ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿಯೇ ಜೋಡಿಯಿಂದ ಅಶ್ಲೀಲ ರೊಮ್ಯಾನ್ಸ್: ಥೂ ಇದೆಂಥಾ ಅಸಹ್ಯ!
Saturday, April 12, 2025
ಬೆಂಗಳೂರು: ಇಲ್ಲಿನ ಮೆಟ್ರೋ ನಿಲ್ದಾಣದಲ್ಲಿಯೇ ಜೋಡಿಯೊಂದು ಅಶ್ಲೀಲ ರೀತಿಯಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.
ಅಕ್ಕಪಕ್ಕದಲ್ಲಿಯೇ ಪ್ರಯಾಣಿಕರು ನಿಂತಿದ್ದರೂ ಕ್ಯಾರೆ ಎನ್ನದೆ ಯುವ ಜೋಡಿಯೊಂದು ರೋಮಾನ್ಸ್ ಮಾಡುತ್ತಿರುವ ದೃಶ್ಯ ಸೋಶಿಯಲ್‌ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕ ಯಾವುದೇ ನಾಚಿಕೆಯಿಲ್ಲದೆ ಮೆಟ್ರೋ ನಿಲ್ದಾಣದಲ್ಲಿಯೇ ಯುವತಿಯ ಮೇಲು ಉಡುಪಿನ ಒಳಗಡೆ ಕೈಬಿಟ್ಟು ಆಕೆಯ ಖಾಸಗಿ ಭಾಗವನ್ನು ಸ್ಪರ್ಶಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಜೋಡಿಯ ರೊಮ್ಯಾನ್ಸ್ ವೀಡಿಯೋ ಭಾರೀ ವೈರಲ್ ಆಗಿದೆ. 1 ನಿಮಿಷ 30 ಸೆಕಂಡ್ ವಿಡಿಯೋ ಇದಾಗಿದ್ದು, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಫ್ಲ್ಯಾಟ್ ಫಾರ್ಮ್ -3ಯಲ್ಲಿ ನಡೆದ ಘಟನೆ ಅನ್ನೋ ಮಾಹಿತಿ ದೊರಕಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಪ್ರಾರಂಭವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್ ಸಿಬ್ಬಂದಿ ಸಿಸಿ ಕ್ಯಾಮೆರಾಗಳ ಮೂಲಕ ಜೋಡಿಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.
ಕೆಲ ಮೂಲಗಳ ಪ್ರಕಾರ ಶುಕ್ರವಾರ ಈ ಅನುಚಿತ ವರ್ತನೆಯ ಬಗ್ಗೆ ಯಾವುದೇ ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಎರಡರಿಂದ ಮೂರು ದಿನಗಳ ಹಿಂದಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಎಚ್ಚೆತ್ತ ಸಿಬ್ಬಂದಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿಲು ಮುಂದಾಗಿದ್ದಾರೆ.