲಾಸ್ ಆಯೋಜನೆಗೊಂಡಿದ್ದು, ಆಸಕ್ತ ಉದಯೋನ್ಮಖ ಮೇಕಪ್ ಆರ್ಟಿಸ್ಟ್ಗಳಿಗೆ ಸಹಕಾರಿಯಾಗಲಿದೆ. ಈ ವಿಶೇಷ ಮಾಸ್ಟರ್ ಕ್ಲಾಸ್ ಏಪ್ರಿಲ್ 01ರಿಂದ ಪ್ರಾರಂಭವಾಗಿದ್ದು, ವಿಶೇಷವಾಗಿ, ಪಾರಂಪರಿಕ ವಧು ಮೇಕಪ್, ಕೂದಲು ಶೈಲಿ (ಹೇರ್ ಸ್ಟೈಲ್) ಹಾಗೂ ಸೀರೆ ಧರಿಸುವ ಕಲೆ (ಸಾರಿ ಡ್ರೇಪಿಂಗ್) ಕುರಿತಾದ ವಿಶಿಷ್ಟ ಕಾರ್ಯಾಗಾರಗಳು ನಡೆಯಲಿವೆ.


ಹೆಲ್ದೀ ಸಿಪ್ – ಶೋಭಾ ಕ್ಯಾಂಟೀನ್

ಆಳ್ವಾಸ್ ಹೆಲ್ತ್ ಸೆಂಟರ್ ಆವರಣದಲ್ಲಿರುವ ಶೋಭಾ ಕ್ಯಾಂಟೀನ್ ತನ್ನ 15 ವರ್ಷಗಳ ಪರಂಪರೆಯನ್ನು ಮುಂದುವರಿಸುತ್ತಾ, ಇದೀಗ ಹೊಸ ರೂಪದಲ್ಲಿ ಸೇವೆಗೆ ಲಭ್ಯವಾಗಲಿದೆ. ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಶೇಕಡಾ 100 ಶುದ್ಧ ಸಸ್ಯಾಹಾರಿ, ರಾಸಾಯನಿಕಮುಕ್ತ, ಸಕ್ಕರೆ ರಹಿತ ಹಾಗೂ ಪೌಷ್ಟಿಕತೆಯಿಂದ ಸಮೃದ್ಧವಾದ ಹಣ್ಣು-ತರಕಾರಿ ಜ್ಯೂಸ್‌ಗಳನ್ನು ಒದಗಿಸಲಿದೆ. ಆರೋಗ್ಯವನ್ನು ವೃದ್ಧಿಸುವ ಈ ರುಚಿಕರ ಪಾನೀಯಗಳು ನಿಮ್ಮ ದೈನಂದಿನ ಜೀವನಕ್ಕೆ ಹೊಸ ಶಕ್ತಿಯನ್ನು ನೀಡುವ ವಿಶ್ವಾಸದೊಂದಿಗೆ ಈಗ ಲಭ್ಯವಾಗಲಿದೆ.

ಸ್ತನ್ಯಪಾನದ ಮಾರ್ಗದರ್ಶಿ ಸೇವೆಗಳು – ತಾಯಂದಿರು ಮತ್ತು ಶಿಶುವಿನ ಆರೋಗ್ಯಕ್ಕಾಗಿ


ಮಗುವಿಗೆ ಸ್ತನ್ಯಪಾನ ಮಾಡಿಸುವುದು ಸುಂದರ ಮತ್ತು ಸಹಜ ಪ್ರಕ್ರಿಯೆಯಾದರೂ, ಆರಂಭದಲ್ಲಿ ಅನೇಕ ಮಹಿಳೆಯರಿಗೆ ಹಲವು ಆತಂಕಗಳು ಎದುರಾಗುತ್ತವೆ. ಅನೇಕ ತಾಯಂದಿರು ಲಾಚಿಂಗ್ ಸಮಸ್ಯೆ, ಹಾಲಿನ ಪೂರೈಕೆ ತೊಂದರೆಗಳು ಹಾಗೂ ಪ್ರಸವಾ ನಂತರದ ಮಾನಸಿಕ ಒತ್ತಡಗಳನ್ನು ಎದುರಿಸುತ್ತಾರೆ. ಇದಕ್ಕಾಗಿ ಅಂತಾರಾಷ್ಟ್ರೀಯ ಪ್ರಮಾಣಿತ ಸ್ತನ್ಯಪಾನ ಸಲಹೆಗಾರರ ಮಂಡಳಿಯಿಂದ ಕೋರ್ಸನ್ನು ಪೂರ್ಣಗೊಳಿಸಿದ ಪ್ರೊ. ಜೆನ್ವಿವ್ ಕವಿತ್ ಡಿ’ಸಿಲ್ವಾ ಮಾರ್ಗದರ್ಶನ ನೀಡಲಿದ್ದಾರೆ. ತಾಯಂದಿರ ಮತ್ತು ಶಿಶುವಿನ ಉತ್ತಮ ಆರೋಗ್ಯಕ್ಕಾಗಿ ಹಾಗೂ ಸ್ತನ್ಯಪಾನಕ್ಕೆ ಸಂಬಂಧಿಸಿದ ಸಮಗ್ರ ಮಾರ್ಗದರ್ಶನವನ್ನು ಇಲ್ಲಿ ಪಡೆಯಬಹುದಾಗಿದೆ.


ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲ್‌ದೀಪ್ ಎಂ, ಜಯಶ್ರೀ ಅಮರನಾಥ್ ಶೆಟ್ಟಿ, ಮೀನಾಕ್ಷಿ ಆಳ್ವ, ವೈಯಕ್ತಿಕ ಸೌಂದರ್ಯ ಹಾಗೂ ಆರೈಕೆ ಕ್ಷೇತ್ರದ ಉದ್ದಿಮೆಗಳ ರೂವಾರಿಗಳಾದ ಡಾ ಹನಾ ಶೆಟ್ಟಿ, ಡಾ ಗ್ರೀಷ್ಮಾ ಆಳ್ವ, ಆಳ್ವಾಸ್ ಆ್ಯಸ್ಥೇಟಿಕ್ ರಿಜುವನೇಶನ್ ಸೆಂಟರ್‌ನ ಡಾ ಸುಷ್ಮಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಧೀಕ್ಷಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Ads on article

Advertise in articles 1

advertising articles 2

Advertise under the article