ಪುತ್ತೂರು: ತಲವಾರು ಹಿಡಿದು ಪೋಸು ಕೊಟ್ಟಿರುವ ಇಬ್ಬರು ಅರೆಸ್ಟ್
Thursday, April 10, 2025
ಪುತ್ತೂರು: ಕಾನೂನಿಗೆ ಧಕ್ಕೆ ತರುವ ರೀತಿಯಲ್ಲಿ ಮಾರಕಾಯುಧ ತಲವಾರು ಪ್ರದರ್ಶಿಸಿ ಪೋಸು ಕೊಟ್ಟು ತೆಗೆದಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಪುತ್ತೂರು ಕುರಿಯ ಗ್ರಾಮದ ನಿವಾಸಿ ಸುಜಿತ್ (36) ಹಾಗೂ ಪುತ್ತೂರು ಆರ್ಯಾಪು ಗ್ರಾಮದ ನಿವಾಸಿ ಪುಟ್ಟಣ್ಣ (32) ಬಂಧಿತ ಆರೋಪಿಗಳು.
ಇವರಿಬ್ಬರು ಸಂಘಪರಿವಾರದ ಸಕ್ರಿಯ ಕಾರ್ಯರ್ತರು. ತಲವಾರು ಹಿಡಿದು 'ಟೈಮ್' ಎಂದು ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ಬುಧವಾರ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ, ವಿಚಾರಣೆ ನಡೆಸಲಾಗುತ್ತಿದೆ.