ಅತ್ಯಾಚಾರಗೈದು ಪುತ್ರಿಯ ಕೊಲೆಗೈದವನನ್ನು ನಾಡಕೋವಿಯಿಂದ ಗುಂಡಿಕ್ಕಿ ಕೊಂದ ಶಂಕರನಾರಾಯಣ ಇನ್ನಿಲ್ಲ
Saturday, April 12, 2025
ಮಲಪ್ಪುರಂ: 2001ರಲ್ಲಿ ಕೇರಳವನ್ನು ಬೆಚ್ಚಿಬಿಟ್ಟಿದ್ದ ಕೃಷ್ಣಪ್ರಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪುತ್ರಿಯನ್ನು ಕಳೆದುಕೊಂಡ ಶಂಕರನಾರಾಯಣ, ಆರೋಪಿ ಮೊಹಮ್ಮದ್ ಕೋಯನನ್ನು ನಾಡಕೋವಿಯಿಂದ ಕೊಲೆಗೈದು ತನ್ನದೇ ರೀತಿಯಲ್ಲಿ ನ್ಯಾಯ ಕೊಟ್ಟಿದರು.
ಅತ್ಯಾಚಾರ, ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಮೊಹಮ್ಮದ್ ಕೋಯ ಬಳಿಕ ಜಾಮೀನಿನಲ್ಲಿ ಹೊರಬಂದಿದ್ದ. ಕೋಯನನ್ನು ತನ್ನದೇ ನಾಡಕೋವಿಯಿಂದ ಕೊಂದು ಬಾವಿಗೆ ದೂಡಿ ಮಣ್ಣು ಮಾಡಿದ್ದರು ಶಂಕರನಾರಾಯಣ. ಪ್ರಕರಣದಲ್ಲಿ ಬಂಧಿತರಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ ಹೊರಬಂದಿದ್ದರು.
ಇದೀಗ ತಮ್ಮ 75ನೇ ವರ್ಷದಲ್ಲಿ ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದದ್ದಾರೆ. ಶಂಕರನಾರಾಯಣರು ತಮ್ಮ ಜೀವಿತಾವಧಿಯಲ್ಲಿ ಪುತ್ರಿಯ ನೆನಪಿನಲ್ಲೇ ಮುಳುಗಿದ್ದರು. ಆದರೆ “ತನ್ನ ಪುತ್ರಿಗೆ ನ್ಯಾಯ ಕೊಟ್ಟೆ ಎಂಬ ತೃಪ್ತಿಯೊಂದಿಗೆ ಅವರು ಬಾಳಿದರು” ಎಂಬುದು ನೆರೆಹೊರೆಯವರ ಮಾತನಾಡುತ್ತಿದ್ದಾರೆ.