-->

ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿಸಿ ಆಸ್ಪತ್ರೆಯೊಳಗಿನಿಂದ ದರದರನೇ ಎಳೆದೊಯ್ದ ವೈದ್ಯ- ವೀಡಿಯೋ

ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿಸಿ ಆಸ್ಪತ್ರೆಯೊಳಗಿನಿಂದ ದರದರನೇ ಎಳೆದೊಯ್ದ ವೈದ್ಯ- ವೀಡಿಯೋ


ಭೋಪಾಲ್‌: ಪತ್ನಿಯ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಆಗಮಿಸಿದ ವಯೋವೃದ್ಧರೊಬ್ಬರಿಗೆ ವೈದ್ಯನೋರ್ವ ಹಿಗ್ಗಾಮಗ್ಗಾ ಥಳಿಸಿ, ಅವರನ್ನು ಆಸ್ಪತ್ರೆಯ ಒಳಗಿನಿಂದ ದರದರನೆ ಎಳೆದೊಯ್ದು ಹಿಂಸಿಸಿರುವ ಘಟನೆ ಮಧ್ಯಪ್ರದೇಶದ ಛತರ್ಪುರದಲ್ಲಿ ನಡೆದಿದೆ.

ಎಪ್ರಿಲ್ 17ರಂದು ಈ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಕೆಲವರು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. 77ರ ವಯಸ್ಸಿನ ಉಧವ್ಹಾಲ್ ಜೋಶಿಯವರು ತಮ್ಮ ಅಸ್ವಸ್ಥ ಪತ್ನಿಗೆ ಚಿಕಿತ್ಸೆ ಕೊಡಿಸಲು ಜಿಲ್ಲಾ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಅವರು ಕ್ಯೂನಲ್ಲಿ ನಿಂತಿದ್ದರು. ಆಗ ಆಸ್ಪತ್ರೆಯಲ್ಲಿ ಜನಜಂಗುಳಿ ಕಂಡು ಸಿಡಿಮಿಡಿಗೊಂಡ ವೈದ್ಯನೊಬ್ಬ 'ಯಾಕೆ ಇಷ್ಟೊಂದು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದೀರಿ' ಎಂದು ಪ್ರಶ್ನಿಸಿದ್ದಾನೆ. ಆಗ ಉಧವ್ಹಾಲ್ ಜೋಶಿ ಈ ಬಗ್ಗೆ ವೈದ್ಯನಿಗೆ ವಿವರಿಸಲು ಯತ್ನಿಸಿದಾಗ ಆವರ ಅವರ ಕೆನ್ನೆಗೆ ಹೊಡೆದಿದ್ದಾ ಎನ್ನಲಾಗಿದೆ. ಬಳಿಕ ಅವರನ್ನು ಆಸ್ಪತ್ರೆಯೊಳಗಿರುವ ಪೊಲೀಸ್ ಚೌಕಿಯವರೆಗೆ ಎಳೆದುಕೊಂಡೇ ಹೋಗಿ, ಅಲ್ಲಿಯೇ ಕೂಡಿಹಾಕುವ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.

ಈ ಬಗ್ಗೆ ಸ್ಥಳದಲ್ಲಿದ್ದವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ.

"ವೈದ್ಯರು ತನಗೆ ಥಳಿಸಿ ಪೊಲೀಸ್‌ ಚೌಕಿಯವರೆಗೆ ಎಳೆದೊಯ್ದಿದ್ದಾರೆ. ಅಲ್ಲದೆ ನನ್ನ ಕನ್ನಡಕವನ್ನು ಕೂಡಾ ಒಡೆದುಹಾಕಿದ್ದಾರೆ. ಜುಬ್ಬಾ ಕೂಡಾ ಹರಿದುಹಾಕಿದ್ದಾರೆ ಜೊತೆಗೆ ಕೊಲ್ಲುವ ಬೆದರಿಕೆಯೊಡ್ಡಿದ್ದಾರೆ. ನನ್ನ ಪತ್ನಿಯ ಮೇಲೂ ಹಲ್ಲೆ ನಡೆದಿದೆ" ಎಂದು ಜೋಶಿ ಆಪಾದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದ್ದು, ನೋಟಿಸ್ ಜಾರಿಗೊಳಿಸಲಾಗಿದೆ. ತನಿಖಾ ಸಮಿತಿಯ ಸದಸ್ಯರು ಸ್ಥಳಕ್ಕೆ ತೆರಳಿದ್ದಾರೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಜಿ.ಎಲ್.ಅಹಿರ್ವಾರ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article