-->

ಸುರತ್ಕಲ್: ಎನ್ಐಟಿಕೆ ಬೀಚ್‌‌ನಲ್ಲಿ ನೀರಾಟಕ್ಕೆ ಇಳಿದ ಮುಂಬೈ ಮೂಲದ ವಿದ್ಯಾರ್ಥಿ ಮೃತ್ಯು- ಮತ್ತೋರ್ವ ನಾಪತ್ತೆ

ಸುರತ್ಕಲ್: ಎನ್ಐಟಿಕೆ ಬೀಚ್‌‌ನಲ್ಲಿ ನೀರಾಟಕ್ಕೆ ಇಳಿದ ಮುಂಬೈ ಮೂಲದ ವಿದ್ಯಾರ್ಥಿ ಮೃತ್ಯು- ಮತ್ತೋರ್ವ ನಾಪತ್ತೆ



ಸುರತ್ಕಲ್: ಇಲ್ಲಿನ ಎನ್ಐಟಿಕೆ ಬೀಚ್‌ನಲ್ಲಿ ನೀರಾಟಕ್ಕೆ ಇಳಿದ ಮುಂಬೈ ಮೂಲದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಮತ್ತೋರ್ವನನ್ನು ಲೈಫ್ ಗಾರ್ಡ್‌ ಸಮುದ್ರದಿಂದ ಮೇಲಕ್ಕೆತ್ತಿದರೂ ದುರಾದೃಷ್ಟವಶಾತ್ ಆತ  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.


ಮುಂಬೈ ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಧ್ಯಾನ್ ಬಂಜನ್(18), ಹಾಗೂ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಹನೀಶ್ ಕುಲಾಲ್(15) ಮದುವೆಗೆಂದು ಸೂರಿಂಜೆಯ ಪ್ರಖ್ಯಾತ್ ಎಂಬವರ ಮನೆಗೆ ಬಂದಿದ್ದರು. ಮಂಗಳವಾರ ಸಂಜೆ 5.30ಕ್ಕೆ  ಧ್ಯಾನ್ ಹಾಗೂ ಹನೀಶ್ ಸೇರಿದಂತೆ 10ಮಂದಿ ಸೂರಿಂಜೆಯ ಮನೆಯಿಂದ ಎನ್ಐಟಿಕೆ ಬೀಚ್‌ಗೆ ವಿಹಾರಕ್ಕೆಂದು ತೆರಳಿದ್ದಾರೆ.

ಈ ವೇಳೆ‌ ಸಮುದ್ರಕ್ಕೆ ಇಳಿದ ಧ್ಯಾನ್ ಹಾಗೂ ಹನೀಶ್ ಕುಲಾಲ್ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ‌. ಇದನ್ನು ಗಮನಿಸಿದ ಲೈಫ್ ಗಾರ್ಡ್ ಪ್ರದೀಪ್ ಆಚಾರ್ಯ ಎಂಬುವರು ಧ್ಯಾನ್‌ ಬಂಜನ್‌ನನ್ನು ದಡಕ್ಕೆ ಎಳೆದು ತಂದಿದ್ದಾರೆ. ಆದರೆ ಹನೀಶ್ ಕುಲಾಲ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ‌. ಧ್ಯಾನ್‌ನನ‌್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article