ಇನ್‌ಸ್ಟಾಗ್ರಾಮ್‌ನಲ್ಲಿ ಹಾಯ್ ಸಂದೇಶದಿಂದ ಆರಂಭವಾಯ್ತು ಅಮೇರಿಕಾದ ಯುವತಿ ಆಂಧ್ರಪ್ರದೇಶದ ಯುವಕನ ನಡುವೆ ಪ್ರೀತಿ- ಇನ್ನೇನು ಹಸೆಮನೆ ಏರಲಿದೆ ಈ ಜೋಡಿ
Friday, April 11, 2025
ಆಕೆ ಅಮೆರಿಕದ ಚೆಲುವೆ, ಈತ ಆಂಧ್ರಪ್ರದೇಶ ಹುಡುಗ. ಆನ್ಲೈನ್‌ನಲ್ಲಿ ಕೇವಲ ಒಂದೇ ಒಂದು ಹಾಯ್ ಸಂದೇಶದಿಂದ ಪ್ರಾರಂಭವಾದ ಇವರ ಪರಿಚಯ ಪ್ರೀತಿಯಾಗಿ ಬದಲಾಗಿ ಇಂದು ಅವರನ್ನು ದಂಪತಿಯಾಗಲು ಮುನ್ನುಡಿ ಹಾಡಿದೆ. ಅದಕ್ಕಾಗಿ ಆಕೆ ಸಾವಿರಾರು ಮೈಲು ದೂರದ ಅಮೇರಿಕಾದಿಂದ ಆಂಧ್ರಪ್ರದೇಶಕ್ಕೆ ಬಂದು ಈತನನ್ನು ಭೇಟಿಯಾಗಿದ್ದಾಳೆ.
ಹೌದು.. ಇವರದ್ದು ಸೋಶಿಯಲ್ ಮೀಡಿಯಾ ಪ್ರೀತಿ. ಅಮೆರಿಕದ ಛಾಯಾಗ್ರಾಹಕಿ ಜಾಕ್ಲಿನ್ ಫೊರರೊ ಆಂಧ್ರಪ್ರದೇಶದ ಚಂದನ್‌ನನ್ನು ಮೊದಲು ಪರಿಚಯ ಮಾಡಿಕೊಂಡಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ, ಜಾಕ್ಲಿನ್ ಫೊರೆರೊ ಇನ್‌ಸ್ಟಾಗ್ರಾಮ್‌ನಲ್ಲಿ ಚಂದನ್ ಪ್ರೊಫೈಲ್ ನೋಡಿ ಇಷ್ಟಪಟ್ಟು ಪ್ರೀತಿ ಮಾಡಲು ಶುರು ಮಾಡಿದ್ದಾಳೆ. ಆತನ ಸರಳತೆಯನ್ನು ಹೆಚ್ಚು ಇಷ್ಟಪಟ್ಟಿದ್ದಾಳೆ.
ಹೀಗೆ ಹಾಯ್ ಎಂಬ ಒಂದು ಸಂದೇಶದಿಂದ ಆರಂಭವಾದ ಇವರ ಮಾತು, 14 ತಿಂಗಳುಗಳ ಕಾಲ ಮುಂದುವರಿದೆ. ಈ ನಡುವೆ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಇದೀಗ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಶ್ರೀಮತಿ ಫೊರೆರೊ ಎಂದು ಬರೆದಿದ್ದಾಳೆ, “14 ತಿಂಗಳು ಒಟ್ಟಿಗೆ ಮತ್ತು ಹೊಸ ಅಧ್ಯಾಯಕ್ಕೆ ಸಿದ್ಧ ಎಂದು ಹೇಳಿಕೊಂಡಿದ್ದಾಳೆ. ತಮ್ಮ 14 ತಿಂಗಳ ಸ್ನೇಹದ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ 45 ಸೆಕೆಂಡುಗಳ ಕ್ಲಿಪ್‌ನಲ್ಲಿ ಅವರು ಒಟ್ಟಿಗೆ ಕಳೆದ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು ಜಾಕ್ಲಿನ್ ಫೊರೆರೊ ತಮ್ಮ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾಳೆ. “ನಾನು ಮೊದಲು ಚಂದನ್‌ಗೆ ಸಂದೇಶ ಕಳುಹಿಸಿದೆ. ಅವರ ದೇವಶಾಸ್ತ್ರದ ಬಗ್ಗೆ ಅಥವಾ ಆಧ್ಯಾತ್ಮಕತೆಯ ಬಗ್ಗೆ ಇರುವ ಒಲವು ತುಂಬಾ ಇಷ್ಟವಾಯಿತು. ಸಂಗೀತ, ಕಲೆ ಮತ್ತು ಛಾಯಾಗ್ರಹಣದೊಂದಿಗೆ 8 ತಿಂಗಳ ಸ್ನೇಹದ ಬಳಿಕ ನನ್ನ ಅಮ್ಮನ ಒಪ್ಪಿಗೆ ಪಡೆದು ಅವರ ಜತೆಗೆ ಜೀವನ ಕಳೆಯಬೇಕು” ಎಂಬ ಮನಸ್ಸಾಗಿದೆ ಎಂದು ಬರೆದುಕೊಂಡಿದ್ದಾಳೆ.