ಮಿನುಗು ತಾರೆ ಬೇಸಿಗೆ ಶಿಬಿರ ಸಮಾರೋಪ
Wednesday, April 23, 2025
ಬ್ರಹ್ಮಕುಮಾರೀಸ್ ವರಾಂ ಧವನ ರಾಜಯೋಗ ಧ್ಯಾನ ಕೇಂದ್ರ ನಿಟ್ಟೆ ಇವರು ಆಯೋಜಿಸಿದ 5 ದಿನಗಳ ಮಿನುಗು ತಾರೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಏಪ್ರಿಲ್ 19 ರಂದು ಜರಗಿತು.
ಇದರಲ್ಲಿ ಭಾಗವಸಿದ ಮಕ್ಕಳ ಜೊತೆಗೆ ಅವರ ಪೋಷಕರು ಪಾಲ್ಗೊಂಡಿದ್ದರು.
ಗೌರವ ಅತಿಥಿಯಾಗಿ ಆಗಮಿಸಿದ ಕಾರ್ಕಳದ ಪ್ರಜಾಪಿತಾ ಬ್ರಹ್ಮಕುಮಾರಿಈಶ್ವರಿಯ ವಿಶ್ವ ವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿಜಿ ಯ ವರು ಈ ಸಂದರ್ಭಲ್ಲಿ ಮಾತಾಡಿ ಮಕ್ಕಳಿಗೆ ಶುಭಕೋರುವ ಜೊತೆಗೆ ನೈತಿಕ ಮೌಲ್ಯಗಳ ಬಗ್ಗೆ ಕೂಡ ತಿಳಿಸಿದರು ಮತ್ತು ಈಶ್ವರೀಯ ಸಂದೇಶವನ್ನು ನೀಡಿದರು.
ಜೊತೆಗೆ ಅತಿಥಿಗಳಾದ ಬೆಲ್ಮನ್ ಸರಕಾರಿ ಪದವಿ ಪೂರ್ವ ಕಾಲೇಜ್ ಹಿರಿಯ ಉಪನ್ಯಾಸಕಿ ಜಯಂತಿ ಶೆಟ್ಟಿ ಯವರು ಹಾಗು ಬಾಲಕೃಷ್ಣ ನಾಯಕ್, coordinator B. D. O. ಮಾತಾಡಿ ಇಂತಹ ಶಿಬಿರಗಳ ಮಹತ್ವವನ್ನು ತಿಳಿಸಿ ಕೊಟ್ಟರು.
ಆಯೋಜಕರಾದ ಮನೋಹರ್ ಶೆಟ್ಟಿ ಹಾಗು ಯಶೋದಾ ಶೆಟ್ಟಿ ಯವರು ಕಾರ್ಯಕ್ರಮವನ್ನು ನಡೆಸಿ ಎಲ್ಲರಿಗು ಧನ್ಯವಾದ ಅರ್ಪಿಸಿದರು