ಬೆಳ್ತಂಗಡಿ: ಬೆಳಾಲು ರಸ್ತೆಬದಿಯಲ್ಲಿ ಹೆಣ್ಣುಶಿಶು ಪತ್ತೆ ಪ್ರಕರಣ- ಪೋಷಕರನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು
Thursday, April 3, 2025
ಬೆಳ್ತಂಗಡಿ: ಬೆಳಾಲು ಗ್ರಾಮದ ಕೊಡೋಳುಕೆರೆ -ಮುಂಡ್ರೋಟ್ಟು ರಸ್ತೆ ಬದಿಯಲ್ಲಿ ಮಾ.22ರಂದು ಬೆಳಗ್ಗೆ ಹೆಣ್ಣು ಶಿಶು ಪತ್ತೆ ಪ್ರಕರಣದ ಬೆನ್ನು ಬಿದ್ದ ಧರ್ಮಸ್ಥಳ ಠಾಣಾ ಪೊಲೀಸರು ಇದೀಗ ಶಿಶುವಿನ ಪೋಷಕರನ್ನು ಪತ್ತೆಹಚ್ಚಿದ್ದಾರೆ.
ಕಾಡು ರಸ್ತೆಯ ಬದಿಯಲ್ಲಿ ಶಿಶು ಪತ್ತೆಯಾದ ತಕ್ಷಣ ಸಾರ್ವಜನಿಕರು ರಕ್ಷಿಸಿ ಆರೈಕೆ ಮಾಡಿದ್ದರು. ಬಳಿಕ ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಶಿಶುವನ್ನು ವಶಕ್ಕೆ ಪಡೆದು ಪುತ್ತೂರು ಅಶ್ರಮಕ್ಕೆ ಹಸ್ತಾಂತರಿಸಿದ್ದರು. ಇದೀಗ ಧರ್ಮಸ್ಥಳ ಪೊಲೀಸರು ಮಗುವಿನ ತಂದೆಯನ್ನು ಪತ್ತೆ ಹಚ್ಚಿ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಶುವಿನ ತಂದೆ ರಂಜಿತ್ ಗೌಡ ಹಾಗೂ ಸುಶ್ಮಿತಾ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ಬಗ್ಗೆ ಎರಡೂ ಮನೆಯವರಿಗೂ ತಿಳಿದಿರಲಿಲ್ಲ. ಈ ನಡುವೆ ಸುಶ್ಮಿತಾ ಗರ್ಭಿಣಿಯಾಗಿದ್ದು, ವಿಚಾರ ಯಾರಿಗೂ ತಿಳಿಸದೆ ಇಬ್ಬರೂ ಗೌಪ್ಯತೆ ಕಾಪಾಡಿದ್ದರು. ಲೇಡಿ ಡಾಕ್ಟರ್ ಬಳಿಗೂ ಪ್ರತಿ ತಿಂಗಳು ದಂಪತಿಗಳಂತೆ ಹೋಗುತ್ತಿದ್ದುರು. ತಾಯಿ ಕಾರ್ಡ್ ಕೇಳಿದ್ದಕ್ಕೆ ಅದು ಮಿಸ್ಸಾಗಿದೆ ಎಂದು ಹೇಳುತ್ತಿದ್ದರು ಎನ್ನಲಾಗಿದೆ.
ಉಜಿರೆಯಲ್ಲಿ ಬಾಡಿಗೆ ಮನೆ ಮಾಡಿ ಬಿಟ್ಟಿದ್ದ ರಂಜಿತ್ ಗೌಡ ವಾರಕ್ಕೊಮ್ಮೆ ಬಂದು ನೋಡಿಕೊಂಡು ಹೋಗುತ್ತಿದ್ದ. ಬಳಿಕ ಆಕೆಗೆ ನಾರ್ಮಲ್ ಡೆಲಿವರಿಯೂ ಆಗಿ ಬಾಡಿಗೆ ರೂಂ ನಲ್ಲಿದ್ದರು. ಬಳಿಕ ಕುಟುಂಬದ ಭಯದಿಂದ ಅಥವಾ ಮದುವೆಯಾಗದೆ ಗರ್ಭಿಣಿಯಾದ ಕಾರಣ ಮಗುವನ್ನು ಕಾಡಿಗೆ ಬಿಟ್ಟಿರುವ ಸಾಧ್ಯತೆ ಇದೆ. ಅದಲ್ಲದೆ ಎರಡು ಮನೆಗೆ ಪೊಲೀಸ್ ಎಂಟ್ರಿಯಾಗುವವರೆಗೂ ಈ ವಿಚಾರ ಎರಡು ಮನೆಯ ಪೋಷಕರಿಗೆ ಗೊತ್ತಾಗಿಲ್ಲ ಎನ್ನಲಾಗಿದೆ. ಪ್ರಕರಣದ ಸತ್ಯಾತ್ಯತೆ ತಂದೆ-ತಾಯಿಯ ವಿಚಾರಣೆ ಬಳಿಕ ತಿಳಿದು ಬರಬೇಕಾಗಿದೆ.
ಇದೀಗ ಇಬ್ಬರು ಕೂಡ ಸ್ವ ಇಚ್ಛೆಯಿಂದ ಮದುವೆಯಾಗುವುದಾಗಿ ಪೋಲಿಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಮುಂದೆ ಒಪ್ಪಿರುವ ರಂಜಿತ್ ಗೌಡ ಹಾಗೂ ಕುಟುಂಬ ಮತ್ತು ಯುವತಿಯ ಕುಟುಂಬವರು ಎನ್ನಲಾಗಿದೆ. ಅಪರಿಚಿತ ಹೆಣ್ಣು ಮಗು ಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಾಗಿ ಅನ್ನಪೂರ್ಣ ಮಾ.22 ರಂದು ದೂರು ನೀಡಿದ್ದು ಅದರಂತೆ BNS 93 (ಅಪರಿಚಿತ ಮಗುವನ್ನು ಯಾರೋ ಬಿಟ್ಟು ಹೋದ) ಬಗ್ಗೆ ಪ್ರಕರಣ ದಾಖಲಾಗಿತ್ತು.
ಧರ್ಮಸ್ಥಳ ಪೊಲೀಸರು ಮಗುವಿನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು. ಪುತ್ತೂರು ಆಶ್ರಮದಲ್ಲಿರುವ ಮಗುವನ್ನು ತಂದೆ-ತಾಯಿಗೆ ಕಾನೂನು ಪ್ರಕ್ರಿಯೆ (DNA) ಮುಗಿಸಿದ ಬಳಿಕ ಹಸ್ತಾಂತರಿಸಲಿದ್ದಾರೆ.