-->

ಜಗತ್ತಿನ ಶತಕೋಟ್ಯಧಿಪತಿಗಳ ಪಟ್ಟಿ ಬಿಡುಗಡೆ- ಭಾರತಕ್ಕೆ ಮೂರನೇ ಸ್ಥಾನ; ಅಮೇರಿಕಾ ಪ್ರಥಮ, ಚೀನಾ ದ್ವಿತೀಯ

ಜಗತ್ತಿನ ಶತಕೋಟ್ಯಧಿಪತಿಗಳ ಪಟ್ಟಿ ಬಿಡುಗಡೆ- ಭಾರತಕ್ಕೆ ಮೂರನೇ ಸ್ಥಾನ; ಅಮೇರಿಕಾ ಪ್ರಥಮ, ಚೀನಾ ದ್ವಿತೀಯ


ವಾಷಿಂಗ್ಟನ್‌: ಜಗತ್ತಿನ ಶತಕೋಟ್ಯಧಿಪತಿಗಳ ಈ  ವರ್ಷದ ಪಟ್ಟಿಯನ್ನು ಫೋರ್ಬ್ಸ್ ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ 902 ಹೆಸರುಗಳನ್ನು ಹೊಂದಿ ಅಮೆರಿಕ ಮೊದಲ ಸ್ಥಾನದಲ್ಲಿದೆ. 450 ಹೆಸರುಗಳೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದ್ದರೆ, ಇನ್ನೂರು ಶತಕೋಟ್ಯಧೀಶರ ಜೊತೆಗೆ ಇನ್ನೂ ಐದು ಹೆಸರುಗಳ ಸೇರ್ಪಡೆಯೊಂದಿಗೆ ಭಾರತ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ.

ಜಾಗತಿಕ ಸಂಪತ್ತುಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಈ ವರ್ಷ ಬಿಲಿಯನೇರ್‌ಗಳ ಸಂಖ್ಯೆ 3 ಸಾವಿರವನ್ನು ಮೀರಿದೆ. ಇವರೆಲ್ಲರ ಸಂಪತ್ತು ಸೇರಿದರೆ 16.1 ಟ್ರಿಲಿಯನ್ ಡಾಲರ್ ಆಗುತ್ತದೆ. ಪಟ್ಟಿಯಲ್ಲಿ ಇರುವವರ ಪೈಕಿ ಅರ್ಧಕ್ಕಿಂತ ಹೆಚ್ಚು ಬಿಲಿಯನೇರ್‌ಗಳು ಅಮೆರಿಕ, ಚೀನಾ ಮತ್ತು ಭಾರತ- ಈ ಮೂರೇ ದೇಶದವರೇ ಆಗಿ ಇಡೀ ಜಗತ್ತಿನ ಸಂಪತ್ತು ಈ ಮೂರು ದೇಶಗಳಲ್ಲಿ ಕೇಂದ್ರೀಕೃತವಾದಂತಿದೆ ಎಂದು ಫೋರ್ಬ್ಸ್ ವರದಿಯಲ್ಲಿ ತಿಳಿಸಲಾಗಿದೆ.

ಅಮೆರಿಕದ ಸಂಪತ್ತು 6.8 ಟ್ರಿಲಿಯನ್ ಡಾಲರ್ ಆಗಿದ್ದು, ಉದ್ಯಮಿ ಎಲಾನ್ ಮಸ್ಕ್ 342 ಶತಕೋಟಿ ಡಾಲರ್‌ನೊಂದಿಗೆ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. ಮಾರ್ಕ್ ಜುಕರ್‌ಬರ್ಗ್ 216 ಶತಕೋಟಿ ಡಾಲರ್, ಜೆಫ್ ಬೆಜೋಸ್ 215 ಶತಕೋಟಿ ಡಾಲರ್‌ನೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ. ಭಾರತದ ಯಾವ ಶ್ರೀಮಂತರ ಹೆಸರೂ ಜಗತ್ತಿನ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿಲ್ಲ. ಅಮೆರಿಕಕ್ಕೆ ಆ ರಾಷ್ಟ್ರದ ತಂತ್ರಜ್ಞಾನ, ಹಣಕಾಸು, ಮನರಂಜನಾ ಉದ್ಯಮಗಳು ಅಪಾರ ಸಂಪತ್ತು ಸೃಷ್ಟಿಸಿಕೊಡುತ್ತಿವೆ.

ಚೀನಾದ ಬಳಿ 1.7 ಟ್ರಿಲಿಯನ್ ಡಾಲರ್ ಸಂಪತ್ತಿದೆ. ಚೀನಾದ ಶ್ರೀಮಂತರಲ್ಲಿ ಬೈಟ್‌ಡಾನ್ಸ್‌ನ ಝಾಂಗ್ ಯಿಮಿಂಗ್ 65.5 ಶತಕೋಟಿ ಡಾಲರ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಬಳಿ 941 ಶತಕೋಟಿ ಡಾಲರ್ ಸಂಪತ್ತಿದೆ. ಮುಕೇಶ್ ಅಂಬಾನಿ 92.5 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಭಾರತದ ಅತಿ ದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 56.3 ಶತಕೋಟಿ ಡಾಲರ್ ಹೊಂದಿರುವ ಗೌತಮ್ ಅದಾನಿ ನಂತರದ ಸ್ಥಾನದಲ್ಲಿದ್ದಾರೆ.

ಭಾರತದ ಟಾಪ್‌ 10 ಶ್ರೀಮಂತರು

1. ಮುಕೇಶ್ ಅಂಬಾನಿ

2. ಗೌತಮ್ ಅದಾನಿ

3. ಸಾವಿತ್ರಿ ಜಿಂದಾಲ್

4. ಶಿವ್ ನಾಡಾರ್

5. ದಿಲೀಪ್ ಸಾಂಘಿ

6. ಸೈರಸ್ ಪೂನಾವಾಲಾ

7. ಕುಮಾರ್ ಬಿರ್ಲಾ

8. ರಾಧಾಕೃಷ್ಣ ದಮಾನಿ

9. ಲಕ್ಷ್ಮೀ ಮಿತ್ತಲ್

10. ಉದಯ್ ಕೋಟಕ್

ಭಾರತದ ಅತ್ಯಂತ ಶ್ರೀಮಂತ ಮಹಿಳೆ

ಸಾವಿತ್ರಿ ಜಿಂದಾಲ್ ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎಂದು ಅಗ್ರಗಣ್ಯರಾಗಿ ಹೊರಹೊಮ್ಮಿದ್ದಾರೆ. 74 ವರ್ಷದ ಸಾವಿತ್ರಿಯವರು ಒ.ಪಿ. ಜಿಂದಾಲ್ ಸಮೂಹದ ಅಧ್ಯಕ್ಷೆಯಾಗಿದ್ದಾರೆ. ಸಮೂಹದ ವಿವಿಧ ಉದ್ಯಮಗಳನ್ನು ಅವರ ನಾಲ್ವರು ಪುತ್ರರು ನಿರ್ವಹಿಸುತ್ತಿದ್ದಾರೆ.

ಟಾಪ್ ಟೆನ್ ದೇಶಗಳು

1. ಅಮೆರಿಕ 902 6.8 ಟ್ರಿಲಿಯನ್ ಡಾಲ‌ರ್

2. ಚೀನಾ 450 1.7 ಟ್ರಿಲಿಯನ್ ಡಾಲರ್

3. ಭಾರತ 205 941 ಶತಕೋಟಿ ಡಾಲರ್

4. ಜರ್ಮನಿ 171 793 ಶತಕೋಟಿ ಡಾಲರ್

5. ರಷ್ಯಾ 140 580 ಶತಕೋಟಿ ಡಾಲರ್

6. ಕೆನಡಾ 76 359 ಶತಕೋಟಿ ಡಾಲರ್

7. ಇಟಲಿ 74 339 ಶತಕೋಟಿ ಡಾಲರ್

8. ಹಾಂಗ್‌ಕಾಂಗ್ 66 335 ಶತಕೋಟಿ ಡಾಲರ್

9. ಬ್ರೆಜಿಲ್ 56 212 ಶತಕೋಟಿ ಡಾಲರ್

10. ಬ್ರಿಟನ್ 55 238 ಶತಕೋಟಿ ಡಾಲ‌ರ್

Ads on article

Advertise in articles 1

advertising articles 2

Advertise under the article